1000 ಮೆಗಾವ್ಯಾಟ್​ ಸಾಮರ್ಥ್ಯದ ಸ್ಥಳದಲ್ಲಿ 100 ಮೆಗಾವ್ಯಾಟ್ ವಿದ್ಯುತ್ ಸಹ ಉತ್ಪಾದನೆಯಾಗ್ತಿಲ್ಲ! ಗೃಜಜ್ಯೋತಿಗೂ ಎದುರಾಗುತ್ತಾ ಸಂಕಷ್ಟ ! JP STORY

Malenadu Today

KARNATAKA NEWS/ ONLINE / Malenadu today/ Jul 2, 2023 SHIVAMOGGA NEWS

ರಾಜ್ಯ ಸರ್ಕಾರ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡುವ ಭರವಸೆಯನ್ನು ಜನತೆಗೆ ನೀಡಿದೆ. ಆದರೆ ಮಳೆಯ ಅಭಾವದಿಂದ ರಾಜ್ಯದ ಜಲವಿದ್ಯುದಾಗಾರಗಳು ವಿದ್ಯುತ್ ಉತ್ಪಾದನೆಯನ್ನು ಗಣನೀಯವಾಗಿ ಕಡಿಮೆಯಾಗಿದೆ. 

Malenadu Today

ಅತ್ಯಂತ ಕಡಿಮೆ ದರದ ಲ್ಲಿ ವಿದ್ಯುತ್ ಉತ್ಪಾದಿಸುವ ಜಲವಿದ್ಯುದಾಗಾರಗಳು ಈ ಬಾರಿ ಸ್ಥಗಿತಗೊಂಡರೆ, ಸರ್ಕಾರದ ಯೋಜನೆಗೂ ಧಕ್ಕೆಯಾಗಲಿದೆ. ಬಹುಮುಖ್ಯವಾಗಿ ಶರಾವತಿ ಕಣಿವೆ ಯೋಜನಾ ಪ್ರದೇಶದ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯಾಗದೆ, ಲಿಂಗನಮಕ್ಕಿ ಡ್ಯಾಂ ದಿನದಿಂದ ದಿನಕ್ಕೂ ಡೆಡ್ ಸ್ಟೋರೇಜ್ ಲೆವೆಲ್ ತಲುಪುವ ಭೀತಿ ಎದುರಾಗಿದ್ದು, ಕೆಪಿಸಿ ಅಧಿಕಾರಿಗಳು ಕೂಡ ಆಗಸ ನೋಡುವಂತೆ ಮಾಡಿದೆ. 

Malenadu Today

ಶರಾವತಿ ಕಣಿವೆ ಯೋಜನಾ ವ್ಯಾಪ್ತಿಯಲ್ಲಿ ತಗ್ಗಿದ ಮಳೆ

ರಾಜ್ಯದ ವಿದ್ಯುತ್ ಪೂರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ಶರಾವತಿ ಕಣಿವೆ ಯೋಜನಾ ವ್ಯಾಪ್ತಿಯಲ್ಲಿ ಈ ಬಾರಿ ಮಳೆ ಗಣನೀಯ ಪ್ರಮಾಣದಲ್ಲಿ ತಗ್ಗಿದೆ. ಶರಾವತಿ ಕಣಿವೆ ಜಲವಿದ್ಯುದಾಗಾರ ವ್ಯಾಪ್ತಿಯಲ್ಲಿ ಲಿಂಗನಮಕ್ಕಿ, ಶರಾವತಿ ಎಂಜಿಹಚ್ ಮತ್ತು ಗೇರುಸೊಪ್ಪ ಜಲವಿದ್ಯುದಾಗಾರಗಳು ಕಾರ್ಯ ನಿರ್ವಹಿಸುತ್ತವೆ. 

Malenadu Today

ಎಲ್ಲಾ ವಿದ್ಯುದಾಗಾರಗಳಿಂದ 1035 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಶರಾವತಿ ಕಣಿವೆ ಯೋಜನೆ ಪ್ರದೇಶದಲ್ಲಿ ಪ್ರಸ್ತುತ 100 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿದರೂ ಹೆಚ್ಚು ಎಂಬಂತಾಗಿದೆ. 

 

ದಶಕದ ನಂತರ ಮಳೆಯ ಅಭಾವ ಎದುರಾಗಿದೆ.. ಗರಿಷ್ಠ 1819 ಅಡಿ ನೀರಿನ ಸಂಗ್ರಹಮಟ್ಟ ಹೊಂದಿರುವ ಲಿಂಗನಮಕ್ಕಿ ಡ್ಯಾಂ ನಲ್ಲಿ ಪ್ರಸ್ತುತ 1740.35 ಅಡಿ ನೀರು ಸಂಗ್ರಹಗೊಂಡಿದೆ.

 

151.64 ಟಿಎಂಸಿ ಸಾಮರ್ಥ್ಯ ಹೊಂದಿರುವ ಡ್ಯಾಂ ನಲ್ಲಿ ಶೇಕಡಾ 11.12 ಟಿಎಂಸಿ ನೀರು ಸಂಗ್ರಹಗೊಂಡಿದೆ. ಇಲ್ಲಿಯವರೆಗೆ ಅಂದಾಜು ಡ್ಯಾಂ ಶೇಕಡಾ 35 ರಿಂದ 40 ರಷ್ಟು ನೀರು ಡ್ಯಾಂ ಗೆ ಹರಿದು ಬರಬೇರಬೇಕಿತ್ತು. ಆದರೆ ಲಿಂಗನಮಕ್ಕಿ ಡ್ಯಾಂ ನಲ್ಲಿ ಈವರೆಗೂ ಶೇಕಡಾ 7.33 ರಷ್ಟು ನೀರು ಸಂಗ್ರಹಗೊಂಡಿದೆ. 

Malenadu Today

ಪ್ರತಿದಿನ 40 ರಿಂದ 50 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರೂಬೇಕಾದ ಡ್ಯಾಂ ವ್ಯಾಪ್ತಿಯಲ್ಲಿ ಕೇವಲ 2 ರಿಂದ 3 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ.ಆಷಾಡ ಸಂದರ್ಭದಲ್ಲಿ ಧಾರಾಕಾರವಾಗಿ ಸುರಿಯಬೇಕಿದ್ದ ದೊಡ್ಡ ಮಳೆಗಳು ಕೈಕೊಟ್ಟಿದೆ. ಕಳೆದ ವರ್ಷ ಈ ತಿಂಗಳಲ್ಲಿ ಡ್ಯಾಂ ನಲ್ಲಿ ನೀರು ಕಡಿಮೆ ಎಂಬಂತ ಪರಿಸ್ಥಿತಿ ಇದ್ದರೂ, ಪರಿಸ್ಥಿತಿ ಈ ವರ್ಷದಷ್ಟು ಬಿಗಡಾಯಿಸಿರಲಿಲ್ಲ. 

 

ಜೂನ್ ಜುಲೈ ಆರಂಭದಲ್ಲಿಯೇ ಲಿಂಗನಮಕ್ಕಿ ಡ್ಯಾಂ ಶೇಕಡಾ 35 ರಷ್ಟಾದರೂ ತುಂಬುವುದು ವಾಡಿಕೆ. ಆದರೆ ಈ ಬಾರಿ ಶರಾವತಿ ಕಣಿವೆ ಪ್ರದೇಶದಲ್ಲಿ ಕಾರ್ಮೋಡಗಳು ಕರಗಿ ಮಳೆಯಾಗುತ್ತಿಲ್ಲ. ಹೀಗಾಗಿ ಮಳೆಯ ಕೊರತೆಯಿಂದಾಗಿ ಶರಾವತಿ ಕಣಿವೆ ಯೋಜನಾ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ಬಿಗಡಾಯಿಸಿದೆ.

Malenadu Today

ಪವರ್ ಹೌಸ್ ಗಳ ಪರಿಸ್ಥಿತಿ ಹೇಗಿದೆ

ಶರಾವತಿ ಲಿಂಗನಮಕ್ಕಿ ಮಹಾತ್ಮಗಾಂಧಿ ಗೇರುಸೊಪ್ಪ ಜಲವಿದ್ಯುದಾಗಾರಗಳಿಂದ 1035 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಹುದಾಗಿದೆ. ಪ್ರತಿ ದಿನ 21 ರಿಂದ 24 ಮಿಲಿಯನ್ ಯುನಿಟ್ ಉತ್ಪಾಧಿಸುವ ಸಾಮರ್ಥ್ಯ ಹೊಂದಿರುವ ಶರಾವತಿ ಕಣಿವೆ ಜಲವಿದ್ಯುದಾಗಾರಗಳಲ್ಲಿ ಈಗ 100 ಮೆಗಾವ್ಯಾಟ್ ವಿದ್ಯುತ್ ಉತ್ಪಾಧನೆಯಾದ್ರೂ ಹೆಚ್ಚೆಂಬ ಪರಿಸ್ಥಿತಿ ನಿರ್ಮಾಣವಾಗಿದೆ. 

Malenadu Today

ಲಿಂಗನಮಕ್ಕಿ ಪವರ್ ಹೌಸ್ ಸ್ಥಗಿತಗೊಂಡಿದೆ. ಶರಾವತಿ ಪವರ್ ಹೌಸ್ ನಲ್ಲಿ 2.5 ರಿಂದ 3 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಮಹಾತ್ಮ ಗಾಂಧಿ ಪವರ್ ಹೌಸ್ ನಲ್ಲಿ 1 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಗೇರುಸೊಪ್ಪ ಪವರ್ ಹೌಸ್ ನಲ್ಲಿ ಅವಶ್ಯಕತೆಗೆ ತಕ್ಕಂತೆ ದಿನಕ್ಕೆ ಟರ್ಬೈನ್ ಗಳು ಒಂದು ಗಂಟೆ ತಿರುಗಿದರೂ ಹೆಚ್ಚು. ಮಳೆಯಾಗದ ಹೊರತು ಎಲ್ಲಾ ಯಂತ್ರಗಳು ತಿರುಗಲಾರವು..

 Malenadu Today

ಮಳೆ ಕೊರತೆ ಎದುರಾದರೆ, ರೈತರು ಜಮೀನು ಉಳಿಸಿಕೊಳ್ಳುವುದು ಕಷ್ಟ.

ಮಳೆ ಕೊರತೆ ಎದುರಾದರೆ, ರೈತರ ಬೋರ್ ವೆಲ್ ಗಳಿಗೆ ಕರೆಂಟ್ ಸಿಗೋದು ಕಷ್ಟ. ರೈತರು ಈಗಾಗಲೇ ತಮ್ಮ ಹೊಲ ಗದ್ದೆ ತೋಟಗಳನ್ನು ಉಳಿಸಿಕೊಳ್ಳಲು ಬೋರು ಪಂಪ್ ಸೆಟ್ ಗಳಿಗೆ ಮೊರೆ ಹೋಗಿದ್ದಾರೆ. ವಿದ್ಯುತ್ ಸಮಸ್ಯೆ ಬಿಗಡಾಯಿಸಿದರೆ. ತೋಟ ಉಳಿಸಿಕೊಳ್ಳುವುದು ಕೂಡ ರೈತರಿಗೆ ಕಷ್ಟವಾಗುತ್ತೆ. ಕುಡಿಯುವ ನೀರಿಗೆ ಹಾಹಾಕಾರ ಎದುರಾಗುತ್ತೆ. ಶರಾವತಿ ಒಡಲನ್ನು ನಂಬಿಕೊಂಡು ವಿದ್ಯುತ್  ಉತ್ಪಾಧಿಸುತ್ತಿರುವ ಕೆಪಿಸಿ ಅಧಿಕಾರಿಗಳು ಆಗಸದತ್ತ ಮುಖ ಮಾಡಿದ್ದಾರೆ. ಎಲ್ಲಿ ಓಡುವಿರಿ ನಿಲ್ಲಿ ಮೋಡಗಳೆ ನಾಲ್ಕು ಹನಿಯ ಚೆಲ್ಲಿ ಎಂದು ಉದ್ಗರಿಸುತ್ತಿದ್ದಾರೆ.

Malenadu Today


ಹೆಂಡತಿ ಕೊಂದ ಗಂಡನಿಗೆ ಕೋರ್ಟ್​ ಕೊಟ್ಟ ಶಿಕ್ಷೆ ಎಂತದ್ದು ಗೊತ್ತಾ? ಭದ್ರಾವತಿ ಕೇಸ್ 0101/2020 ರಲ್ಲಿ ಏನಾಯ್ತು ಓದಿ

ಶಿವಮೊಗ್ಗ / ಹೆಂಡತಿಯನ್ನು ಕೊಂದ ಆರೋಪಿಗೆ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪೀಠಾಸೀನ ಭದ್ರಾವತಿ  ನ್ಯಾಯಾಲಯದಲ್ಲಿ ಜೀವಾವಧಿ ಶಿಕ್ಷೆಯಾಗಿದೆ. 

ಪ್ರಕರಣವೇನು?

