ಬೈಕ್​ ನಿಲ್ಲಿಸಿ ಫೋಟೋ ತೆಗೆಸಿಕೊಳ್ತಿದ್ದ ಯುವತಿ : ಚಾಕು ತೋರಿಸಿ ಯುವಕರು ಮಾಡಿದ್ದೇನು..?

ಹಂಚಿಕೊಳ್ಳಿ
WhatsApp Facebook X Telegram
Shimoga Chain Snatching SHIMOGA CHAIN SNATCHING  crime news Shivamogga Chain Snatching Shoes and Slippers theft Shivamogga crime news Shivamogga news today
SHIMOGA CHAIN SNATCHING  crime news Shivamogga Chain Snatching Shoes and Slippers theft Shivamogga crime news Shivamogga news today

Crime news : ಶಿವಮೊಗ್ಗ : ಪೋದಾರ್ ಶಾಲೆಯ ಹೊಸ ರಿಂಗ್ ರೋಡ್ ಫ್ಲೈಓವರ್ ಬಳಿ ಬೈಕ್ ನಿಲ್ಲಿಸಿ ಫೋಟೋ ತೆಗೆಸಿಕೊಳ್ಳುತ್ತಿದ್ದ ಯುವತಿ ಹಾಗೂ ಯುವಕನಿಗೆ ಚಾಕು ತೋರಿಸಿದ ಇಬ್ಬರು ದುಷ್ಕರ್ಮಿಗಳು ಬರೋಬ್ಬರಿ 30 ಗ್ರಾಂ ಚಿನ್ನಾಭರಣ ಮತ್ತು ಎರಡು ಮೊಬೈಲ್‌ಗಳನ್ನು ದೋಚಿರುವ ಘಟನೆ ವರದಿಯಾಗಿದೆ.

ಸಮುದ್ರದ ಅಲೆಯಲ್ಲಿ ಕೊಚ್ಚಿಹೋದ ಶಿವಮೊಗ್ಗದ ನಿವಾಸಿ! ನಡೆದಿದ್ದೇನು?

 ಇಬ್ಬರು ಸ್ನೇಹಿತರು ಕಾಲೇಜಿನ ಕ್ಯಾಂಪಸ್ ಸೆಲೆಕ್ಷನ್ ಮುಗಿಸಿ ಹಿಂತಿರುಗುತ್ತಿದ್ದರು. ಈ ವೇಳೆ, ಪೋದಾರ್ ಶಾಲೆಯ ಹೊಸ ರಿಂಗ್ ರೋಡ್ ಫ್ಲೈಓವರ್ ಸಮೀಪ ಯುವತಿ ಫೋಟೋ ತೆಗೆಯುವಂತೆ ಯುವಕನಿಗೆ ಕೇಳಿದ್ದಾರೆ.. ಹೀಗಾಗಿ, ಅವರು ಬೈಕ್ ನಿಲ್ಲಿಸಿ ಫೋಟೋ ತೆಗೆಸಿಕೊಳ್ಳುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ಏಕಾಏಕಿ  ದೂರುದಾರರನ್ನು ಬೆದರಿಸಿದ್ದಾರೆ. ಚಾಕು ತೋರಿಸಿ ಹಲ್ಲೆ ಮಾಡಲು ಯತ್ನಿಸಿ ಯುವಕನ  ಬಳಿಯಿದ್ದ ಸುಮಾರು 10 ಗ್ರಾಂ ತೂಕದ ಚಿನ್ನದ ಸರ ಮತ್ತು 41,000 ರೂಪಾಯಿ ಮೌಲ್ಯದ ಸ್ಯಾಮ್‌ಸಂಗ್ S23 ಮೊಬೈಲ್ ಅನ್ನು ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. 

ಹಾಗೆಯೇ ಯುವತಿಯ ಕುತ್ತಿಗೆಯಲ್ಲಿದ್ದ ಸುಮಾರು 20 ಗ್ರಾಂ ಚಿನ್ನದ ಸರ ಹಾಗೂ 20,000 ರೂಪಾಯಿ ಮೌಲ್ಯದ ಮೊಬೈಲ್ ಅನ್ನು ಬಲವಂತವಾಗಿ ಕಸಿದುಕೊಂಡಿದ್ದಾರೆ. ಚಿನ್ನ ಮತ್ತು ಮೊಬೈಲ್‌ಗಳನ್ನು ಕಸಿದ ಬಳಿಕವೂ, ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು, ಚಾಕು ತೋರಿಸಿ ಹೆದರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ದೂರುದಾರರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಸಲಾಗಿದೆ. ಈ ಘಟನೆ ಸಂಬಂಧ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Crime news  Knifepoint Robbery in Shivamogga 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor