ಕೋಟೆ ಅಂಜನೇಯ ಸ್ವಾಮಿ ದೇಗುಲದಲ್ಲಿ ತೆಪ್ಪೋತ್ಸವ | ನಗರದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ | ರಾಷ್ಟ್ರೀಯ ಯುವ ದಿನ | ಯಾವಾಗ ಗೊತ್ತಾ

programs in shivamogga city, kote anjaneya temple

ಕೋಟೆ ಅಂಜನೇಯ ಸ್ವಾಮಿ ದೇಗುಲದಲ್ಲಿ ತೆಪ್ಪೋತ್ಸವ | ನಗರದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ | ರಾಷ್ಟ್ರೀಯ ಯುವ ದಿನ  | ಯಾವಾಗ ಗೊತ್ತಾ

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 10, 2025 ‌‌   ‌

ನಗರದ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಜನವರಿ 14 ರ ರಾತ್ರಿ 7:30 ಕ್ಕೆ ವೈಭವದ ತೆಪ್ಪೋತ್ಸವ ನಡೆಯಲಿದೆ. ಈ ಸಂಬಂಧ ತೆಪ್ಪೋತ್ಸವ ಕಮಿಟಿ ಸದಸ್ಯ ಹೆಚ್.ಹೆಚ್.ನಾಗೇಶ್‌ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇನ್ನು ವಿದ್ಯುತ್ ದೀಪಾಲಂಕಾರ, ಸಿಡಿಮದ್ದು ಪ್ರದರ್ಶನ, ಮಂಗಳವಾದ್ಯ, ಭಕ್ತಿ ಸಂಗೀತ ಹಾಗೂ ಭಜನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ತೆಪ್ಪೋತ್ಸವ ದಲ್ಲಿ ಭಾಗವಹಿಸುವಂತೆ ತೆಪ್ಪೋತ್ಸವ ಕಮಿಟಿ ಸದಸ್ಯರು ಆಹ್ವಾನಿಸಿದ್ದಾರೆ. 

ರಾಷ್ಟ್ರೀಯ ಯುವ ದಿನ-2025

ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರವರ 162ನೇ ಜನ್ಮ ದಿನಾಚರಣೆ ಪ್ರಯುಕ್ತ ಜನವರಿ 11 ರಂದು ಬೆಳ್ಳಿಗೆ 10:30 ರಾಷ್ಟ್ರೀಯ ಯುವ ದಿನ-2025 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮವನ್ನ ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಲಿದ್ದಾರೆ ಎಂದು ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಅಂತರ್‌ ಕಾಲೇಜು ಮಟ್ಟದ ಚರ್ಚಾ ಸ್ಪರ್ಧೆ ಆಯೋಜನೆ ಮಾಡಲಾಗಿದ್ದು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರಾಂಶುಪಾಲರು ತಿಳಿಸಿದ್ದಾರೆ.

 ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ 

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ನೇತೃತ್ವದಲ್ಲಿ ಆಲ್ಕೋಳ ವೃತ್ತದ ಬಳಿಯಿರುವ ಸ್ಯಾನ್ ಜೋಸ್ ಪ್ರೌಢಶಾಲಾ ಆವರಣದಲ್ಲಿ ಜನವರಿ 11 ರಂದು ಶನಿವಾರ ಶಿವಮೊಗ್ಗ ತಾಲ್ಲೂಕು ಹನ್ನೊಂದನೆಯ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಏರ್ಪಡಿಸಲಾಗಿದೆ.  ಸಮ್ಮೇಳನದ  ಸರ್ವಾಧ್ಯಕ್ಷರಾಗಿ ಗೋಪಾಳದ ರಾಮಕೃಷ್ಣ ವಿದ್ಯಾನಿಕೇತನದ ವಿದ್ಯಾರ್ಥಿನಿ ನೇಹಾ ಹೊಸಮನೆ ಆಯ್ಕೆಯಾಗಿದ್ದಾರೆ. ಗಾಜನೂರು ಕೆ.ಪಿ.ಎಸ್. ಶಾಲೆಯ ವಿದ್ಯಾರ್ಥಿನಿ ತಾರಾ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾದ  ಡಿ. ಮಂಜುನಾಥ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಸ್. ಆರ್. ಮಂಜುನಾಥ, ಕ್ಷೇತ್ರ ಶಿಕ್ಷಣಾಧಿಕಾರಿ ನೇತ್ರಾವತಿ   ಸ್ಯಾನ್ ಜೋಸ್‌‌ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ರೆ. ಫಾದರ್ ಸಾಜನ್ ಕೆ. ಟಿ., ಸಹ ಶಿಕ್ಷಕರಾದ ಭದ್ರಪ್ಪ ಭಾಗವಹಿಸಲಿದ್ದಾರೆ. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಮಹಾದೇವಿ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ. 



SUMMARY | programs in shivamogga city, kote anjaneya temple

KEY WORDS |‌  programs in shivamogga city, kote anjaneya temple