ಮೆಸ್ಕಾಂ ಟ್ರಾನ್ಸ್​ಫಾರಮ್​ ಬಳಿ ಶಾಕ್! ಅಪಾಯದ ಎಚ್ಚರಿಕೆ ನೀಡಿ ಬಲಿಯಾಯ್ತು ಮೂಕ ಜೀವ!

Malenadu Today

KARNATAKA NEWS/ ONLINE / Malenadu today/ Jul 16, 2023 SHIVAMOGGA NEWS

ಸೊರಬ: ಟ್ರಾನ್ಸ್ ಫಾರ್ಮರ್ ಬಳಿ ಮೇಯುತ್ತಿದ್ದ ಹಸುವೊಂದು ವಿದ್ಯುತ್ ಸ್ಪರ್ಶದಿಂದ  ಸಾವನ್ನಪ್ಪಿರುವ ಘಟನೆ ಸೊರಬ ಪಟ್ಟಣದ ಮರೂರು ರಸ್ತೆಯಲ್ಲಿ ಸಂಭವಿಸಿದೆ. ಚಾಮರಾಜಪೇಟೆಯ ನಾಗರಾಜಗೌಳಿ ಎಂಬುವವರಿಗೆ ಸೇರಿದ ಹಸುವಾಗಿದ್ದು, ಶನಿವಾರ ಮೇಯಲು ಹೋದ ಹಸು ಮನೆಗೆ ಬಂದಿರಲಿಲ್ಲ. ಹೀಗಾಗಿ ಹುಡುಕಾಟ ನಡೆಸಿದಾಗ, ಟ್ರಾನ್ಸ್​ಫಾರಮ್​ ಬಳಿ ಸಾವನ್ನಪ್ಪಿರುವ ವಿಚಾರ ಗೊತ್ತಾಗಿದೆ. 

ಮೆಸ್ಕಾಂ ವಿರುದ್ಧ ಆಕ್ರೋಶ

ಟ್ರಾನ್ಸ್​ಫಾರಮ್​ ಅಳವಡಿಸಿದ ಮೆಸ್ಕಾಂ ಅದರ ಸುತ್ತಲು ರಕ್ಷಣಾ ಬೇಲಿಯನ್ನು ಅಳವಡಿಸಿಲ್ಲ. ಇದೇ ಘಟನೆಗೆ ಕಾರಣ ಎಂದು ಸ್ತಳೀಯರು ಆರೋಪಿಸಿದ್ದಾರೆ. ಅಲ್ಲದೆ ಹಸುವಿನ ಸಾವಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಒಂದು ಲಕ್ಷ ರೂಪಾಯಿ ಮೌಲ್ಯದ ಹಸು, ದಿನ 15 ಲೀಟರ್ ಹಾಲು ಕೊಡುತ್ತಿತ್ತು ಎಂದು ಅದರ ಮಾಲೀಕರು ಹೇಳಿದ್ದಾರೆ. ಇನ್ನೂ ಟ್ರಾನ್ಸ್​ಫಾರಮ್​ನ ಇರುವ ಜಾಗದಲ್ಲಿ ನಿತ್ಯ ಹಲವರು ಓಡಾಡುತ್ತಾರೆ. ಹೀಗಾಗಿ ಯಾವಾಗ ಬೇಕಾದರೂ ಅಪಾಯ ಸಂಭವಿಸಬಹುದು. ಇನ್ನಾದರೂ ಮೆಸ್ಕಾಂ ಎಚ್ಚೆತ್ತುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.


ನಮ್ಮ ಹತ್ರ ಬೇಡ! ಕಿಚ್ಚ ಸುದೀಪ್​ ರವರ ಪರವಾಗಿ ಶಿವಮೊಗ್ಗದಲ್ಲಿ ಅಭಿಮಾನಿಗಳ ವಾರ್ನಿಂಗ್!

ನಟ ಕಿಚ್ಚ ಸುದೀಪ್​ (kichaha sudeepa)  ಪರವಾಗಿ ಶಿವಮೊಗ್ಗ ನಗರದಲ್ಲಿ ಇವತ್ತು ಅವರ ಅಭಿಮಾನಿಗಳು ಪ್ರತಿಭಟನೆ ನಡೆಸಿದರು.. ಸುದೀಪ್​ರವರು ತಮ್ಮ ಬಳಿ ಅಡ್ವಾನ್ಸ್​ ಪಡೆದು ಕಾಲ್‌ಶೀಟ್‌ ಕೊಡದೆ ಸತಾಯಿಸುತ್ತಿದ್ದಾರೆ ಎಂದು ಇತ್ತೀಚೆಗಷ್ಟೆ  ನಿರ್ಮಾಪಕ ಕುಮಾರ್‌ ಆರೋಪಿಸಿದ್ದರು. ಅಲ್ಲದೆ ಈ ಸಂಬಂಧ ಸಾಲು ಸಾಲು  ಸುದ್ದಿಗೋಷ್ಠಿ ನಡೆಸಿದ್ದರು. ಆನಂತರ  ವಾಣಿಜ್ಯ ಮಂಡಳಿ ಮೆಟ್ಟಿಲೇರಿದ್ದರು.

ಈ ಸಂಬಂಧ ಕೋರ್ಟ್ ಮೆಟ್ಟಿಲೇರಿದ್ದ ಸುದೀಪ್​ 10 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮ್ಮೆ ಹೂಡಿದ್ದರು. ಅಲ್ಲದೆ ಕೋರ್ಟ್​ ಬಳಿಯಲ್ಲಿ ಮಾತನಾಡಿದ್ದ ಸುದೀಪ್​, ನಾನು ತಪ್ಪು ಮಾಡಿಲ್ಲ. ಹಾಗೊಂದು ವೇಳೆ ಮಾಡಿದ್ದರೇ ಅದಕ್ಕೆ ಕೋರ್ಟ್​ ನಲ್ಲಿ ದಂಡ ಕಟ್ಟುತ್ತೇನೆ ಎಂದಿದ್ದರು. ಇದಕ್ಕೂ ಮೊದಲು ಭಾವುಕರಾಗಿ ಪತ್ರವೊಂದನ್ನ ಬರೆದಿದ್ದರು. ಈ ಎಲ್ಲಾ ಬೆಳವಣಿಗೆಳ ಬೆನ್ನಲ್ಲೆ ಇವತ್ತು ಸುದೀಪ್​ರವರ ಪರವಾಗಿ ಶಿವಮೊಗ್ಗದಲ್ಲಿ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ. ಕೇಸರಿ ಶಾಲುಗಳ ಜೊತೆಯಲ್ಲಿ ಕಣ ಕಣದಲ್ಲಿಯು ಕಿಚ್ಚ ಎಂದು ಘೋಷಣೆ ಕೂಗಿದ ಅಭಿಮಾನಿಗಳು, ನಟನ ವಿರುದ್ಧವಾಗಿ ನಡೆಯುತ್ತಿರುವ ಅಪಪ್ರಚಾರವನ್ನು ನಿಲ್ಲಿಸುವಂತೆ ಎಚ್ಚರಿಸಿದ್ದಾರೆ. 


ಅಪ್ಪುರವರು 50 ಡಿಪ್ಸ್​ ಹೊಡೆದ ಈ ಜಾಗ ಯಾವುದು ಗೊತ್ತಾ? ಗೆಸ್ ಮಾಡಿ! ವೈರಲ್​ ಆಗ್ತಿದೆ ಪುನೀತ್​ರ ಹಳೆಯ ವಿಡಿಯೋ!

 

 

Share This Article