KARNATAKA NEWS/ ONLINE / Malenadu today/ May 1, 2023 GOOGLE NEWS
ಶಿಕಾರಿಪುರ/ ಶಿವಮೊಗ್ಗ ಇಲ್ಲಿನ ಅಂಬರಗೊಪ್ಪ ಶಾಂತಿವನ ಗ್ರಾಮಕ್ಕೆ ಬಂದಿದ್ದ ಚಿತ್ರದುರ್ಗದ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರನ್ನು ಅಲ್ಲಿನ ಗ್ರಾಮಸ್ಥರ ಗುಂಪೊಂದು ತಡೆದು ವಾಪಸ್ ಕಳುಹಿಸಿದ್ದಾರೆ ಎನ್ನಲಾದ ದೃಶ್ಯವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ದೃಶ್ಯದಲ್ಲಿ ಶ್ರೀಗಳು ಅಭ್ಯರ್ಥಿ ಪರವಾಗ ಮತ ಕೇಳು ಬಂದಿದ್ದಾರೆ ಎಂದು ಘೋಷಣೆ ಕೂಗುತ್ತಿದ್ಧಾರೆ ಎಂದು ದೂರಲಾಗಿದ್ದು, ಘಟನೆ ಸಂಬಂಧ ತೀವ್ರ ವಿರೋಧ ವ್ಯಕ್ತವಾಗಿದೆ.
ನಡೆದಿದ್ದೇನು?
ಶಿಕಾರಿಪುರದ ಅಂಬಾರಗೊಪ್ಪದ ಶಾಂತಿವನದಲ್ಲಿರುವ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರೊಬ್ಬರ ಮನೆಗೆ ಬೋವಿ ಸಮುದಾಯದ ಶ್ರೀಗಳು ತೆರಳಿದ್ದರು. ಈ ವೇಳೆ ಅವರ ಕಾರನ್ನು ತಡೆದ ಗುಂಪೊಂದು ಘೋಷಣೆಗಳನ್ನು ಕೂಗಿದೆ. ಇದೇ ವೇಳೆ ಶ್ರೀಗಳ ಕಾರಿನ ಚಾಲಕ ಮುನ್ನೆಚ್ಚರಿಕಾ ಕ್ರಮವಾಗಿ ಕಾರನ್ನ ಮುಂದಕ್ಕೆ ವೇಗವಾಗಿ ಚಲಿಸಿಕೊಂಡು ತೆರಳಿದ್ದಾರೆ.
ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ದೃಶ್ಯವು ವೈರಲ್ ಆಗಿದ್ದು, ಈ ಸಂಬಂಧ ಗುರುಪೀಠದ ಶ್ರೀಗಳು ಮಾದ್ಯಮವೊಂದಕ್ಕೆ ಸ್ಪಷ್ಟನೆಯನ್ನು ಸಹ ನೀಡಿದ್ಧಾರೆ. ಅಂಬಾರಗೊಪ್ಪ ಮಾರ್ಗದಲ್ಲಿ ಇರುವ ಭಕ್ತರ ಮನೆಗೆ ಹೋಗುವುದು ಮೊದಲಿನಿಂದಲೂ ವಾಡಿಕೆಯಾಗಿದ್ದು, ಹಾಗಾಗಿ ಅಲ್ಲಿಗೆ ಹೋಗಿದ್ದೆವು. ಈ ವೇಳೇ ಅಲ್ಲೊಂದು ಗುಂಪು ಕಾರನ್ನು ತಡೆದು ಕಲ್ಲು ತೂರಲು ಸಿದ್ಧತೆ ನಡೆಸಿತ್ತು. ಈ ವೇಳೆ ಚಾಲಕನು ಸಮಯಪ್ರಜ್ಞೆಯಿಂದ ವಾಹನ ಚಲಾಯಿಸಿದ್ದಾರೆ ಎಂದು ತಿಳಿಸಿದ್ದಾರೆ.
ಭೋವಿ ಸಮಾಜದ ತೀವ್ರ ವಿರೋಧ
ಇನ್ನೂ ನಡೆದ ಘಟನೆಗೆ ಬೋವಿಸ ಸಮಾಜದ ಮುಖಂಡರು ಸಹ ವಿರೋಧ ವ್ಯಕ್ತಪಡಿಸಿದ್ದು, ಪರಮಪೂಜ್ಯ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳ ಕಾರನ್ನು ಶಿಕಾರಿಪುರದ ಹೊರಹೊಲಯದಲ್ಲಿ ಅಡ್ಡಗಟ್ಟಿ ಹಲ್ಲೆ ಮಾಡಿರುವ ಕಿಡಿಗೇಡಿಗಳ ವಿರುದ್ದ ಇಡೀ ಭೋವಿ ಸಮಾಜ ತೀವ್ರವಾಗಿ ಖಂಡಿಸುತ್ತೇವೆ ಎಂದಿದೆ.
ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಗ್ರಾಮ ಸೇರಿದಂತೆ ಹಲವು ಗ್ರಾಮಗಳಲ್ಲಿ ಭೋವಿ ಸಮಾಜದ ಮುಖಂಡರ ಆಹ್ವಾನದ ಮೇರೆಗೆ, ಒಳಮೀಸಲಾತಿಯ ಬಗ್ಗೆ ಜನರಿಗಿರುವ ಗೊಂದಲದ ಬಗ್ಗೆ ಸೂಕ್ತ ಸ್ಪಷ್ಟೀಕರಣ ನೀಡಲು ಹಾಗೂ ಪ್ರತಿಯೊಬ್ಬರು ಮತದಾನದಲ್ಲಿ ಭಾಗವಹಿಸಿ ಮತದಾನ ಮಾಡುವಂತೆ ಇಮ್ಮಡಿ ಶ್ರೀಗಳು ಜಾಗೃತಿ ಮೂಡಿಸುತ್ತಿದ್ದಾರೆ. ಈ ಭೇಟಿ ಸಂದರ್ಭದಲ್ಲಿ ಗುಂಪೊಂದು ನಡೆಸಿದ ಕೃತ್ಯ ಖಂಡನೀಯ ಎಂದಿದೆ.
ಇದನ್ನ ಓದಿ/ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಶಿವಮೊಗ್ಗ ಕೋರ್ಟ್ ನೀಡಿತು ಭಾರೀ ಶಿಕ್ಷೆ
ಆಟೋ ಚಾಲಕನಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಡಿಐಜಿಪಿ ತ್ಯಾಗರಾಜನ್ ರಿಂದ ಸನ್ಮಾನ! ಕಾರಣವೇನು ?
ಶಿವಮೊಗ್ಗ ಶಿವಮೊಗ್ಗ ಪೊಲೀಸ್ ಇಲಾಖೆ ಆಟೋ ಡ್ರೈವರ್ ಒಬ್ಬರಿಗೆ ಕಚೇರಿಗೆ ಕರೆದು ಸನ್ಮಾನ ಮಾಡಿದೆ. ಆಟೋದಲ್ಲಿ ಪ್ರಯಾಣಿಕರೊಬ್ಬರು ಬಿಟ್ಟುಹೋಗಿದ್ದ ಬೆಲೆಬಾಳುವ ವಸ್ತುಗಳನ್ನ ಹಿಂತಿರುಗಿಸಿದ ಪ್ರಾಮಾಣಿಕತೆಗಾಗಿ ಅವರನ್ನ ಸನ್ಮಾನ ಮಾಡಲಾಗಿದೆ.
ಪ್ರಾಮಾಣಿಕತೆ ಮೆರೆದ ಚಾಲಕ
ದಿನಾಂಕಃ 30-04-2023 ರಂದು ಶಿವಮೊಗ್ಗ ಟೌನ್ ಬಸವೇಶ್ವರ ನಗರದ ವಾಸಿ ಶ್ರೀನಿವಾಸ ಗೌಡರವರ ಕಾರು ಶರಾವತಿ ನಗರದ ಬಳಿ ಕೆಟ್ಟುನಿಂತಿತ್ತು. ಹೀಗಾಗಿ , ಆಟೋದಲ್ಲಿ ಮನೆಗೆ ಹೊರಡಲು ಮುಂದಾಗಿದ್ದಾರೆ.
ಆ ಸಂದರ್ಭದಲ್ಲಿ ಆಟೋದ ಚಾಲಕ ಶ್ರೀನಿವಾಸ್ ಗೌಡರ ಕಾರನ್ನು ತಳ್ಳಿ ಸ್ಟಾರ್ಟ್ ಮಾಡಲು ಅನುವು ಮಾಡಿಕೊಟ್ಟಿದ್ದರು. ಆದರೆ, ಅಷ್ಟರಲ್ಲಿ ಶ್ರೀನಿವಾಸ್ ಗೌಡರವರು, ತಮ್ಮ ನಗದು ಹಣ, ಎಟಿಎಂ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಮತ್ತು ಅಡಿಕೆ ಮಂಡಿಯ ಕೀ ಇದ್ದ ತಮ್ಮ ಬ್ಯಾಗ್ ಅನ್ನು ಮರೆತು ಆಟೋದಲ್ಲಿಯೇ ಮರೆತು ಹೋಗಿದ್ದರು.
