ಒಂದು ಕಳ್ಳತನದ ಕೇಸ್​! ಮೂವರು ಪೊಲೀಸರ ಸಸ್ಪೆಂಡ್! ಸಹೋದ್ಯೋಗಿಗಳ ವಿರುದ್ಧವೇ ಪೇದೆ ಸ್ಕೆಚ್​ ನಿಜನಾ? ನಡೆದಿದ್ದೇನು?

A case of theft! Three policemen suspended! What happened at Mudigere police station in Chikkamagaluru?

ಒಂದು ಕಳ್ಳತನದ ಕೇಸ್​! ಮೂವರು ಪೊಲೀಸರ ಸಸ್ಪೆಂಡ್! ಸಹೋದ್ಯೋಗಿಗಳ ವಿರುದ್ಧವೇ ಪೇದೆ ಸ್ಕೆಚ್​ ನಿಜನಾ? ನಡೆದಿದ್ದೇನು?
ಒಂದು ಕಳ್ಳತನದ ಕೇಸ್​! ಮೂವರು ಪೊಲೀಸರ ಸಸ್ಪೆಂಡ್! ಸಹೋದ್ಯೋಗಿಗಳ ವಿರುದ್ಧವೇ ಪೇದೆ ಸ್ಕೆಚ್​ ನಿಜನಾ? ನಡೆದಿದ್ದೇನು?

ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಇಲಾಖೆ ತನ್ನ ವ್ಯಾಪ್ತಿ ಓರ್ವ ಪೇದೆಯನ್ನು ಸಸ್ಪೆಂಡ್ ಮಾಡಿದೆ. ಈ ಸಂಬಂಧ ಚಿಕ್ಕಮಗಳೂರು ಜಿಲ್ಲಾ ಎಸ್​ಪಿ ಆದೇಶ ಹೊರಡಿಸಿದ್ಧಾರೆ.  ಇಲ್ಲಿನ ಮೂಡಿಗೆರೆ ಪೊಲೀಸ್​ ಠಾಣೆಯ ಕಾನ್​ಸ್ಟೇಬಲ್​,  ಉಮೇಶ್ ಅಮಾನತ್ತಾದವರು.  ತನ್ನ ಸಹೋದ್ಯೋಗಿಗಳ ಮೇಲೆಯೇ ಕೇಸು ದಾಖಲಿಸಿ, ದುಡ್ಡಿಗೆ ಡಿಮ್ಯಾಂಡ್ ಎಂದು ಕಂಪ್ಲೇಂಟ್​ದಾರರಿಗೆ ಕುಮ್ಮಕ್ಕು ನೀಡಿದ ಆರೋಪ ಇವರ ಮೇಲಿದೆ. 

READ | shivamogga police | ಮೂತ್ರ ವಿಸರ್ಜನೆಗೆ ಅಂತಾ ಹೊರವಲಯಗಳಲ್ಲಿ ಬೈಕ್, ಕಾರು ನಿಲ್ಲಿಸಬೇಡಿ! ಜನವಿರದ ಕಡೆಯಲ್ಲಿ ನಡೆಯುತ್ತಿದೆ ದರೋಡೆ! ದಾಖಲಾಯ್ತು ಮತ್ತೊಂದು ಕೇಸ್

ನಡೆದಿದ್ದೇನು? 

ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿ ಗ್ರಾಮದಲ್ಲಿ ನಡೆದಿತ್ತು ಎನ್ನಲಾದ ಕಳ್ಳತನ ಪ್ರಕರಣ(Theft case)ದಲ್ಲಿ, ಫಿಂಗ್​ ಪ್ರಿಂಟ್​ ಲಭಿಸಿತ್ತು ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನನ್ನ ಇಲ್ಲಿನ ಪೊಲೀಸರು ಸ್ಟೇಷನ್​ಗೆ ಕರೆತಂದಿದ್ದರು. ಬಳಿಕ ಆತನ ಮೇಲೆ ತೀವ್ರಸ್ಥರದ ಹಲ್ಲೆ ನಡೆದಿತ್ತು ಎಂಬುದು ವ್ಯಕ್ತಿಯ ಪತ್ನಿತಯ ಆರೋಪವಾಗಿತ್ತು. ಈ ಸಂಬಂಧ ವಿವಿಧ ಸಂಘಟನೆಗಳು ಪರ-ವಿರೋಧ ಪ್ರತಿಭಟನೆ ನಡೆಸಿದ್ದವು. ಬಳಿಕ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದ ಸಂಬಂಧ ಇಬ್ಬರು ಪೇದೆಗಳನ್ನು ಎಸ್​ಪಿ ಸಸ್ಪೆಂಡ್ ಮಾಡಿದ್ದರು. ಈ ನಡುವೆ ಸಿಪಿಐ ಸೋಮೇಗೌಡರ ಮೂಲಕ ಎಸ್​ಪಿ ಘಟನೆ ಸಂಬಂಧ ವರದಿ ತರಿಸಿಕೊಂಡಿದ್ದರು. ಆ ವರದಿಯಲ್ಲಿ ಸ್ಟೇಷನ್​ನಲ್ಲಿ ಹಲ್ಲೆಗೆ ಒಳಗಾಗಿದ್ದರು ಎನ್ನಲಾದ ವ್ಯಕ್ತಿಯ ಮನೆಗೆ ಹೋಗಿದ್ದ ಪೇದೆ ಉಮೇಶ್​, ಅವರಿಗೆ ಪೊಲೀಸರ ವಿರುದ್ಧ ದೂರು ನೀಡಿ, ಅವರಿಂದ 50 ಸಾವಿರ ರೂಪಾಯಿ ಹಣಕ್ಕೆ ಬೇಡಿಕೆ ಇಡಿ ಎಂದು ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ವರದಿ ಆದರಿಸಿ, ಚಿಕ್ಕಮಗಳೂರು ಎಸ್​ಪಿಯವರು ಈ  ಕ್ರಮ ಕೈಗೊಂಡಿದ್ದಾರೆ. 

 READ | Shivamogga Crime News | ಹೋರಿ ಹಬ್ಬದ ವಿಚಾರಕ್ಕೆ ಪರ ಊರಿನಲ್ಲಿ ಜಗಳ, ಸ್ವಂತಊರಿನಲ್ಲಿ ಹೊಡೆದಾಟ! | ಪತ್ನಿ ಸಹಿ ನಕಲಿ ಮಾಡಿದ ಪತಿ | ಶಿವಮೊಗ್ಗದ ಕ್ರೈಂ ವರದಿಗಳು

HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #