ಶಿವಮೊಗ್ಗ ವಿಮಾನ ನಿಲ್ದಾಣ | ಲೈಸೆನ್ಸ್ ಬಗ್ಗೆ ಮತ್ತೊಂದು ಬಿಗ್ ಅಪ್‌ಡೇಟ್ಸ್ ಕೊಟ್ಟ ಸಂಸದ ಬಿ ವೈ ರಾಘವೇಂದ್ರ
Shimoga airport licence , Mp BY Raghavendra , ಸಂಸದ ಬಿ ವೈ ರಾಘವೇಂದ್ರ , ಶಿವಮೊಗ್ಗ ವಿಮಾನ ನಿಲ್ದಾಣ
SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 24, 2024 shimoga airport
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸ್ಪೈಸ್ ಜೆಟ್ ಕಾರ್ಯಾಚರಣೆ ಆರಂಭಿಸುತ್ತಿರುವ ಬೆನ್ನಲ್ಲೆ ಶಿವಮೊಗ್ಗ ವಿಮಾನ ನಿಲ್ದಾಣ ಪರ್ಮಿಟ್ ವಿಚಾರದ ಬಗ್ಗೆ ಸಂಸದ ಬಿವೈ ರಾಘವೇಂದ್ರ ಮಾತನಾಡಿದ್ದಾರೆ.
ಶಿವಮೊಗ್ಗದಲ್ಲಿ ಮುಡಾ ಪ್ರಕರಣದ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವ ವೇಳೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಶಿವಮೊಗ್ಗ ವಿಮಾನ ನಿಲ್ದಾಣದ ಲೈಸೆನ್ಸ್ (License) ಅವಧಿಯನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ ಅಂದರೆ DGCA ಇನ್ನೊಂದು ತಿಂಗಳ ಕಾಲ ವಿಸ್ತರಣೆ ಮಾಡಿದೆ. ಅಷ್ಟರಲ್ಲಿ ರಾಜ್ಯ ಸರ್ಕಾರ ವಿಮಾನ ನಿಲ್ದಾಣದಲ್ಲಿನ ಸಮಸ್ಯೆಗಳನ್ನ ಬಗೆಹರಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ವಿಷಯವನ್ನು ಡಿಜಿಸಿಎ ರಾಜ್ಯಸರ್ಕಾರಕ್ಕೆ ಸೂಕ್ಷ್ಮವಾಗಿ ತಿಳಿಸಿದೆ ಎಂದರು.
ಈ ವರ್ಷದ ಲೈಸೆನ್ಸ್ ರಿನಿವಲ್ ಮಾಡದ ನಾಗರಿಕ ವಿಮಾನಯಾನ ನಿರ್ದೇಶನಾಲಯ ಸೆಪ್ಟೆಂಬರ್ ಅಂತ್ಯದವರೆಗೂ ಒಂದು ತಿಂಗಳ ಅವಧಿಯ ಪರ್ಮಿಟ್ ನೀಡಿತ್ತು. ಇದೀಗ ಮತ್ತೊಂದು ತಿಂಗಳು ವಿಮಾನ ಹಾರಾಟಕ್ಕೆ ಅಗತ್ಯವಿರುವ ಲೈಸೆನ್ಸ್ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಡಿಜಿಸಿಎ ಸೂಚಿಸಿರುವ ಕೊರತೆಗಳನ್ನ ನೀಗಿಸುವ ಕೆಲಸ ಮಾಡಬೇಕಿದೆ.