ತಿಥಿಯೂಟದ ವೇಳೆ ಸಂಬಂಧಿಕರ ಗಲಾಟೆ, ಪೊಲೀಸರ ಎಂಟ್ರಿ | ಆಟೋ ಬಾಡಿಗೆ ವಿಚಾರಕ್ಕೆ ಕಿರಿಕ್‌ , 112 ಮಾಡಿದ್ದೇನು?

13

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 6, 2024 ‌ 

ತಿಥಿಯೂಟದ ವೇಳೆ ಸಂಬಂಧಿಕರ ನಡುವೆ ಗಲಾಟೆಯಾಗಿ ಪೊಲೀಸರು ಮಧ್ಯಪ್ರವೇಶ ಮಾಡಿದ ಪ್ರಸಂಗವೊಂದು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ನಲ್ಲಿ ನಡೆದಿದೆ. ಇಲ್ಲಿನ ನ್ಯೂಟೌನ್‌ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳೀಯ ನಿವಾಸಿಯೊಬ್ಬರು ತಮ್ಮ ಸಂಬಂಧಿಕರೊಬ್ಬರ ತಿಥಿಯೂಟ ಆಯೋಜಿಸಿದ್ದರು. ಈ ವೇಳೆ ತಿಥಿಯೂಟಕ್ಕೆ ಬಂದಿದ್ದ ಸಂಬಂಧಿಕರ ನಡುವೆ ಗಲಾಟೆಯಾಗಿದೆ. ಸ್ಥಳದಲ್ಲಿದ್ದವರು ಕೈ ಮೀರಿದ ಪರಿಸ್ಥಿತಿಯಲ್ಲಿ ಪೊಲೀಸರಿಗೆ ಕರೆ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಎಲ್ಲರಿಗೂ ತಿಳಿ ಹೇಳಿದ್ದಾರೆ.ಅಲ್ಲದೆ ಸ್ಟೇಷನ್‌ಗೆ ಬಂದು ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ತಿಳುವಳಿಕೆ ನೀಡಿ ತೆರಳಿದರು. 

ಆಟೋ ಬಾಡಿಗೆ ವಿಚಾರಕ್ಕೆ ಕಿರಿಕ್

ಇನ್ನೊಂದೆಡೆ ಆಟೋ ಬಾಡಿಗೆ ಹೆಚ್ಚು ಪಡೆದ ವಿಚಾರಕ್ಕೆ ಪ್ರಯಾಣಿಕರು ಆಟೋದವರ ನಡುವೆ ನಡೆದ ಗಲಾಟೆಯನ್ನು ಪೊಲೀಸರು ತಿಳಿಗೊಳಿಸಿದ್ದಾರೆ. ಭದ್ರಾವತಿ ಔಲ್ಡ್‌ ಟೌನ್‌  ಪೊಲೀಸ್‌ ಸ್ಟೇಷನ್‌ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 112 ಮೂಲಕ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತೆರಳಿ ಆಟೋ ಬಾಡಿಗೆ ಹಣದ ವಿಚಾರವಾಗಿ ಗಲಾಟೆ ಮಾಡುತ್ತಿರುವವರನ್ನ ವಿಚಾರಿಸಿದ್ದಾರೆ. ಬಳಿಕ ದೂರುದಾರರ ಹಣ ವಾಪಸ್‌ ಕೊಡುವಂತೆ ತಿಳಿಸಿ, ಎಚ್ಚರಿಕೆ ಕೊಟ್ಟು ವಾಪಸ್‌ ಆಗಿದ್ದಾರೆ. 

SUMMARY | ‌ shivamogga bhadravathi news today 

KEY WORDS | shivamogga news , bhadravathi news today

Share This Article