ಶಿವಮೊಗ್ಗದಲ್ಲಿ ನಡೆದ ಎಲ್ಲ ಪ್ರಮುಖ ಸುದ್ದಿಗಳು ಇ-ಪೇಪರ್​​ನಲ್ಲಿ

ಹಂಚಿಕೊಳ್ಳಿ
WhatsApp Facebook X Telegram
ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ
ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಮಲೆನಾಡಿನ ಸಾಂಸ್ಕೃತಿಕ ವೈಭವದ ಸಂಕೇತವಾಗಿರುವ ಶಿವಮೊಗ್ಗ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿರುವ ಗಜಪಡೆಗೆ ಸಕ್ರೆಬೈಲು ಆನೆ ಬಿಡಾರದಲ್ಲಿ ಗುರುವಾರ ವಿಧ್ಯುಕ್ತವಾಗಿ ಚಾಲನೆ ನೀಡಿ ಆಹ್ವಾನಿಸಲಾಯಿತು.

ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಸಕ್ರೆಬೈಲಿನಲ್ಲಿ ಆನೆಗಳಿಗೆ ಹಣ್ಣು-ಹಂಪಲು ನೀಡಿ, ವಿಶೇಷ ಪೂಜೆ ಸಲ್ಲಿಸುವ ಮೂಲಕ ದಸರಾ ಗಜಪಡೆಯನ್ನು ಬರಮಾಡಿಕೊಂಡರು. ತಾಯಿ ಶ್ರೀ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯ ಅಂಬಾರಿಯನ್ನು ಹೊರಲಿರುವ ಆನೆ ಸೇರಿದಂತೆ ಸಂಪೂರ್ಣ ಗಜಪಡೆಗೆ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, “ಮಲೆನಾಡಿನ ಸಾಂಸ್ಕೃತಿಕ ಪರಂಪರೆಯಲ್ಲಿ ಗಜಪಡೆಗೆ ವಿಶೇಷ ಸ್ಥಾನವಿದೆ. ಜಂಬೂಸವಾರಿ ಮೆರವಣಿಗೆ ಯಾವುದೇ ಲೋಪವಿಲ್ಲದೆ ವೈಭವಯುತವಾಗಿ ಹಾಗೂ ಶಿಸ್ತುಬದ್ಧವಾಗಿ ನೆರವೇರಲಿ ಎಂದು ಪ್ರಾರ್ಥಿಸಲಾಗಿದೆ” ಎಂದರು. ಇದೇ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಮಾವುತರೊಂದಿಗೆ ಆನೆಗಳ ಆರೋಗ್ಯ ತಪಾಸಣೆ, ಪೌಷ್ಟಿಕ ಆಹಾರ ಪೂರೈಕೆ ಮತ್ತು ನಗರದಲ್ಲಿ ನಡೆಯಲಿರುವ ತಾಲೀಮು ಕುರಿತು ಚರ್ಚೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಡಿಎಸಿಎಫ್ ಪ್ರಸನ್ನಕೃಷ್ಣ ಪಟಗಾರ್, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್ ಸೇರಿದಂತೆ ಜನಪ್ರತಿನಿಧಿಗಳು, ಪಾಲಿಕೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪಿಡಿಎಫ್​ನಲ್ಲಿರುವ ಪ್ರಮುಖ ಸುದ್ದಿಗಳು

  1. ಆನ್‌ಲೈನ್ ಫ್ರೀ ಫೈರ್ ಗೇಮ್ ವಂಚನೆ: ₹4.11 ಲಕ್ಷ ಕಳೆದುಕೊಂಡು 13 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ!
    • ವಿವರ: ದಾವಣಗೆರೆಯಲ್ಲಿ ‘ಫ್ರೀ ಫೈರ್’ ಗೇಮ್ ಐಡಿ ನೀಡುವ ಹೆಸರಿನಲ್ಲಿ ಬೆದರಿಕೆಯೊಡ್ಡಿ ₹4.11 ಲಕ್ಷ ವಸೂಲಿ ಮಾಡಿದ್ದರಿಂದ ಮನನೊಂದ 13 ವರ್ಷದ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಗೇಮಿಂಗ್ ಅಡಿಕ್ಷನ್ ಮತ್ತು ವಂಚನೆ ಕುರಿತು ತನಿಖೆ ಆರಂಭವಾಗಿದೆ.
  2. ದುಂದುವೆಚ್ಚಕ್ಕೆ ಕಡಿವಾಣ: ಶಿಕಾರಿಪುರದ ಹರಗಿ ಗ್ರಾಮದಲ್ಲಿ ‘ಬೀಗರೂಟ’ ನಿಷೇಧಿಸಿ ಐತಿಹಾಸಿಕ ನಿರ್ಧಾರ!
    • ವಿವರ: ಮದುವೆ ನಂತರ ಮಾಡುವ ದುಬಾರಿ ‘ಬೀಗರೂಟ’ಕ್ಕೆ ಶಿಕಾರಿಪುರ ತಾಲೂಕಿನ ಹರಗಿ ಗ್ರಾಮಸ್ಥರು ಸಂಪೂರ್ಣ ನಿಷೇಧ ಹೇರಿದ್ದಾರೆ. ಊರಿನಲ್ಲಿ ಬೀಗರೂಟ ಹಾಕಿಸಿದರೆ ₹1 ಲಕ್ಷ ಹಾಗೂ ಬೇರೆ ಊರಿಗೆ ಹೋಗಿ ಊಟ ಮಾಡಿದರೆ ₹50 ಸಾವಿರ ದಂಡ ವಿಧಿಸಲು ನಿರ್ಧರಿಸುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದ್ದಾರೆ.
  3. ಆರನಳ್ಳಿಯಲ್ಲಿ 846 ವರ್ಷಗಳ ಹಳೆಯ ‘ತುರುಗೋಳ್ ಮತ್ತು ಪೆಣ್ಮುಯ್ಯಲ್’ ವೀರಗಲ್ಲು ಪತ್ತೆ!
    • ವಿವರ: ಶಿವಮೊಗ್ಗ ತಾಲೂಕಿನ ಆರನಳ್ಳಿ ಗ್ರಾಮದಲ್ಲಿ ಕ್ರಿ.ಶ. 1180ರ (ಶಕವರ್ಷ 1102) ಅಪರೂಪದ ವೀರಗಲ್ಲು ಪತ್ತೆಯಾಗಿದೆ. ಗ್ರಾಮದ ಮೇಲೆ ದಾಳಿ ನಡೆದಾಗ ದನಕರುಗಳನ್ನು ಮರಳಿ ತಂದು, ಸ್ತ್ರೀಯರ ಮಾನರಕ್ಷಣೆಗಾಗಿ ಹೋರಾಡಿ ವೀರಮರಣ ಹೊಂದಿದ ಚೌಡಶೆಟ್ಟಿ ಎಂಬ ವೀರನ ಸಾಹಸವನ್ನು ಈ ಶಾಸನ ದಾಖಲಿಸಿದೆ.
  4. ಸಾಗರ ಸಮೀಪ ಚಲಿಸುತ್ತಿದ್ದ ಖಾಸಗಿ ಬಸ್ ಸಂಪೂರ್ಣ ಭಸ್ಮ: 4 ಜನರು ಸುರಕ್ಷಿತ!
    • ವಿವರ: ಬೆಂಗಳೂರಿನಿಂದ ಸಾಗರಕ್ಕೆ ತೆರಳುತ್ತಿದ್ದ ‘ಕ್ರೀಮ್ ಲೈನ್’ ಖಾಸಗಿ ಬಸ್‌ನಲ್ಲಿ ಆನಂದಪುರ ಸಮೀಪದ ಮುಂಬಾಳು ಬಳಿ ಶಾರ್ಟ್ ಸರ್ಕ್ಯೂಟ್‌ನಿಂದ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಚಾಲಕನ ಸಮಯಪ್ರಜ್ಞೆಯಿಂದ ಬಸ್‌ನಲ್ಲಿದ್ದ ಪ್ರಯಾಣಿಕರು ತಕ್ಷಣ ಹೊರಬಂದಿದ್ದರಿಂದ ದೊಡ್ಡ ದುರಂತ ತಪ್ಪಿದ್ದು, ನಾಲ್ವರೂ ಸುರಕ್ಷಿತವಾಗಿ ಪಾರಾಗಿದ್ದಾರೆ.
  5. ಚಂದ್ರಗುತ್ತಿ ರೇಣುಕಾಂಬಾ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ₹35.07 ಲಕ್ಷ ಸಂಗ್ರಹ!
    • ವಿವರ: ಸೊರಬ ತಾಲೂಕಿನ ಪ್ರಸಿದ್ಧ ಚಂದ್ರಗುತ್ತಿ ಶ್ರೀ ರೇಣುಕಾಂಬಾ ದೇವಸ್ಥಾನದಲ್ಲಿ ನಡೆದ ನಾಲ್ಕು ತಿಂಗಳ ಕಾಣಿಕೆ ಹುಂಡಿ ಎಣಿಕೆಯಲ್ಲಿ ₹35,07,390 ಹಣ ಸಂಗ್ರಹವಾಗಿದೆ. ಜೂನ್ ತಿಂಗಳ ಎಣಿಕೆ ಹಣವನ್ನೂ ಸೇರಿಸಿದರೆ ಒಟ್ಟು ಸಂಗ್ರಹ ₹68.97 ಲಕ್ಷಕ್ಕೆ ತಲುಪಿದೆ.

ಈ ಮೇಲಿರುವ ಎಲ್ಲ ಸುದ್ದಿಗಳ ಸಂಪೂರ್ಣ ವಿವರ (ಇ-ಲಿಂಕ್​​​) ನಲ್ಲಿ

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor