ಸಿನೆಮಾ ಶೈಲಿಯಲ್ಲಿ ಅಡಿಕೆ ಲೂಟಿ; ವ್ಯಾಪಾರಿ ಮೇಲೆ ಹಲ್ಲೆ ನಡೆಸಿ 44 ಕ್ವಿಂಟಾಲ್ ಅಡಿಕೆ ದೋಚಿದ ಖದೀಮರು

ನರಸಿಂಹರಾಜಪುರ : ಅಡಿಕೆ ರೇಟು ಏರುತ್ತಿರುವ ಬೆನ್ನಲ್ಲೇ  ಅಡಿಕೆ ಕಳುವು ಪ್ರಕರಣಗಳು ರಾಜ್ಯದಾಧ್ಯಂತ ಹೆಚ್ಚಾಗುತ್ತಿವೆ, ಅದರಲ್ಲೂ ಹಸಿ ಅಡಿಕೆ ಕಳ್ಳತನ  ಪ್ರಕರಣಗಳು ಹೆಚ್ಚುತ್ತಿದ್ದು, ನರಸಿಂಹರಾಜಪುರದ ಬಾಳೆ ಹೊನ್ನೂರಿನಲ್ಲಿ ದರೋಡೆಕೋರರು ಸುಮಾರು 44 ಕ್ವಿಂಟಾಲ್  ಅಡಿಕೆ ಅಡಿಕೆಯನ್ನು ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ.

ಶಿವಮೊಗ್ಗ ನಗರ ಪಾಲಿಕೆಯಲ್ಲಿ ಇ ಸ್ವತ್ತು ವಿತರಣೆ ತಾತ್ಕಾಲಿಕ ಸ್ಥಗಿತ! ಕಾರಣ ಇದೆ! ಪೂರ್ತಿ ವಿವರ ಓದಿ

ಹೌದು  ಬಾಳೆಹೊನ್ನೂರು ಮತ್ತು ನರಸಿಂಹರಾಜಪುರ ರಸ್ತೆಯ ಅಳೇಹಳ್ಳಿ ಗ್ರಾಮದ ಬಳಿ ನಡುರಾತ್ರಿ ದರೋಡೆ ನಡೆದಿದ್ದು, ದುಷ್ಕರ್ಮಿಗಳ ತಂಡವೊಂದು ಅಡಿಕೆ ವ್ಯಾಪಾರಿಯ ಮೇಲೆ ಹಲ್ಲೆ ನಡೆಸಿ ಲಕ್ಷಾಂತರ ರೂಪಾಯಿ ಮೌಲ್ಯದ ಹಸಿ ಅಡಿಕೆ ಹಾಗೂ ನಗದು ದೋಚಿದೆ. ಕಳಸ ತಾಲ್ಲೂಕಿನ ಹೆಮ್ಮಕ್ಕಿ ಗ್ರಾಮದ ನಿವಾಸಿ ಕೆ. ರವಿ ಎಂಬುವರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ.

Areca Nut Robbery ಪ್ರಕರಣದ ವಿವರ

ರವಿ ಅವರು ಕಾರ್‌ಗದ್ದೆಯ  ವ್ಯಕ್ತಿಯೊಬ್ಬರಿಂದ 67 ಚೀಲ ಹಸಿ ಅಡಿಕೆಯನ್ನು ಖರೀದಿಸಿ, ಚಾಲಕನೊಂದಿಗೆ ಪಿಕಪ್ ವಾಹನದಲ್ಲಿ ಭದ್ರಾವತಿ ಕಡೆಗೆ ತೆರಳುತ್ತಿದ್ದರು. ಇವರನ್ನು ಬಾಳೆಹೊನ್ನೂರಿನಿಂದಲೇ ಹಿಂಬಾಲಿಸಿಕೊಂಡು ಬಂದ ದರೋಡೆಕೋರರ ತಂಡ, ಅಳೇಹಳ್ಳಿ ಬಳಿ ವಾಹನವನ್ನು ಅಡ್ಡಗಟ್ಟಿದೆ. ಪಿಕಪ್ ಮತ್ತು ಬೈಕ್‌ನಲ್ಲಿ ಬಂದ ಐದಾರು ಮಂದಿ ತಂಡವು ಕಬ್ಬಿಣದ ಸಲಾಕೆ ಹಾಗೂ ಕತ್ತಿಗಳಿಂದ ದಾಳಿ ನಡೆಸಿ, ರವಿ ಅವರ ವಾಹನದ ಗಾಜು ಒಡೆದು ಒಳಗೆ ನುಗ್ಗಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದ ರವಿ ಅವರ ಮೇಲೆ ಹಲ್ಲೆ ನಡೆಸಿ, ಅವರ ಜೇಬಿನಲ್ಲಿದ್ದ 29 ಸಾವಿರ ರೂ. ನಗದು ಹಾಗೂ ಮೊಬೈಲ್ ಫೋನ್‌ಗಳನ್ನು ಕಸಿದುಕೊಂಡಿದ್ದಾರೆ. ಎಂದು ಆರೋಪಿಸಲಾಗಿದೆ

ಬಳಿಕ ದರೋಡೆಕೋರರು ರವಿ ಮತ್ತು ವಿಶ್ವಾಸ್ ಅವರ ಕೈಗಳನ್ನು ಕಟ್ಟಿ ಬೆದರಿಸಿ, ವಾಹನವನ್ನು ಕುದುರೆಗುಂಡಿಯ ಕಾಡುದಾರಿಯೊಂದಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ರವಿ ಅವರ ಪಿಕಪ್‌ನಲ್ಲಿದ್ದ 44 ಕ್ವಿಂಟಾಲ್ ಹಸಿ ಅಡಿಕೆಯನ್ನು ತಮ್ಮ ವಾಹನಕ್ಕೆ ವರ್ಗಾಯಿಸಿಕೊಂಡಿದ್ದಾರೆ. ಹಾಗೆಯೇ  ಸುಮಾರು ಒಂದು ಗಂಟೆಯ ನಂತರ ದರೋಡೆಕೋರರು ಸಂತ್ರಸ್ತರ ಕೈಗಳಲ್ಲಿದ್ದ ಬಂಧನ ಬಿಚ್ಚಿ, 200 ಮೀಟರ್ ದೂರದಲ್ಲಿ ಪಿಕಪ್ ವಾಹನ ಬಿಟ್ಟಿರುವುದಾಗಿ ಹೇಳಿ ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ.  ಎಂದು  ಆರೋಪಿಸಲಾಗಿದೆ. 

Areca Nut Robbery in NR Pura 

Areca Nut Robbery in NR Pura 
Areca Nut Robbery in NR Pura