ಹುಲ್ಲಿನ ಹೊರೆಗೆ ಬೆಂಕಿ, ಕಸದ ವಿಷಯಕ್ಕೆ ಕೊಲೆ ಬೆದರಿಕೆ | ಕೊಲ್ಲೂರಿಗೆ ಹೋದವರು ನಾಪತ್ತೆ | ಶಿವಮೊಗ್ಗದಲ್ಲಿ ಏನೆಲ್ಲಾ ಆಯ್ತು?
shivamogga short news
SHIVAMOGGA | MALENADUTODAY NEWS | ಮಲೆನಾಡು ಟುಡೆ Dec 31, 2024
ಹೊಸನಗರ ತಾಲ್ಲೂಕಿನ ಕಚ್ಚಿಗೆಬೈಲ್‌ನಲ್ಲಿ ಟ್ರ್ಯಾಕ್ಟರ್‌ನಲ್ಲಿ ಹುಲ್ಲಿನ ಹೊರೆಗಳನ್ನು ಸಾಗಿಸುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶವಾಗಿ ಬೆಂಕಿ ಅವಘಡ ಸಂಭವಿಸಿದೆ. ಕೃಷಿಕರೊಬ್ಬರು ತಮ್ಮ ಹೊಲದಿಂದ ಹುಲ್ಲಿನ ಹೊರೆಗಳನ್ನು ಟ್ರ್ಯಾಕ್ಟರ್ ಮೂಲಕ ಸಾಗಿಸುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಟ್ರ್ಯಾಕ್ಟರ್ ಮೇಲ್ಬಾಗದಲ್ಲಿದ್ದ ವಿದ್ಯುತ್ ವಯರ್ ಹುಲ್ಲಿಗೆ ತಾಗಿ ಬೆಂಕಿ ಹೊತ್ತಿಕೊಂಡಿದೆ. ಅದೃಷ್ಟಕ್ಕೆ ಟ್ರ್ಯಾಕ್ಟರ್ ಚಾಲಕ ಹಾಗೂ ಕೃಷಿಕ ಅಪಾಯದಿಂದ ಪಾರಾಗಿದ್ದಾರೆ. ಬೆಂಕಿ ಹೊತ್ತಿಕೊಂಡ ಹುಲ್ಲಿನ ಹೊರೆಗಳನ್ನ ತಕ್ಷಣವವೇ ಕೆಳಕ್ಕೆ ಬೀಳಿಸಿದ್ದರಿಂದ ದೊಡ್ಡ ಮಟ್ಟಗಿನ ಅಪಾಯ ತಪ್ಪಿದೆ.
ಶಿಕಾರಿಪುರದಲ್ಲಿ ಮಹಿಳೆ ಆತ್ಮಹತ್ಯೆ
ಇತ್ತ ಶಿಕಾರಿಪುರದಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಾಸಗಿ ಫೈನಾನ್ಸ್ ಗಳ ಕಿರುಕುಳದ ಹಿನ್ನಲೆಯಲ್ಲಿ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿಕಾರಿಪುರ ತಾಲೂಕು ಮಾರವಳ್ಳಿ ಗ್ರಾಮದಲ್ಲಿ ನಡೆದಿದೆ. ಪ್ರೇಮಾ ಎಂಬ 43 ವರ್ಷದ ಮಹಿಳೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಖಾಸಗಿ ಫೈನಾನ್ಸ್ ನವರ ಕಿರುಕುಳದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಲಾಗಿದೆ. ನಿನ್ನೆ ಸಂಜೆ ಸಾಲಕೊಟ್ಟ ಫೈನಾನ್ಸ್‌ನವರು ಮನೆಗೆ ಬಂದಿದ್ದ ವೇಳೆಯೇ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದ್ದು, ಈ ಸಂಬಂಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.
ಕೊಲ್ಲೂರಿಗೆ ಹೋಗುತ್ತೇನೆಂದು ಹೋದ ಮಹಿಳೆ ನಾಪತ್ತೆ
ಅತ್ತ ಸಾಗರ ತಾಲ್ಲೂಕು ಬ್ಯಾಕೋಡಿನಲ್ಲಿ ಕೊಲ್ಲೂರಿಗೆ ಹೋಗಿ ಬರುವುದಾಗಿ ಹೇಳಿ ಹೋದ ಮಹಿಳೆಯೊಬ್ಬರು ಇದುವರೆಗೂ ಪತ್ತೆಯಾಗಿಲ್ಲ. ಈ ಸಂಬಂದ ಅವರ ಪತಿ ಕಾರ್ಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕಾರ್ಗಲ್ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಳೆದ ಡಿಸೆಂಬರ್ 16 ರಂದು ನಾಪತ್ತೆಯಾದ ಮಹಿಳೆಯ ಕುರಿತಾಗಿ ಅವರ ಪತಿ ನೀಡಿರುವ ದೂರಿನನ್ವಯ ಕಾರ್ಗಲ್ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕಸ ಬಿಸಾಡಿದ್ದನ್ನ ಪ್ರಶ್ನೆ ಮಾಡಿದ್ದಕ್ಕೆ ಜೀವ ಬೆದರಿಕೆ
ಹೊಸನಗರದಲ್ಲಿ ಸಾರ್ವಜನಿಕ ಜಾಗದಲ್ಲಿ ಕಸಬಿಸಾಡಿದನ್ನ ಪ್ರಶ್ನಿಸಿದ್ದಕ್ಕೆ ಮಹಿಳೆ ಹಾಗೂ ಆಕೆಯ ಪತಿ ಜೀವ ಬೆದರಿಕೆ ಹಾಕಿರುವ ಘಟನೆಯೊಂದು ವರದಿಯಾಗಿದೆ. ಹೊಸನಗರದ ಕಾಳಿಕಾಪುರ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಘಟನೆಯಲ್ಲಿ ಯುವಕರೊಬ್ಬರು ಮಹಿಳೆ ಕಸ ಬಿಸಾಡುವುದನ್ನ ವಿಡಿಯೋ ಮಾಡಿ ಯಾಕೆ ಅಲ್ಲಿ ಬಿಸಾಡುತ್ತಿರಿ. ಇದರಿಂದಾಗಿ ಓಡಾಡುವುದು ಕಷ್ಟವಾಗುತ್ತದೆ ಎಂದಿದ್ದಕ್ಕೆ ಆತನ ಮೇಲೆಯೇ ಆಕೆ ಹಾಗೂ ಆಕೆಯ ಪತಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
SUMMARY | shivamogga short news
KEY WORDS | shivamogga short news