ಮುದ್ದೆ ಪಾರಾವ್ ಪೂಜೆ ಮುಗಿಯುತ್ತಿದ್ದಂತೆ ವರುಣನ ಅಬ್ಬರ! ಕಪಿಲೇಶ್ವರನ ಪವಾಡಕ್ಕೆ ಘಂಟೆ ಹೊಡೆದು ಕೈಮುಗಿದ ಭಕ್ತರು

Malenadu Today

KARNATAKA NEWS/ ONLINE / Malenadu today/ Jun 21, 2023 SHIVAMOGGA NEWS 

ಶಿವಮೊಗ್ಗ ಮಳೆಗಾಗಿ ಪೂಜೆ ಸಲ್ಲಿಸ್ತಿದ್ದ ಸಂದರ್ಭದಲ್ಲಿಯೇ ರಭಸದಿಂದ ಕೂಡಿದ ಮಳೆಯಾದ ಘಟನೆ ಇದೀಗ ಮಲೆನಾಡಿನಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಂದಹಾಗೆ ಈ ಘಟನೆ ನಡೆದಿರುವುದು ಮೇಲಿನ ಹನಸವಾಡಿ ಗ್ರಾಮದಲ್ಲಿ.ಇಲ್ಲಿನ ಗ್ರಾಮಸ್ಥರು  ಮಳೆಗಾಗಿ ಕಪಿಲೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ನಿಶ್ಚಯಿಸಿದ್ದಾರೆ. ನಿಗದಿಯಂತೆ ದೇವಾಲಯಕ್ಕೆ ಬಂದ ಗ್ರಾಮಸ್ಥರು ಭಜನೆ ಆರಂಭಿಸಿದ್ಧಾರೆ. ಬಳಿಕ ಮರುದಿನ ಬೆಳಿಗ್ಗೆ ಗಂಗಾಪೂಜೆ, ಅಭಿಷೇಕ ನಡೆದಿದೆ. 

ಮುದ್ದೆ ಪಾರಾವ್​ ಪೂಜೆ ವೇಳೆ ಬಂತು ಮಳೆ 

ಇನ್ನೂ ಮಲೆನಾಡು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮಳೆಗಾಗಿ ಪ್ರಾರ್ಥಿಸುವ ಮುದ್ದೆ ಪಾರಾವ್ ಎಂಬ ಆಚರಣೆಯನ್ನ ಮಾಡಲಾಗುತ್ತದೆ. ಮೇಲಿನ  ಹನಸವಾಡಿಯ ಗ್ರಾಮಸ್ಥರು ಈ ಪೂಜೆ ಕೈಗೊಂಡಿದ್ದರು. ದೇವಾಲಯದ ಬಳಿಯೇ ಮುದ್ದೆ ತಯಾರಿಸಿದ ಗ್ರಾಮಸ್ಥೆರು,  ದೇವರಿಗೆ ನೈವೇದ್ಯ ಅರ್ಪಿಸಿ, ಗ್ರಾಮಸ್ಥರೆಲ್ಲಾ ಊಟ ಮಾಡಿದ್ದಾರೆ. ಅದೇ ಸಂದರ್ಭದಲ್ಲಿ ವರುಣ  ಅಬ್ಬರಿಸಲು ಆರಂಭಿಸಿದ್ಧಾನೆ.  ಇದನ್ನ ಕಂಡ ಜನರು, ದೇವಾಲಯದ ಘಂಟೆ ಬಾರಿಸುತ್ತಾ ಮುಂಗಾರಿನ ಆರಂಭವನ್ನು ಸಂಭ್ರಮಿಸಿದರು. 

ಶಿವಮೊಗ್ಗಕ್ಕೆ ಅಂತಾ ಚಾಮರಾಜನಗರದಿಂದ ಬಂದಿದ್ದ ಯುವತಿಗೆ ಚಿಕ್ಕಮಗಳೂರಿನ ತರಿಕೆರೆಯಲ್ಲಿ ಎದುರಾಗಿತ್ತು ವಿದಿ! ಭೀಕರ ಘಟನೆಯಲ್ಲಿ ಬೈಕ್​ನಲ್ಲಿದ್ದ ಅಪರಿಚಿತರ ಸಾವು!

ಸ್ಮಾರ್ಟ್​ ಸಿಟಿಯಲ್ಲಿ ನೀರು ಹರಿಯಲ್ಲಿಲ್ಲ! ಸಣ್ಣ ಮಳೆಗೆ ನಲುಗಿದ ಶಿವಮೊಗ್ಗ! ಆಕ್ರೋಶ!

