ಶಿವಮೊಗ್ಗ : ಮದ್ಯಪಾನ ಮಾಡಿ ಮನಸ್ತಾಪದಿಂದ ಮನೆಬಿಟ್ಟು ಹೋದ ವ್ಯಕ್ತಿ; ಮಾಹಿತಿ ನೀಡಲು ಮನವಿ

ಹಂಚಿಕೊಳ್ಳಿ
WhatsApp Facebook X Telegram
ವ್ಯಕ್ತಿ ಕಾಣೆ
ವ್ಯಕ್ತಿ ಕಾಣೆ

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ :  ಶಿವಮೊಗ್ಗ ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದ  32 ವರ್ಷದ ಪರಶುರಾಮ್ಎಂಬ ವ್ಯಕ್ತಿ ಸೆ.14 ರಂದು ಅತಿಯಾದ ಮದ್ಯಪಾನ ಮಾಡಿ ಮನೆಯಲ್ಲಿ ಮನಸ್ತಾಪ ಮಾಡಿಕೊಂಡು ಹೊರಗೆ ಹೋಗಿದ್ದು, ಕಾಣೆಯಾಗಿದ್ದಾರೆ. 

ಈತನ ಚಹರೆ ನೊಡುವುದಾದರೆ 5.10 ಅಡಿ ಎತ್ತರ, ಕೋಲುಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ ಮಾತನಾಡುತ್ತಾರೆ. ಮನೆಯಿಂದ ಹೊರಗೆ ಹೋಗುವಾಗ ನೀಲಿ ಚೆಕ್ಸ್ ಶರ್ಟ್, ಕಾಕಿ ಪ್ಯಾಂಟ್ ಧರಿಸಿರುತ್ತಾರೆ.

ಈತನ ಬಗ್ಗೆ ಸುಳಿವು ಇದ್ದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ದೂ.ಸಂ.: 08182-261400/261418/ 9480803332/ 9480803350 ಅಥವಾ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 100 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ. 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor