Food Safety Officers ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ಶಿವಮೊಗ್ಗ ನಾಗರಿಕರ ಗಮನಕ್ಕೆ ಶಿವಮೊಗ್ಗ ಆಡಳಿತ ವ್ಯವಸ್ಥೆಯು ಮಹತ್ವದ ಎಚ್ಚರಿಕೆಯನ್ನ ನೀಡಿದೆ. ನಕಲಿ ಅಧಿಕಾರಿಗಳು ಶಿವಮೊಗ್ಗದಲ್ಲಿ ಓಡಾಡುತ್ತಿದ್ದು, ಈ ಸಂಬಂಧ ಯಾರಾದರೂ ಕಂಡು ಬಂದರೆ ಮಾಹಿತಿ ನೀಡುವಂತೆ ಕೋರಿದೆ.
ಕೆಲವು ವ್ಯಕ್ತಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಹಾರ ಸುರಕ್ಷತಾ ಅಧಿಕಾರಿಗಳೆಂದು ವಿಸಿಟಿಂಗ್ ಕಾರ್ಡ್ ಬಳಸಿ ಆಹಾರ ಮಳಿಗೆಗಳಿಗೆ ಭೇಟಿ ನೀಡಿ ಲೈಸೆನ್ಸ್ ತೋರಿಸುವಂತೆ, ತಪಾಸಣೆ ಮಾಡುವುದಾಗಿ, ಬೆದರಿಸಿ ಆಹಾರ ಉದ್ದಿಮೆದಾರರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ರೀತಿ ಮಾಡುವವರು ಕಂಡು ಬಂದಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ಅಂಕಿತಾಧಿಕಾರಿ ಜಿ.ಎಚ್. ಸತ್ಯನಾರಾಯಣ; 9008305426, ಆಹಾರ ಸುರಕ್ಷತಾ ಅಧಿಕಾರಿಗಳಾದ ಸೋಮೇಶ ಓಲೇಕಾರ-9901682320, ಟಿ.ಶಶಿಕುಮಾರ್ 9741505993 ಅವರನ್ನು ಸಂಪರ್ಕಿಸಿ ಮಾಹಿತಿ ನೀಡಲು ಕೋರಲಾಗಿದೆ. ವ್ಯಾಪಾರಸ್ಥರು, ಸಾರ್ವಜನಿಕರು ಈ ಬಗ್ಗೆ ಗಮನಹರಿಸುವುದು ಒಳ್ಳೆಯದು.

ಮಾಹಿತಿ ನೀಡಲು ಸಂಪರ್ಕಿಸಬೇಕಾದ ಅಧಿಕಾರಿಗಳು ಹಾಗೂ ದೂರವಾಣಿ ಸಂಖ್ಯೆ
- ಅಂಕಿತಾಧಿಕಾರಿ, ಜಿ.ಎಚ್. ಸತ್ಯನಾರಾಯಣ: 9008305426
- ಆಹಾರ ಸುರಕ್ಷತಾ ಅಧಿಕಾರಿ, ಸೋಮೇಶ ಓಲೇಕಾರ: 9901682320
- ಆಹಾರ ಸುರಕ್ಷತಾ ಅಧಿಕಾರಿ, ಟಿ. ಶಶಿಕುಮಾರ್: 9741505993
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!