ದಿನಾಂಕಃ 03-05-2020   ರಂದು ಹೊಳೆಹೊನ್ನೂರು ಟೌನ್ ನ ನಿವಾಸಿ ಗಣೇಶ್  ತನ್ನ ಪತ್ನಿ ಗೀತಾ,  ತಲೆಗೆ  ಹೊಡುದ ಕೊಲೆಮಾಡಿದ್ದ, ಈ ಸಂಬಂಧ ಗೀತಾರ ಸಹೋದರಿ ದೂರು ನೀಡಿದ್ದರು.   ಹೊಳೆಹೊನ್ನೂರು ಪೊಲೀಸ್ ಠಾಣೆ ಗುನ್ನೆ ಸಂಖ್ಯೆ  0101/2020  ಕಲಂ 302 ಐಪಿಸಿ ಅಡಿಯಲ್ಲಿ ಕೇಸ್ ಆಗಿತ್ತು. ಈ ಸಂಬಂಧ ಅಂದಿನ ತನಿಖಾಧಿಕಾರಿ ಮಂಜುನಾಥ್ ಇ. ಒ., ಆರೋಪಿತನ ವಿರುದ್ಧ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಈ ಸಂಬಂಧ ಸರ್ಕಾರಿ ಅಭಿಯೋಜಕರು ರತ್ನಮ್ಮ,  ಪ್ರಕರಣದಲ್ಲಿ ವಾದ ಮಂಡಿಸಿದ್ದರು. ಇದೀಗ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪೀಠಾಸೀನ ಭದ್ರಾವತಿ  ನ್ಯಾಯಾಲಯ ತೀರ್ಪು ನೀಡಿದ್ದು ಆರೋಪಿ ಗಣೇಶ್​ಗೆ  ಜಿವಾವಧಿ ಶಿಕ್ಷೆ ಮತ್ತು 50,000/- ರೂ ದಂಡ, ದಂಡ ಕಟ್ಟಲು ವಿಫಲನಾದಲ್ಲಿ ಹೆಚ್ಚುವರಿ 03 ವರ್ಷ ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. 

 


ತಿರುಪತಿ-ಚೆನ್ನೈಗೆ ಹೋಗಲು ಇನ್ನಷ್ಟು ಅನುಕೂಲ! ಶಿವಮೊಗ್ಗ- ಎಂಜಿಆರ್​ ಚನ್ನೈ ಸೆಂಟ್ರಲ್​ ಟ್ರೈನ್​ಗೆ ಮತ್ತಷ್ಟು ಅವಕಾಶ! ಡಿಟೇಲ್ಸ್ 

ಶಿವಮೊಗ್ಗ ರೈಲ್ವೆ ನಿಲ್ದಾಣ (shivamogga railway station (SMET))ದಿಂದ ಸಂಚರಿಸುವ 06223/Shivamogga Town – MGR Chennai Central Special ರೈಲು ಹಾಗೂ 06224/MGR Chennai Central – Shivamogga Town Special ಟ್ರೈನ್​ ಓಡಾಟವನ್ನು ಇನ್ನೂ ಮೂರು ತಿಂಗಳ ಕಾಲ ವಿಸ್ತರಿಸಲಾಗಿದೆ. ಕಳೆದ ಜೂನ್ 27 ಕ್ಕೆ ಈ ರೈಲು ಓಡಾಟದ ಅವಧಿ ಮುಕ್ತಾಯಗೊಂಡಿತ್ತು. ಇದೀಗ ರೈಲು ಸಂಚಾರದ ಅವಧಿಯನ್ನು ಮುಂದಿನ ಸೆಪ್ಟೆಂಬರ್ 26 ರವರೆಗೂ ಮುಂದುವರಿಸಲಾಗಿದೆ. ಆಂಧ್ರ ಹಾಗೂ ತಮಿಳುನಾಡಿನ ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ಈ ಟ್ರೈನ್ MGR Chennai Ctrl ,ಅರಕ್ಕೋಣಂ ಜೆಎನ್, ರೇಣಿಗುಂಟಾ ಜೆಎನ್, ರಜಂಪೇಟಾ, ಕಡಪ, ಯೆರ್ರಗುಂಟಾ ಜೆಎನ್,ತಾಡಿಪತ್ರಿ,ಗೂಟಿ ಜಂಕ್ಷನ್​, ಗುಂತಕಲ್ ಜಂಕ್ಷನ್, ಬಳ್ಳಾರಿ ಜಂಕ್ಷನ್, ರಾಯದುರ್ಗ ಜಂಕ್ಷನ್, ಮೊಳಕಾಲ್ಮೂರು, ಚಳ್ಳಕೆರೆ, ಚಿತ್ರದುರ್ಗ, ಚಿಕ್ಕಜಾಜೂರು ಜಂಕ್ಷನ್, ಹೊಸದುರ್ಗ ರಸ್ತೆ, ಅಜ್ಜಂಪುರ, ಬೀರೂರು ಜಂಕ್ಷನ್, ತರೀಕೆರೆ, ಭದ್ರಾವತಿ  ಮೂಲಕ  ಶಿವಮೊಗ್ಗ ನಗರ ತಲುಪುತ್ತೆ. ಇದೇ ರೀತಿಯಲ್ಲಿ ಶಿವಮೊಗ್ಗದಿಂಧ ಎಂಜಿಆರ್ ಚೆನ್ನೈ ಸೆಂಟ್ರಲ್​ಗೆ ತೆರಳುತ್ತದೆ. 

 

Share This Article