ಸೂಡಾ ಸೈಟ್‌ ವಿಚಾರದಲ್ಲಿ ಸಾರ್ವಜನಿಕರಿಗೆ ಮಹತ್ವದ ಮಾಹಿತಿ | ಬಹುಮುಖ್ಯವಾಗಿದೆ ವಿವರ

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 14, 2025 ‌‌  

- Advertisement -

ಸೂಡಾ ಸೈಟ್‌ ಕೊಡಿಸುವುದಾಗಿ ಹೇಳಿ ಜನರನ್ನು ವಂಚಿಸ್ತಿರುವ ಜಾಲವೊಂದು ಶಿವಮೊಗ್ಗದಲ್ಲಿ ಕೆಲಸ ಮಾಡುತ್ತಿದೆ. ಈ ಸಂಬಂಧ ಜಾಗೃತೆ ವಹಿಸುವಂತೆ  ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ (ಸೂಡಾ) ಜನರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಈ ಕುರಿತಂತೆ ಯಾವುದೇ ಆಮಿಷಕ್ಕೆ ಒಳಗಾಗದಿರುವಂತೆ ಸೂಡಾ ಎಚ್ಚರಿಕೆಯನ್ನು ನೀಡಿದೆ.  

Shivamogga-Bhadravati Urban Development Authority

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ ಸದ್ಯ ಊರಗಡೂರುನಲ್ಲಿ ನಿವೇಶನ ಹಂಚಿಕೆಗೆ ಮುಂದಾಗಿದೆ. ಈ ಸಂಬಂದ ಅರ್ಜಿಗಳ ಸಲ್ಲಿಕೆ ಮುಗಿದಿದ್ದು, ನಿಯಮಾವಳಿಯಂತೆ ಸೈಟ್‌ಗಳ ಹಂಚಿಕೆ ಪ್ರಕ್ರಿಯೆ ಇನ್ನಷ್ಟೆ ನಡೆಯಬೇಕಿದೆ. ಇದರ ನಡುವೆ ಇಲ್ಲಿನ ಸೈಟುಗಳನ್ನ ಮಂಜೂರು ಮಾಡಿಕೊಡುವುದಾಗಿ ಜನರಲ್ಲಿ ಆಮಿಷವೊಡ್ಡಿ ಹಣವಸೂಲಿ ಮಾಡುತ್ತಿರುವ ಬಗ್ಗೆ ಹಲವು ವರದಿಗಳು ಸೂಡಾ ಕಚೇರಿ ತಲುಪಿವೆ. ಹೀಗಾಗಿ ಇಂತಹ ಹಣ/ ಯಾವುದೇ ಆಮಿಷಗಳಿಗೆ ಒಳಗಾಗದೇ ಇರಲು ಪ್ರಾಧಿಕಾರ ತಿಳಿಸಿದೆ. ಒಂದು ವೇಳೆ ಇಂತಹ ಯಾವುದೇ ಆಮಿಷಗಳಿಗೆ ತಾವು ಒಳಗಾದಲ್ಲಿ ಈ ಪ್ರಾಧಿಕಾರವು ಜವಾಬ್ದಾರಿಯಾಗಿರುವುದಿಲ್ಲವೆಂದು ಸೂಡಾ ಅಧ್ಯಕ್ಷರಾದ ಹೆಚ್. ಎಸ್. ಸುಂದರೇಶ್ ಮತ್ತು ಆಯುಕ್ತರಾದ ವಿಶ್ವನಾಥ ಮುದಜ್ಜಿ ತಿಳಿಸಿದ್ದಾರೆ.

 

SUMMARY | The Shivamogga-Bhadravati Urban Development Authority has issued a notice to not fall for any lure in the name of the Suda site.

KEY WORDS |‌ Shivamogga-Bhadravati Urban Development Authority , issued a notice  Suda site

Share This Article