ವಿದ್ಯಾರ್ಥಿ ನಿಲಯದ ಉದ್ಘಾಟನೆಯಲ್ಲಿ ಸರಳತೆ ಮೆರೆದ ಮಧು ಬಂಗಾರಪ್ಪ

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 21, 2024

ಸೊರಬ | ತಮ್ಮ ಕಾರ್ಯಕ್ರಮವೊಂದರಲ್ಲಿ ಉಸ್ತುವಾರಿ ಸಚಿವ ಮಧು ಬಂಗಾರಪ್ಪರವರು ಸರಳತೆಯನ್ನು ಮೆರೆದಿದ್ದಾರೆ. ಶಿವಮೊಗ್ಗ ಜಿಲ್ಲಾ ಪ್ರವಾಸದಲ್ಲಿರುವ ಸಚಿವರು ಇವತ್ತು ಸೊರಬದ ಸಮನವಳ್ಳಿ ಗ್ರಾಮದಲ್ಲಿ‌ರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದ ಉದ್ಘಾಟನೆ ಕಾರ್ಯಕ್ರಮ‌ದ ಉದ್ಘಾಟನೆಗೆ ತೆರಳಿದ್ದರು. ಈ ವೇಳೆ ಮಧುಬಂಗಾರಪ್ಪರವರು ಸಮಾರಂಭದಲ್ಲಿ ಭಾಗವಹಿಸಿದ್ದ ವಿದ್ಯಾರ್ಥನಿಯರನ್ನು ವೇದಿಕೆಗೆ ಆಹ್ವಾನಿಸಿದರು. ಅಷ್ಟೇ ಅಲ್ಲದೆ ವಿದ್ಯಾರ್ಥಿನಿಯರ ಕೈಗೆ ಕ್ಯಾಂಡಲ್ ಕೊಟ್ಟು ಕಾರ್ಯಕ್ರಮ ಉದ್ಘಾಟಿಸುವಂತೆ ಹೇಳಿದರು. ವಿದ್ಯಾರ್ಥಿನಿಯರು ಖುಷಿಯಿಂದ ಕಾರ್ಯಕ್ರಮ ಉದ್ಘಾಟಿಸಿದರು.  ಸಚಿವರ ಸರಳತೆ ಸಜ್ಜನಿಕೆಗೆ ಈ ಸನ್ನಿವೇಶ ಸಾಕ್ಷಿಯಾಗಿತ್ತು.

SUMMARY |   The inaugural function was to be presided over by Education Minister Madhu Bangarappa. But Madhu Bangarappa surprisingly invited the students who attended the function to the stage.

KEYWORDS | inaugural function, Madhu Bangarappa,  students, soraba,

Share This Article