ಬೆಜ್ಜವಳ್ಳಿ : ಬೈಕ್-ಟ್ಯಾಂಕರ್ ನಡುವೆ ಭೀಕರ ಅಪಘಾತ: ಅರಣ್ಯ ಇಲಾಖೆ ನೌಕರ ಸ್ಥಳದಲ್ಲೇ ಸಾವು

ತೀರ್ಥಹಳ್ಳಿ : ಬೈಕ್​ ಹಾಗೂ ಡೀಸೆಲ್​ ಟ್ಯಾಂಕರ್​ ಲಾರಿ ನಡುವೆ ಡಿಕ್ಕಿ ಸಂಭವಿಸಿ ಬೈಕ್​ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಬೆಜ್ಜವಳ್ಳಿಯ ಸಂತೆ ಮಾರ್ಕೆಟ್​ ಬಳಿ ಸಂಭವಿಸಿದೆ. ಹನುಮಂತಪ್ಪ (59) ಮೃತ ದುರ್ದೈವಿ.

Malenadu Today

ಚಳ್ಳಕೆರೆ ಬಳಿ ಲಾರಿಗೆ ಕಾರು ಡಿಕ್ಕಿ! ಬಳ್ಳಾರಿಗೆ ಹೋಗುತ್ತಿದ್ದ ಶಿವಮೊಗ್ಗದ ಮೂವರಿಗೆ ಪೆಟ್ಟು! ಓರ್ವ ಸಾವು

ಮೃತ ಹನುಮಂತಪ್ಪನವರು ಅರಣ್ಯ ಇಲಾಖೆಯಲ್ಲಿ ಕ್ಷೇಮಾಭಿವೃದ್ಧಿ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದರು. ನಿನ್ನೆ (ಶುಕ್ರವಾರ) ಸಂಜೆ ಬೆಜ್ಜವಳ್ಳಿ ಸಮೀಪ ಬೈಕ್‌ನಲ್ಲಿ ರಸ್ತೆಯನ್ನು ದಾಟುತ್ತಿದ್ದಾಗ ಏಕಾಏಕಿ ಎದುರು ಬಂದ ಲಾರಿ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಹನಮಂತಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಾಹಿತಿ ತಿಳಿದ ಕೂಡಲೇ ಮಾಳೂರು ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ.

Accident Forest Department EmployeeDies On Spot

Malenadu Today