 

ಶಿವಮೊಗ್ಗದಲ್ಲಿ ನಿನ್ನೆ ಒಂದೇ ದಿನ ಬಿದ್ದ ಸಣ್ಣ ಮಳೆಗೇ ನಗರದ ತಗ್ಗುಪ್ರದೇಶಗಳಿಗೆ ನೀರು ನುಗ್ಗಿರುವುದು ಶಿವಮೊಗ್ಗ ಮಹಾನಗರ ಪಾಲಿಕೆ ಕೈಗೊಂಡ ಕಾಮಗಾರಿಗಳೆಲ್ಲಾ ಕಳಪೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಪಾಲಿಕೆಯ ಆಡಳಿತಾರೂಢ ಬಿಜೆಪಿ ಭ್ರಷ್ಟಾಚಾರದಲ್ಲಿ ತೊಡಗಿರುವುದು ಸಾಬೀತಾಗಿದೆ ಎಂದು ಶಿವಮೊಗ್ಗ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಂ ಪಾಶಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸ್ಮಾರ್ಟ್‍ಸಿಟಿ ಯೋಜನೆಯಡಿ  ಶಿವಮೊಗ್ಗ ನಗರದ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ಅನುದಾನ ಹರಿದು ಬಂದಿದೆ. ಯೋಜನೆಯ ಕಾಮಗಾರಿ ಪೂರ್ಣಗೊಳ್ಳುತ್ತಾ ಬಂದಿದ್ದು, ಯಾವುದೇ ಕಾಮಗಾರಿಯನ್ನು ವೈಜ್ಞಾನಿಕವಾಗಿ ನಡೆಸದೇ ಅವೈಜ್ಞಾನಿಕವಾಗಿ ಅರೆಬರೆಯಾಗಿ ನಡೆಸಲಾಗಿದೆ.

ಜನರಿಗೆ ತೊಂದರೆ

ಯುಜಿಡಿ, ಚರಂಡಿ ವ್ಯವಸ್ಥೆಯನ್ನು ಹಾಳುಮಾಡಲಾಗಿದೆ. ನಿನ್ನೆ ಬಿದ್ದ ಒಂದು ಸಣ್ಣ ಮಳೆಗೆ ತಗ್ಗುಪ್ರದೇಶಗಳಿಗೆ ನೀರು ನುಗ್ಗಿರುವುದನ್ನು ನೋಡಿದರೆ, ಪಾಲಿಕೆಯ ಬಿಜೆಪಿ ಆಡಳಿತ ಜನೋಪಯೋಗಿ ಕೆಲಸ ಮಾಡುವುದಕ್ಕಿಂತ ಜನರಿಗೆ ತೊಂದರೆ ಕೊಡಲೆಂದೇ ಸ್ಮಾರ್ಟ್‍ಸಿಟಿ ಕಾಮಗಾರಿಗಳನ್ನು ನಡೆಸಿದಂತಾಗಿದೆ ಎಂದು ದೂರಿದ್ದಾರೆ. 

ಸ್ಮಾರ್ಟ್‍ಸಿಟಿ ಕಾಮಗಾರಿಗಳಿಂದ ಜನರಿಗೆ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚು ಎಂದು ಕಾಂಗ್ರೆಸ್ ಹೇಳುತ್ತಲೇ ಬಂದಿತ್ತು. ವೈಜ್ಞಾನಿಕವಾಗಿ ಜನರಿಗೆ ಅನುಕೂಲವಾಗುವಂತೆ ಕಾಮಗಾರಿ ನಡೆಸಲು ಒತ್ತಾಯಿಸಿತ್ತು. ಆದರೆ, ಸ್ಮಾರ್ಟ್‍ಸಿಟಿ ಅಧಿಕಾರಿಗಳು, ಪಾಲಿಕೆ ಆಡಳಿತ ಜನರ ಹಿತ ಮರೆತು ಮನಸೋ ಇಚ್ಛೆ ಕಾಮಗಾರಿ ನಡೆಸಿರುವುದರಿಂದ ಜನತೆ ಈಗ ಸಂಕಷ್ಟ ಅನುಭವಿಸುವಂತಾಗಿದೆ. ಇನ್ನೂ ಮಳೆ ಆರಂಭವಾಗುವ ಮುನ್ನವೇ ಇಂತಹ ಅವಾಂತರಗಳಾದರೆ ಮುಂದಿನ ದಿನಗಳಲ್ಲಿ ಜನರ ಗತಿ ಏನು ಎಂದು ಅವರು ಪ್ರಶ್ನಿಸಿದ್ದಾರೆ.

ಕೂಡಲೇ ಪಾಲಿಕೆಯ ಆಡಳಿತಾರೂಢ ಬಿಜೆಪಿ ಎಚ್ಚೆತ್ತುಕೊಳ್ಳಬೇಕು. ಅವೈಜ್ಞಾನಿಕ ಕಾಮಗಾರಿ ನಡೆಸಿದವರ ವಿರುದ್ಧ ತನಿಖೆ ನಡೆಸಬೇಕು. ಇಲ್ಲವಾದರೆ ಮುಂದಿನ ಪಾಲಿಕೆಯ  ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ.


ಪುರುಷರೇ ಹುಷಾರ್! ಅನಾಥಳೆಂದು ಹೇಳಿ ಲಗ್ನವಾಗಿ ಯುವಕನಿಗೆ ಬೆದರಿಕೆ !7 ವರ್ಷಗಳ ನಂತರ ಬಯಲಾಯ್ತು 4 ಮಕ್ಕಳ ತಾಯಿ ಮದುವೆ. ಸಂಸಾರ, ಮೋಸ 

 

Share This Article