ರೈತರಿಗೆ ಗುಡ್‌ ನ್ಯೂಸ್‌ | ದಿನವಿಡಿ 7 ಗಂಟೆ ತ್ರೀಪೇಸ್‌ ಕರೆಂಟ್‌ | ಇಂಧನ ಸಚಿವರು ಹೇಳಿದ್ದೇನು ?

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Feb 18, 2025 ‌‌ 

ರಾಜ್ಯದ ರೈತರಿಗೆ ಇಲ್ಲೊಂದು ಗುಡ್‌ ನ್ಯೂಸ್‌ ಸಿಗುತ್ತಿದೆ. ರಾಜ್ಯಸರ್ಕಾರ ರೈತರಿಗೆ ಪ್ರತಿದಿನ ಏಳು ಗಂಟೆಗೂ ಹೆಚ್ಚು ಕಾಲ ತ್ರೀಪೇಸ್‌ ವಿದ್ಯುತ್‌ ಪೂರೈಕೆ ಮಾಡಲು ಅಗತ್ಯಕ್ರಮ ಕೈಗೊಳ್ಳುತ್ತಿದೆ.

- Advertisement -

ಈ ಸಂಬಂಧ ದಾವಣಗೆರೆ ಜಿಲ್ಲೆಗೆ ಭೇಟಿಕೊಟ್ಟ ಸಂದರ್ಭದಲ್ಲಿ ಮಾತನಾಡಿರುವ ಇಂಧನ ಸಚಿವ ಕೆ ಜೆ ಜಾರ್ಜ್‌ ರೈತರಿಗೆ ನಿರಂತರ ವಿದ್ಯುತ್‌ ನೀಡುವ ಸಲುವಾಗಿ ವಿದ್ಯುತ್‌ ಉತ್ಪಾದನೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ  ಮುಂದಿನ ದಿನಗಳಲ್ಲಿ ರೈತರಿಗೆ 7 ಗಂಟೆಗಿಂತ ಹೆಚ್ಚು ವಿದ್ಯುತ್ ಪೂರೈಕೆಮಾಡಲಾಗುವುದು ಎಂದಿದ್ದಾರೆ. 

ಕುಸುಮ್‌ ಸಿ ಯೋಜನೆ ಮೂಲಕ 3 ಸಾವಿರ ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಯ ಗುರಿ ಹೊಂದಲಾಗಿದೆ ಎಂದ ಸಚಿವರು 3 ಸಾವಿರ ಪವರ್‌ ಮ್ಯಾನ್‌ ನೇಮಕದ ಪ್ರಕ್ರಿಯೆಗಳು ಸಹ ನಡೆಯುತ್ತಿವೆ ಎಂದು ಮಾಹಿತಿ ನೀಡಿದರು. 

SUMMARY | Energy Minister KJ Charge talks about providing three-phase current for seven hours a day to farmers

KEY WORDS | Energy Minister KJ Charge , three-phase current for farmers

Share This Article