ತಾಳಗುಪ್ಪ ಟ್ರೈನ್‌ಗೆ ಸಿಲುಕಿ ಮೇಲಿನ ತುಂಗಾನಗರ ಯುವಕ ಸಾವು | ಸಮೀಪದಲ್ಲಿಯೇ ಬೈಕ್‌ ಪತ್ತೆ

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Feb 18, 2025 ‌‌ 

ರೈಲಿಗೆ ಸಿಲುಕಿ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ಟು ಸಾಗರಕ್ಕೆ ತೆರಳುತ್ತಿದ್ದ ತಾಳಗುಪ್ಪ ಟ್ರೈನ್‌ಗೆ ಸಿಲುಕಿ ಯುವಕ ಸಾವನ್ನಪ್ಪಿದ್ದಾನೆ. ನಿನ್ನೆ ಸಂಜೆ ಈ ಘಟನೆ ಸಂಭವಿಸಿದೆ. ರೈಲ್ವೆ ಟ್ರ್ಯಾಕ್‌ ಬಳಿ ಯುವಕನಿಗೆ ಸಂಬಂಧಿಸಿದ ಪಲ್ಸರ್‌ ಬೈಕ್‌ ಕೂಡ ಪತ್ತೆಯಾಗಿದೆ. 

- Advertisement -

ಮೇಲಿನ ತುಂಗಾನಗರ ನಿವಾಸಿ ಸಂತೋಷ್‌ ಮೃತ ಯುವಕ ಎಂದು ಗೊತ್ತಾಗಿದೆ. ಚಾಲಕ ವೃತ್ತಿ ಮಾಡುತ್ತಿದ್ದ ಈತನ ಸಾವಿಗೆ ಕಾರಣ ಸ್ಪಷ್ಟವಾಗಿಲ್ಲ. ಘಟನೆಯಲ್ಲಿ ರೈಲಿಗೆ ಸಿಲುಕಿದ ಈತನ ದೇಹ ಛಿದ್ರವಾಗಿದೆ.ರೈಲ್ವೆ ಪೊಲೀಸರು ಸ್ಥಳ ಮಹಜರ್‌ ನಡೆಸಿ, ಮೃತದೇಹವನ್ನು ಶವಾಗಾರಕ್ಕೆ ರವಾನಿಸಿ, ತನಿಖೆ ನಡೆಸಿದ್ದಾರೆ. 

 

SUMMARY |  Youth dies after being hit by Talaguppa train 

KEY WORDS |   Youth dies after being hit by Talaguppa train 

Share This Article
1 Comment

Leave a Reply

Your email address will not be published. Required fields are marked *