HAL ನಲ್ಲಿ  ಉದ್ಯೋಗಾವಕಾಶ : ಯಾರೆಲ್ಲಾ ಅರ್ಜಿ ಸಲ್ಲಿಸಬಹುದು, ಇಲ್ಲಿದೆ ನೋಡಿ ಮಾಹಿತಿ

prathapa thirthahalli
Prathapa thirthahalli - content producer

HAL Recruitment  ಶಿವಮೊಗ್ಗ, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಬೆಂಗಳೂರು ಇಲ್ಲಿ ಸೆಕ್ಯೂರಿಟಿ ಗಾರ್ಡ್ ಮತ್ತು ಫೈಮೆನ್ ಹುದ್ದೆಗಳಿಗೆ ನಾಲ್ಕು ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.

ನಿಮ್ಮಲ್ಲಿಗೂ ಬಂದಿದ್ರಾ!? ಶಿವಮೊಗ್ಗದಲ್ಲಿ ನಕಲಿ ಅಧಿಕಾರಿಗಳ ಓಡಾಟ! ದಯವಿಟ್ಟು ಈ ನಂಬರ್​ ಇಟ್ಕೊಳ್ಳಿ!

ನೇಮಕಾತಿಯು ದೈಹಿಕ ಪರೀಕ್ಷೆ ಮತ್ತು ಲಿಖಿತ ಪರೀಕ್ಷೆಗಳ ಮೆರಿಟ್ ಆಧಾರದಲ್ಲಿ ನಡೆಯುವುದು. ಆಯ್ಕೆಯಾದವರು ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಆಯ್ಕೆಯಾದವರಿಗೆ 21000/- ರೂ.ಗಳ ಮೂಲ ವೇತನವಿದ್ದು, ತುಟ್ಟಿ ಭತ್ಯೆ ಹಾಗೂ ಇತರೆ ಭತ್ಯೆಗಳು ಕೂಡ ಲಭ್ಯವಿದೆ. 

ಆಸಕ್ತ ಮಾಜಿಸೈನಿಕರು ನಿಗದಿತ ನಮೂನೆಯ ಅರ್ಜಿಯನ್ನು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಇಲ್ಲಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಡಿ 26 ರೊಳಗೆ ಸಲ್ಲಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 08182-220925 ಯನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ.

HAL Recruitment Security Guard and Fireman Jobs

HAL Recruitment Guest Teacher Jobs  Guest Teacher Jobs arnataka Grameena Bank Recruitment 2025SBI Recruitment job news Assistant Technical Manager contract jobs Shivamogga Job in Shivamogga (ATMA Project) | Apply by July 21, 2025
job news
Share This Article