SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 11, 2025
ಶಿವಮೊಗ್ಗ| ಕನ್ನಡಕ್ಕೆ ಕೈ ಎತ್ತು ಕನ್ನಡದ ಕಂದ ಎಂಬ ಕವಿ ಸಾಲುಗಳನ್ನು ಮೆಲುಕು ಹಾಕುವಾಗ, ಕನ್ನಡವ ಕಾಪಾಡು ಕನ್ನಡಿಗರಿಂದ ಎಂದು ಹೇಳುವ ಸನ್ನಿವೇಶ ಸೃಷ್ಟಿಯಾಗುತ್ತಿರುವುದು ದುರಂತ. ಎಂದುತಾಲ್ಲೂಕು 11 ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಶ್ರೀ ರಾಮಕೃಷ್ಣ ವಿದ್ಯಾನಿಕೇತನದ ವಿದ್ಯಾರ್ಥಿನಿ ನೇಹಾ ಹೊಸಮನೆ ಅಭಿಪ್ರಾಯಪಟ್ಟರು.
ಶನಿವಾರ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ನಗರದ ಸ್ಯಾನ್ ಜೋಸ್ ಪ್ರೌಢಶಾಲೆಯ ಆವರಣದಲ್ಲಿ ಶನಿವಾರ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ 11 ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಕ್ಕಳಾದ ನಾವು ಕನ್ನಡವನ್ನು ಬೆಳೆಸುವ ಬಳಸುವ ಕನ್ನಡದ ಪ್ರಜ್ಞೆಯನ್ನು ಜಾಗೃತಗೊಳಿಸಿಕೊಳ್ಳಬೇಕಿದೆ. ಯಾವುದೇ ಭಾಷೆಯನ್ನು ಕಲಿಯಲು ಪ್ರಯತ್ನಿಸಿದರು, ಆಂತರ್ಯದಲ್ಲಿ ಗ್ರಹಿಕೆಯಾಗುವುದು ನಮ್ಮ ಮಾತೃಭಾಷೆ ಕನ್ನಡದಿಂದಲೆ ಎಂಬ ಸತ್ಯ ಮರೆಯದಿರಿ. ನಲಿಯಲು, ಕಲಿಯಲು, ಬಾಳಲು, ಬೆಳೆಯಲು, ಕಲಿಸುವ ಪ್ರತಿ ಹಂತಗಳಲ್ಲಿಯೂ ಕನ್ನಡ ಎಂಬುದು ರಾರಾಜಿಸುತ್ತಿರಲಿ.
ನಾಲ್ಕು ಗೋಡೆಗಳ ನಡುವೆ ಪಾಠಕ್ಕಷ್ಟೆ ಸೀಮಿತವಾಗುವ ನಮಗೆ, ಅರಿವಿನ ವಿಸ್ತರಣೆಗೆ ಸಾಹಿತ್ಯ ಸಮ್ಮೇಳನಗಳು ಪ್ರೇರಣೀಯವಾಗಿದೆ. ವಿದ್ಯಾರ್ಥಿಗಳಾದ ನಾವು ಶಾಲಾ ಪಠ್ಯಕ್ರಮದ ಜೊತೆಯಲ್ಲಿ ಸಾಹಿತ್ಯ ಸಂಬಂಧಿ ಪುಸ್ತಕಗಳ ಓದು ರೂಡಿಸಿಕೊಳ್ಳಬೇಕು. ರಾಮಾಯಣ, ಮಹಾಭಾರತದ ಪರೀಕ್ಷೆಗಳನ್ನು ತೆಗೆದುಕೊಳ್ಳಿ. ಬದುಕಿನ ವಿಕಸನಕ್ಕೆ ದಾರಿ ತೋರು ಕೃತಿಗಳನ್ನು ಓದಿ. ಸಮಾಜದಲ್ಲಿ ನಡೆಯುವ ಪ್ರತಿಯೊಂದು ಸರಿ ತಪ್ಪುಗಳನ್ನು ವಿಶ್ಲೇಷಿಸಲು, ಮಕ್ಕಳ ಮೂಲಭೂತ ಹಕ್ಕುಗಳನ್ನು, ಮಹಿಳಾ ದೌರ್ಜನ್ಯಗಳ ಬಗ್ಗೆ ಧ್ವನಿಯೆತ್ತಲು ಮಕ್ಕಳ ಸಾಹಿತ್ಯದ ವೇದಿಕೆಗಳು ಸೃಷ್ಟಿಯಾಗಬೇಕು. ಮಾನವ ಜನ್ಮ ಶ್ರೇಷ್ಟವಾದದ್ದು. ಮಕ್ಕಳಾದ ನಾವು ಮೊಬೈಲ್‌ಗೆ ಸೀಮಿತರಾಗದೆ, ಸಾಹಿತ್ಯವನ್ನು ಅಧ್ಯಯನ ಮಾಡುವ ಮತ್ತು ರಚಿಸುವ ಮೂಲಕ ಸರ್ವತೋಮುಖ ಬೆಳವಣಿಗೆಯಲ್ಲಿ ಸಕ್ರಿಯರಾಗೋಣ ಎಂದು ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಗಾಜನೂರು ಕೆ.ಪಿ.ಎಸ್. ಶಾಲೆಯ ವಿದ್ಯಾರ್ಥಿನಿ ತಾರಾ ಮಾತನಾಡಿ, ನುಡಿಯ ಬಗ್ಗೆ ಅಭಿಮಾನ ಮೂಡಿದರೆ, ನಾಡಿನ ಬಗ್ಗೆ ತಾನಾಗಿಯೇ ಅಭಿಮಾನ ಮೂಡುತ್ತದೆ. ಭಾಷೆಯ ಜೊತೆಗೆ ಪ್ರಾದೇಶಿಕ ಸಂಸ್ಕೃತಿ, ಸಂಸ್ಕಾರಗಳನ್ನು ಮಕ್ಕಳಾದ ನಾವು ರೂಡಿಸಿಕೊಳ್ಳಬೇಕಿದೆ. ಅನೇಕ ಕನ್ನಡದ ಸಾಹಿತಿಗಳು ಕನ್ನಡ ಸಾಹಿತ್ಯ ಸಾಂಸ್ಕೃತಿಕ ನೆಲೆಯನ್ನು ಗಟ್ಟಿಗೊಳಿಸಿದ್ದು, ಅಂತಹ ನೆಲೆಗಟ್ಟುಗಳು ನಮ್ಮಂತಹ ಮಕ್ಕಳಿಗೆ ದಾರಿ ದೀಪವಾಗಲಿದೆ. ಈ ಹಿನ್ನಲೆಯಲ್ಲಿ ಆಧುನಿಕತೆಯ ಅಂಧತ್ವದಿಂದ ಹೊರಬಂದು, ಅಧ್ಯಯನ ಜೊತೆಯಲ್ಲಿ ಸಾಂಸ್ಕೃತಿಕವಾಗಿ ಬೆಳೆಯೋಣ ಎಂದು ಹೇಳಿದರು.
SUMMARY | It is a tragedy that a situation is being created where the poet recalls the lines of ‘Kannada Kanda’ and says ‘Save Kannada’ from Kannadigas.
KEYWORDS | Save Kannada, Kannadigas, poet,