ಇದನ್ನ ಗಮನಿಸಿದ ಆಟೋ ಚಾಲಕ ಫೈರೋಜ್ ಖಾನ್, ಬ್ಯಾಗ್ನ್ನು ಪೊಲೀಸ್ ರಿಗೆ ತಂದು ಕೊಟ್ಟು ಅದರ ಮಾಲೀಕರಿಗೆ ಒಪ್ಪಿಸುವಂತೆ ಮನವಿ ಮಾಡಿದ್ದರು. ಅದರಂತೆ ಪೊಲೀಸರು ಬ್ಯಾಗ್ ಮತ್ತು ಅದರಲ್ಲಿದ್ದ ರೂ 22,000/- ನಗದು ಹಣ, ಎಟಿಎಂ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಮತ್ತು ಅಡಿಕೆ ಮಂಡಿಯ ಕೀ ಅನ್ನು ಮಾಲೀಕರಾದ ಶ್ರೀನಿವಾಸ್ ಗೌಡ ರವರಿಗೆ ಹಿಂದಿರುಗಿಸಿದ್ದಾರೆ. ಅಲ್ಲದೆ ಪ್ರಾಮಾಣಿಕತೆ ಮೆರೆದ ಆಟೋ ಚಾಲಕರಿಗೆ ಸನ್ಮಾನ ಮಾಡಿದ್ದಾರೆ.
ಇದನ್ನ ಓದಿ/ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಶಿವಮೊಗ್ಗ ಕೋರ್ಟ್ ನೀಡಿತು ಭಾರೀ ಶಿಕ್ಷೆ
ಈ ವೇಳೆ, ಜಿಲ್ಲಾ ಪೊಲೀಸ್ ಕಛೇರಿಯಲ್ಲಿ, ತ್ಯಾಗರಾಜನ್, ಐಪಿಎಸ್, ಮಾನ್ಯ ಡಿಐಜಿಪಿ, ಪೂರ್ವ ವಲಯ ದಾವಣಗೆರೆ ಮತ್ತು ಮಿಥುನ್ ಕುಮಾರ್ ಜಿ.ಕೆ, ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಅನಿಲ್ ಕುಮಾರ್ ಭುಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಮತ್ತು ಸತೀಶ ಕುಮಾರ ಕೆ.ವಿ, ಪೊಲೀಸ್ ನಿರೀಕ್ಷಕರು, ಜಿಲ್ಲಾ ನಿಸ್ತಂತು ವಿಭಾಗ, ಕಂಟ್ರೋಲ್ ರೂಂ ಶಿವಮೊಗ್ಗ ರವರು ಉಪಸ್ಥಿತರಿದ್ದರು.
ಕೊಟ್ಟಿಗೆಗೆ ನುಗ್ಗಿದ ಚಿರತೆ/ ಹೆಂಚು ತೆಗೆದು ಅರಣ್ಯ ಇಲಾಖೆ ರೋಚಕ ಕಾರ್ಯಾಚರಣೆ!
ಸೊರಬ/ ಶಿವಮೊಗ್ಗ ಇಲ್ಲಿನ ಕುಪ್ಪೆ ಗ್ರಾಮದ ಮನೆಯಯೊಂದರ ಕೊಟ್ಟಿಗೆಯಲ್ಲಿ ಚಿರತೆಯೊಂದು ಸೇರಿ ಆತಂಕ ಮೂಡಿಸಿತ್ತು. ಈ ಸಂಬಂಧ ತಕ್ಷಣ ಕಾರ್ಯಾಚರಣೆಗೆ ಇಳಿದ ಅರಣ್ಯ ಸಿಬ್ಬಂದಿ ಚಿರತೆಯನ್ನು ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ.
ಗ್ರಾಮದ ಶಿವಕುಮಾರ್ ಗೌಡ ಎಂಬುವವರ ಮನೆಯ ಕೊಟ್ಟಿಗೆಯಲ್ಲಿ ಚಿರತೆ ಸೇರಿಕೊಂಡಿತ್ತು. ಚಿರತೆಯ ಇರುವಿಕಯನ್ನು ಗಮನಿಸಿದ ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತರಾದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಇದನ್ನ ಓದಿ/ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಶಿವಮೊಗ್ಗ ಕೋರ್ಟ್ ನೀಡಿತು ಭಾರೀ ಶಿಕ್ಷೆ
ಒಂದು ಗಂಟೆಗೂ ಅಧಿಕ ಕಾಲ ಕಾರ್ಯಚರಣೆ ನಡೆಸಿದ ಅರಣ್ಯ ಸಿಬ್ಬಂದಿ, ಕೊಟ್ಟಿಗೆಯ ಹಂಚು ತೆಗೆದು ಅದರ ಮೂಲಕ ಚಿರತೆಗೆ ಅರವಳಿಕೆ ಚುಚ್ಚುಮದ್ದನ್ನು ಡಾರ್ಟ್ ಮಾಡಿದರು, ಆನಂತರ ಚಿರತೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಹಂಪೆಯ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ಕಳುಹಿಸಿಕೊಡಲಾಗಿದೆ.
