SHIVAMOGGA| MALENADUTODAY NEWS | ಮಲೆನಾಡು ಟುಡೆ Mar 29, 2025
ಬಂಗಾರ ಬಲು ಭಾರವಾಗುತ್ತಿದೆ. ಹಾಗೆ ಚೂರು ಕಡಿಮೆಯಾಗಿದೆ ಎಂದುಕೊಳ್ತಿದ್ದ ಹಾಗೆ ಚಿನ್ನದ ದರ ಏರಿಕೆಯಾಗುವುದರಲ್ಲಿಯು ದಾಖಲೆ ಬರೆದಿದೆ. 10 ಗ್ರಾಮ್ ಚಿನ್ನದ ಬೆಲೆ ದೆಹಲಿ ಮಾರುಕಟ್ಟೆಯಲ್ಲಿ ಬರೋಬ್ಬರಿ 1100 ರೂಪಾಯಿ ಏರಿಕೆ ಕಂಡಿದೆ. ವಿವರ ಹೀಗಿದೆ ಓದಿ
ದೆಹಲಿ ಮಾರುಕಟ್ಟೆಯ ವರದಿಯ ಪ್ರಕಾರ, ಶುದ್ಧ ಚಿನ್ನ ಅಂದರೆ %99.9 ಚಿನ್ನ 10 ಗ್ರಾಮ್‌ಗೆ ₹1,100 ಏರಿಕೆಯಾಗಿದೆ. 10 ಗ್ರಾಮ್ ಶುದ್ಧ ಚಿನ್ನದ ಬೆಲೆ ₹92,150 ರೂಪಾಯಿನಷ್ಟಿದೆ.
ಇನ್ನೂ %95.5 ನ ಆಭರಣ ಚಿನ್ನದ ಬೆಲೆಯು ಸಹ 1100 ರೂಪಾಯಿನಷ್ಟು ಹೆಚ್ಚಾಗಿದೆ. ಹಾಗಾಗಿ 10 ಗ್ರಾಮ್ ಚಿನ್ನದ ಬೆಲೆ ₹91,700 ನಷ್ಟಿದೆ.
ಕಳೆದ ಒಂದು ವರ್ಷದಲ್ಲಿ ಚಿನ್ನದ ದರದಲ್ಲಿ 23 ಸಾವಿರ ರೂಪಾಯಿಗೂ ಅದಿಕ ಹೆಚ್ಚಳವಾಗಿದೆ. ಕಳೆದ ಏಪ್ರಿಲ್‌ನಲ್ಲಿ ಸುಮಾರು 68 ಸಾವಿರ ರೂಪಾಯಿನಷ್ಟಿದ್ದ ಚಿನ್ನದ ಬೆಲೆ ಇದೀಗ 91 ಸಾವಿರ ರೂಪಾಯಿ ದಾಟಿದೆ.
ಈ ನಡುವೆ ಬೆಳ್ಳಿ ದರವೂ ₹1,300 ನಷ್ಟು ಏರಿಕೆಯಾಗಿದ್ದು, ಪ್ರತಿ ಕೆ.ಜಿ. ಬೆಳ್ಳಿ ಬೆಲೆ₹1.03 ಲಕ್ಷಕ್ಕೆ ಏರಿಕೆ ಕಂಡಿದೆ