ಅಡ್ವಾನ್ಸ್ ಅಮೌಂಟ್​ ಗಾಗಿ ಲಿಂಕ್ ಕ್ಲಿಕ್ ಮಾಡಿದ ಡಾಕ್ಟರ್​ಗೆ ಎದುರಾಯ್ತು ಲಕ್ಷ ರೂಪಾಯಿ ಶಾಕ್!

SHIVAMOGGA  |  Jan 17, 2024  |   ನಿಮ್ಮ ಮೊಬೈಲ್​ಗೆ ಬರುವ ಕರೆಗಳೆಲ್ಲವನ್ನೂ ನಂಬುವುದಕ್ಕೆ ಹೋಗಬೇಡಿ. ಏಕೆಂದರೆ ತಮ್ಮನ್ನ ವಿಶೇಷವಾಗಿ ಪರಿಚಯಿಸಿಕೊಳ್ಳುವ ಅಪರಿಚಿತ ಕಾಲ್​ಗಳಿಂದ ನಿಮಗೆ ದೋಖಾ ಆಗಬಹುದು. ಇದಕ್ಕೆ ಸಾಕ್ಷಿ ಎಂಬಂತಹ ಪ್ರಕರಣವೊಂದು ಶಿವಮೊಗ್ಗದಲ್ಲಿ ನಡೆದಿದೆ. 

ಶಿವಮೊಗ್ಗ ಸಿಇಎನ್ ಪೊಲೀಸ್ ಸ್ಟೇಷನ್

ವಿಚಿತ್ರ ಅಂದರೆ ಮೋಸಕ್ಕೆ ಹೊಸ ಹೊಸ ಲಿಂಕ್​ಗಳು ತಯಾರಾಗುತ್ತಿವೆ. ಡಿಜಿಟಲ್ ಜಮಾನಾದಲ್ಲಿ ಸೈಬರ್ ಕ್ರೈಂಗಳು ಮತ್ತಷ್ಟು ಚೂಪಾಗುತ್ತಿವೆ. ಹಾಗಾಗಿಯೇ ಜನರಿಗೆ ಹುಷಾರಾಗಿರಿ ಎನ್ನುತ್ತಿದ್ದ್ದೇವೆ.. ಮೋಸ ಹೋಗಿ ಮನಸ್ಸಿಗೆ ನೋವು ಮಾಡಿಕೊಂಡರೆ ಅಕೌಂಟ್​ನಲ್ಲಿ ಖಾಲಿಯಾದ ದುಡ್ಡು ವಾಪಸ್ ಬರುವುದಿಲ್ಲ. ಹಾಗಾಗಿ ಎಚ್ಚರಿಕೆಯೇ ಅಕೌಂಟ್​ ಸೇಪ್ಟಿಯ ದಾರಿಯಾಗಿದೆ. 

ಗೂಗಲ್ ಪೇ ಮೂಲಕ ದೋಖಾ

ವಿಷಯಕ್ಕೆ ಬಂದರೆ, ಈ ಪ್ರಕರಣದಲ್ಲಿ ಶಿವಮೊಗ್ಗದ ವೈದ್ಯರೊಬ್ಬರಿಗೆ ಕರೆ ಮಾಡಿದ್ದ ಮಿಲಟರಿ ಅಧಿಕಾರಿ ಎಂದು ಹೇಳಿಕೊಂಡ ವ್ಯಕ್ತಿಯು ಬರೋಬ್ಬರಿ ಸುಮಾರು ಒಂದು ಲಕ್ಷ ರೂಪಾಯಿ ಮೋಸಮಾಡಿದ್ದಾನೆ.  ಗೂಗಲ್ ಪೇ  ಮೂಲಕ ವೈದ್ಯರಿಂದಲೇ ಅಮೌಂಟ್ ನಮೂದಿಸಿಕೊಂಡು ತನ್ನ ಖಾತೆಗೆ ದುಡ್ಡುಹಾಕಿಸಿಕೊಂಡಿದ್ದಾನೆ. ದುಡ್ಡು ಖಾಲಿಯಾದ ಮೇಲೆಷ್ಟೆ ವೈದ್ಯರಿಗೆ ಮೋಸ ಹೋಗಿದ್ದು ಅರಿವಿಗೆ ಬಂದಿದೆ. 

ಕ್ಲಿಕ್ ಮಾಡಿದ್ರೆ ಅಕೌಂಟ್ ಖಾಲಿ

ಇಷ್ಟಕ್ಕೂ ನಡೆದಿದ್ದು ಇಷ್ಟು . ಶಿವಮೊಗ್ಗದವರು ವೈದ್ಯರು. ಮನೆ ಖಾಲಿಯಿದ್ದು ಬಾಡಿಗೆ ನೀಡುವ ಸಂಬಂಧ ಜಾಹಿರಾತೊಂದನ್ನ ನೀಡಿದ್ದರು. ಅದರಲ್ಲಿ ನೀಡಿದ್ದ ನಂಬರ್​ವೊಂದಕ್ಕೆ ಅಪರಿಚಿತ ಕರೆ ಬಂದಿದೆ. ಫೋನ್ ಮಾಡಿದ ಪುಣ್ಯಾತ್ಮ ತನ್ನನ್ನ ಮಿಲಿಟರಿ ಅಧಿಕಾರಿ ಎಂದು ಹೇಳಿದ್ದಾನೆ. ಅಲ್ಲದೆ ಶಿವಮೊಗ್ಗಕ್ಕೆ ಟ್ರಾನ್ಸಫರ್ ಆಗಿದೆ ಎಂದಿದ್ದಾರೆ. ಶಿವಮೊಗ್ಗದಲ್ಲಿ ಅದ್ಯಾವ ಮಿಲಿಟರಿ ಬೆಟಾಲಿಯನ್ ಇದೆಯೋ ದೇವರೆ ಬಲ್ಲ. ಆದರೂ ಶಿವಮೊಗ್ಗಕ್ಕೆ ವರ್ಗಾವಣೆ ಎಂದ ಕರೆಗಾರ ಅಡ್ಸಾನ್ಸ್ ಹಣ ಕಳಿಸ್ತಿನಿ ಗೂಗಲ್ ಪೇ ಓಪನ್​ ಮಾಡಿಟ್ಟುಕೊಳ್ಳಿ ಎಂದಿದ್ಧಾನೆ. 

ವೈದ್ಯರು ಇರಬಹುದು ಎಂದು ಗೂಗಲ್ ಪೇ ಓಪನ್ ಮಾಡಿಟ್ಟುಕೊಂಡಿದ್ದಾರೆ. ಆ ತಕ್ಷಣ ಅದಕ್ಕೊಂದು ಲಿಂಕ್ ಬಂದಿದೆ. ಅದರ ಮೇಲೆ ಕ್ಲಿಕ್ ಮಾಡಿದ ಬಳಿ ಹಿಂದೆ ಕರೆ ಮಾಡಿದ್ದವ ಮತ್ತೆ ಕಾಲ್ ಮಾಡಿ ನೀವೇ ಅಮೌಂಟ್ ನಮೂದು ಮಾಡಿ. ಇಲ್ಲಿ ಟ್ರಾನ್ಸಫರ್ ಲೇಟಾಗ್ತಿದೆ ಎಂದಿದ್ದಾನೆ. ಅದನ್ನು ನಂಬಿ ಕ್ಲಿಕ್ ಮಾಡಿದ ಲಿಂಕ್​​ನಲ್ಲಿ ಅಮೌಂಟ್​ ನಮೂದಿಸಿದ್ದ ವೈದ್ಯರಿಗೆ ಅಂತಿಮವಾಗಿ ಅಕೌಂಟ್​ನಲ್ಲಿ  95,999 ರೂಪಾಯಿ ಮೋಸವಾಗಿತ್ತು. ಸದ್ಯ ಈ ಸಂಬಂಧ ಸೈಬರ್​ ಕ್ರೈಂ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.  


Leave a Comment