SHIVAMOGGA | MALENADUTODAY NEWS | ಮಲೆನಾಡು ಟುಡೆ Jan 11, 2025
ಜ 14 ರಂದು ಬೆಜ್ಜವಳ್ಳಿಯಲ್ಲಿ ಮಕರ ಸಂಕ್ರಾಂತಿ ಮಹೋತ್ಸವ
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿ ಶ್ರೀ ಅಯ್ಯಪ್ಪ ಸ್ವಾಮಿ ಧಾರ್ಮಿಕ ದತ್ತಿ(ರಿ) ಕರ್ನಾಟಕದ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಜನವರಿ 14 ರಂದು ಮಕರ ಸಂಕ್ರಾಂತಿ ಮಹೋತ್ಸವ ಮತ್ತು ಶ್ರೀಗಳ ಪೀಠಾರೋಹಣದ ವರ್ಧಂತ್ಸ್ಯೋತ್ಸವ ಸಮಾರಂಭ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಡಾ.ವಿಶ್ವಸಂತೋಷ ಭಾರತೀ ಶ್ರೀಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇನ್ನು ಕಾರ್ಯಕ್ರಮದ ಉದ್ಘಾಟನೆಯನ್ನು ಶಿಕ್ಷಣ ಸಚಿವ ಮಧುಬಂಗಾರಪ್ಪ, ಅಧ್ಯಕ್ಷತೆ ಆರಗ ಜ್ಞಾನೇಂದ್ರ, ದಿವ್ಯ ಉಪಸ್ಥಿತಿ ಗೌರಿಗದ್ದೆ ವಿನಯ್ ಗುರೂಜಿ, ಮುಖ್ಯ ಅತಿಥಿಗಳಾಗಿ ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಶಾಸಕರಾರ ಚನ್ನಬಸಪ್ಪ, ಚಂದ್ರಪ್ಪ, ವಿಧಾನಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ.ಧನಂಜಯ್ ಸರ್ಜಿ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ಬಿಎಎಸ್‌ಎಸ್ ಅಧ್ಯಕ್ಷರಾದ ಶಬರೀಶ್ ಸ್ವಾಮಿ, ನಟ ದಿಗಂತ್, ಆಸ್ಟ್ರೇಲಿಯಾ ಅಯ್ಯಪ್ಪ ಸೇವಾ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ಶರ್ಮಾ, ಉದ್ಯಮಿ ಅಬ್ದುಲ್ ಮುಜೀಬ್ ಇವರಿಗೆ ಹರಿಹರ ಪೀಠ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ 2 | ಸುಗ್ಗಿ ಸಂಭ್ರಮ ಮತ್ತು ದೀಪದಾನ ಕಾರ್ಯಕ್ರಮ
ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜನವರಿ 13 ರಂದು ಬೆಳ್ಳಿಗೆ 10:30 ಕ್ಕೆ ಸುಗ್ಗಿ ಸಂಭ್ರಮ ಮತ್ತು ದೀಪದಾನ-2025 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮವನ್ನ ಪಾಲಿಕೆ ಸಹಾಯಕ ನಿರ್ದೇಶಕರಾದ ಸುಪ್ರಿಯ ಕೆ.ಆರ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನ ಜಿಲ್ಲಾ ಒಕ್ಕಳಿಗರ ಸಂಘದ ಅಧ್ಯಕ್ಷ ಬಿ.ಎ.ರಮೇಶ್ ಹೆಗ್ಡೆ ವಹಿಸಲಿದ್ದಾರೆ ಎಂದು ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಸುಗ್ಗಿ ಸಂಭ್ರಮದ ರಾಶಿ ಪೂಜೆ ಮತ್ತು ದೀಪದಾನ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

SUMMARY |Makar Sankranti on January 14th , Makar Sankranti Bejjavalli temple , Bejjavalli Sri Ayyappa Swamy temple, Bejjavalli Sabarimala Sri Ayyappa Swamy Temple, Shimoga District Thirthahalli Taluk Shimoga District
KEY WORDS | Makar Sankranti on January 14th , Makar Sankranti Bejjavalli temple , Bejjavalli Sri Ayyappa Swamy temple, Bejjavalli Sabarimala Sri Ayyappa Swamy Temple, Shimoga District, Thirthahalli Taluk Shimoga District