ಸಿಗಂದೂರು ಸೇತುವೆ ಕಾಮಗಾರಿಯ ನೌಕರ ಉತ್ತರಪ್ರದೇಶದ ಯುವಕ, ಸಾಗರ ಟೌನ್‌ನಲ್ಲಿ ಸಾವು |

This Article Written by / 13 / ಮಾರ್ಚ್ 29, 2025

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 29, 2025 ‌‌ ‌‌

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕುನಲ್ಲಿ ಕಳೆದ ಗುರುವಾರ ತಡರಾತ್ರಿ ಸಂಭವಿಸಿದ ಅಪಘಾತದಲ್ಲಿ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಬಗ್ಗೆ ತಡವಾಗಿ ವರದಿಯಾಗಿದೆ. 

ಉತ್ತರಪ್ರದೇಶದ ವ್ಯಕ್ತಿ ಸಾವು 

ಸಾಗರದ ಎಸ್.ಎನ್.ನಗರ ಬಡಾವಣೆಯಲ್ಲಿ ಘಟನೆ ಸಂಭವಿಸಿದೆ. ಕಳೆದ ಗುರುವಾರ ತಡರಾತ್ರಿ ಎರಡು ಬೈಕ್ ನಡುವೆ ಡಿಕ್ಕಿಯಾಗಿದ್ದು, ಈ ಅಪಘಾತದಲ್ಲಿ ಓರ್ವರು ಮೃತಪಟ್ಟಿದ್ದಾರೆ. ಅವರನ್ನು ಉತ್ತರಪ್ರದೇಶದ ಬಂಡ ಜಿಲ್ಲೆಯ ಜಾಹಿತಾರ ಗ್ರಾಮದ ರಾಜನ್ ಪ್ರಸಾದ್ ತಿವಾರಿ  ಎಂದು ಗುರುತಿಸಲಾಗಿದೆ. 

ರಾಜನ್‌ ಪ್ರಸಾದ್‌ ಸಿಗಂದೂರು ಸೇತುವೆ ನಿರ್ಮಾಣದ ಟೀಂನಲ್ಲಿ ಕೆಲಸ ಮಾಡುತ್ತಿದ್ದರು, ಕಾಮಗಾರಿಯ ವೆಹಿಕಲ್‌ಗಳಿಗೆ ಇಂಧನ ತುಂಬಿಸುವ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಸಾಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ಗುರುವಾರ ಸಂಭವಿಸಿದ ಅಪಘಾತದಲ್ಲಿ ಅವರು ಜೀವ ಕಳೆದುಕೊಂಡಿದ್ದಾರೆ. ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ. ಈ ಬಗ್ಗೆ ಸಾಗರ ಪೇಟೆ ಪೊಲೀಸರು ಕೇಸ್‌ ದಾಖಲು ಮಾಡಿ, ವಿಚಾರಣೆ ನಡೆಸಿದ್ದಾರೆ. 

ಮುಂದಿನ ಸುದ್ದಿ ಒದಿ

Leave a Comment