₹20 ಸಾವಿರಕ್ಕೆ ₹20 ಸಾವಿರ ಲಾಭ | ಗ್ಯಾರಂಟಿ ಲಾಭದ ಸ್ಕೀಮ್‌ ನಂಬಿದ್ದಕ್ಕೆ ₹50 ಲಕ್ಷ ಖಾಲಿ.. ಖಾಲಿ

SHIVAMOGGA | MALENADUTODAY NEWS | ಮಲೆನಾಡು ಟುಡೆ  Mar 3, 2025 ‌‌  

ಯಾರದರೂ ನೂರು ಪಡೆದು, ಅದಕ್ಕೆ ಪ್ರತಿಯಾಗಿ ಐನೂರು ರೂಪಾಯಿ ವಾಪಸ್‌ ಕೊಟ್ಟರೆ, ಅವರನ್ನು ಯಾವ ಮಟ್ಟಕ್ಕೆ ನಂಬುತ್ತೇವೆ ಅಂದರೆ, ತಮ್ಮಲ್ಲಿರುವ ದುಡ್ಡನ್ನೆಲ್ಲಾ ಹಿಂದು ಮುಂದೆ ಯೊಚಿಸಿದೆ, ಅಂತಹವರ ಅಕೌಂಟ್‌ಗೆ ಹಾಕಿ ಬಿಡುತ್ತೇವೆ. ಇದೊಂಥರ ಮನುಷ್ಯನ ಸೈಕಾಲಿಜಿ. ಇನ್ನೊಂದು ರೀತಿಯ ಸೈಕಾಲಿಜಿ ಇದೆ. ಅದೇನಂದರೆ, ನನಗೆ ಹಾಗೆಲ್ಲಾ ಮೋಸ ಆಗಲ್ಲ, ನಾನು ಮೋಸ ಹೋಗಲ್ಲ ಎನ್ನುವುದಕ್ಕಿಂತ ಇದೊಂಥರಾ ಭಿನ್ನ. ನನಗೆ ಯಾರು ಮೋಸ ಮಾಡಲ್ಲ, ನಾನು ಪಾಪ ಅಲ್ಲವಾ ಎನ್ನುವಂತಹ ಭಾವ. ಇಂತಹ ಫೀಲ್‌ ಇಟ್ಟುಕೊಂಡೆ ಬಹಳಷ್ಟು ಜನರು ಪುಸಕ್‌ ಅಂತ ವಂಚನೆಗೆ ಒಳಗಾಗಿರುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತಹ ಸ್ಟೋರಿಯೊಂದು ಶಿವಮೊಗ್ಗ ಜಿಲ್ಲೆ ತಾಲ್ಲೂಕು ಒಂದರ ಗ್ರಾಮವೊಂದರಲ್ಲಿ ನಡೆದಿದೆ. ಅದರ ಬಗ್ಗೆ ಶಿವಮೊಗ್ಗ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ FIR ದಾಖಲಾಗಿದೆ. 

INFORMATION TECHNOLOGY ACT 2000 (U/s-66(D)); THE BHARATIYA NYAYA SANHITA (BNS), 2023 (U/s-318(4),319(2)) ನಡಿಯಲ್ಲಿ ದಾಖಲಾಗಿರುವ ಪ್ರಕರಣ ವಿವರ ಹೀಗಿದೆ. ಜಿಲ್ಲೆಯ ಟೌನ್‌ ಒಂದರ ಸಮೀಪದಲ್ಲಿರುವ ಗ್ರಾಮದ ನಿವಾಸಿ ಮಹಿಳೆಯೊಬ್ಬರು ವರ್ಕ್‌ ಫ್ರಾಮ್‌ ಹೌಮ್‌ ವಿಚಾರವಾಗಿ ಸರ್ಚ್‌ ಮಾಡುತ್ತಿದ್ದರು. ಈ ವೇಳೆ ಮ್ಯಾಂಗೋ ಕಂಪನಿಯ ಜಾಹಿರಾತು ಕಂಡಿದೆ. ಅದನ್ನು ಸಂಪರ್ಕಿಸಿದ ಮಹಿಳೆಗೆ ಕೆಲವೊಂದು ಟಾಸ್ಕ್‌ ಕೊಟ್ಟು, ಈ ಟಾಸ್ಕ್‌ ಕಂಪ್ಲೀಟ್‌ ಮಾಡಿದರೆ, ದುಪ್ಪಟ್ಟು ಲಾಭ ಸಿಗಲಿದೆ. ದಿನಕ್ಕೆ ಕನಿಷ್ಟ ಏಳೆಂಟು ಸಾವಿರ ರೂಪಾಯಿ ದುಡಿಯಬಹುದು ಎಂದೆಲ್ಲಾ ಕಂಪನಿ ತಿಳಿಸಿದೆ. 

ಮೊದಲಿಗೆ ಮಹಿಳೆಯು ಸಹ, ಕಂಪನಿಯ ಮಾತುಗಳನ್ನು ನಂಬಲಿಲ್ಲ. ಆನಂತರ ಕಂಪನಿ, ಮಹಿಳೆಗೆ ಸ್ಯಾಂಪಲ್‌ ಟಾಸ್ಕ್‌ ನೀಡಿದೆ. ಹತ್ತು ಸಾವಿರ ರೂಪಾಯಿ ಕಟ್ಟಿಸಿಕೊಂಡು ಪ್ರತಿಯಾಗಿ 17 ಸಾವಿರ ರೂಪಾಯಿ ಕ್ರೆಡಿಟ್‌ ಮಾಡಿದೆ, ಎರಡನೇ ಟಾಸ್ಕ್‌ನಲ್ಲಿ 10 ಸಾವಿರ ರೂಪಾಯಿಗೆ ಪ್ರತಿಯಾಗಿ 19 ಸಾವಿರ ಕ್ರೆಡಿಟ್‌ ಮಾಡಿದೆ. ಇದರಿಂದ ಮಹಿಳೆಗೆ ಕಂಪನಿ ಮೇಲೆ ನಂಬಿಕೆ ಬಂದಿದೆ. ಇದನ್ನ ಕ್ಯಾಚ್‌ ಮಾಡಿದ ಮ್ಯಾಂಗೋ ಖದೀಮರು ಇಲ್ಲ ಸಲ್ಲದ ಟಾಸ್ಕ್‌ಗಳನ್ನು ಒಟ್ಟೊಟ್ಟಿಗೆ ಕೊಟ್ಟಿದ್ದಾರೆ. ಅಲ್ಲದೆ ಇವೆಂಟ್‌ ಮ್ಯಾನೇಜ್‌ಮೆಂಟ್‌ ಅದು ಇದು ಮಣ್ಣು ಮಸಿ ಇಲ್ಲದ ವಿಚಾರ ತಲೆಗೆ ತುಂಬಿ ಬರೋಬ್ಬರಿ 53,17,390 ರೂಪಾಯಿ ಕಟ್ಟಿಸಿಕೊಂಡು ವಂಚಿಸಿದೆ. ಸದ್ಯ ಮಹಿಳೆ ಪೊಲೀಸರ ಮೊರೆಹೋಗಿದ್ದು, ಆರೋಪಿಗಳ ಪತ್ತೆ ಪೊಲೀಸರು ಪ್ರಯತ್ನ ಪಡುತ್ತಿದ್ದಾರೆ. ಆದಾಗ್ಯು ಜನರು ಎಚ್ಚೆತ್ತಕೊಳ್ಳದೆ ಇಂತಹ ವಂಚನೆಗಳು ನಿಲ್ಲುವುದಿಲ್ಲ ಎಂಬುದಂತೂ ಸತ್ಯ

Leave a Comment