SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 28, 2025
ಶಿವಮೊಗ್ಗ | ಹೈಕಮಾಂಡ್ ತೀರ್ಮಾನದಂತೆ ಕೇಂದ್ರ ಕೃಷಿ ಹಾಗೂ ಗಾಮೀಣಾಭಿವೃದ್ದಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಆದಷ್ಟು ಬೇಗಾ ರಾಜ್ಯಕ್ಕೆ ಬಂದು ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅವರು ರಾಜ್ಯಾಧ್ಯಕ್ಷರನ್ನ ಯಾವಾಗ, ಯಾರು ಮಾಡಿದ್ರೆ ಒಳ್ಳೆಯದು ಎಂಬುದನ್ನ ನಮ್ಮ ಶಕ್ತಿ ಇರುವ ಹೈಕಮಾಂಡ್ ತೀರ್ಮಾನ ಮಾಡುತ್ತದೆ, ಯಾವುದೇ ಗೊಂದಲಗಳಿಲ್ಲ, ಆದಷ್ಟು ಬೇಗ ಈ ಚರ್ಚೆಯ ವಿಚಾರ ಕೊನೆಗೊಳ್ಳುತ್ತದೆ, 15 ದಿನದಲ್ಲಿ ಜಿಲ್ಲಾಧ್ಯಕ್ಷರ ಪಟ್ಟಿ ಅಂತಿಮವಾಗುತ್ತದೆ ಎಂದರು.
ಹಿಂದೂಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ಕೊಡುವ ಪಕ್ಷದವರು ಶಿವರಾತ್ರಿಯಲ್ಲಿ ಭಾಗಿಯಾಗದ್ದು ಸಂತೋಷ ತಂದಿದೆ,
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಶಾ ಫೌಂಡೇಶನ್ ಶಿವರಾತ್ರಿ ಕಾರ್ಯಕ್ರಮದಲ್ಲಿ ಭಾಗಿಯಾದ ವಿಚಾರ ಸಂಬಂಧ ಮಾತನಾಡಿದ ಅವರು. ಯಾವ ಪಕ್ಷದಿಂದ ಹಿಂದೂಗಳ ಬಗ್ಗೆ ಅವಹೇಳನವಾಗಿ ಹೇಳ್ತಿದ್ದರೋ ಅವರೇ ಈಗ ಶಿವರಾತ್ರಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಸಂತೋಷ ತಂದಿದೆ, ಜನರಿಗೆ ಸತ್ಯ ಗೊತ್ತಾಗಿದೆ ಖಾಲಿ ಮಾತಿಗೆ ಜನ ಬೆಲೆ ಕೊಡೊಲ್ಲ ಅದಕ್ಕೆ ಮಹಾಕುಂಭಾಮೇಳವೇ ಸಾಕ್ಷಿ ಆಗಿದೆ, ಇದನ್ನ ಕಾಂಗ್ರೆಸ್ ಅರ್ಥ ಮಾಡಿಕೊಂಡ್ರೆ ಸಾಕು ಇಲ್ಲದಿದ್ರೆ ಅವರೇ ಮೊಳೆ ಹೊಡೆದುಕೊಳ್ಳುವ ದಿನ ಹತ್ತಿರವಾಗುತ್ತವೆ ಎಂದರು. ಇನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ವಿಚಾರದ ಬಗ್ಗೆ ಮಾತನಾಡಿ ಕಾಂಗ್ರೆಸ್ ಸರ್ಕಾರ ಬಂದಮೇಲೆ ಭ್ರಷ್ಟಾಚಾರ ಮಿತಿಮೀರಿ ಹೋಗಿದೆ, ಅಧಿಕಾರಿಗಳು ಕಣ್ಣೀರಿಡುತ್ತಿದ್ದಾರೆ, ಅಧಿಕಾರಿಗಳ ನೋವಿನ ಮಾತು ಹೇಳ್ತಾ ಇದ್ದಾರೆ ತಿಂಗಳ ಮಾಮೂಲಿ ಕೂಡ ಫಿಕ್ಸ್ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
SUMMARY | Minister Shivraj Singh Chouhan will come to the state as soon as possible and elect the state president, mp B Y Raghavendra said.
KEYWORDS | Shivraj Singh Chouhan, B Y Raghavendra, state president,