KARNATAKA NEWS/ ONLINE / Malenadu today/ Jun 28, 2023 SHIVAMOGGA NEWS
ಶಿವಮೊಗ್ಗ ನಗರದಲ್ಲಿ ನಡೆದಿದ್ದ ಕಮಲಮ್ಮ ಕೊಲೆ ಪ್ರಕರಣದಲ್ಲಿ ಆರು ಆರೋಪಿಗಳನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.
17-06-23 ರ ಸಂಜೆ ಶಿವಮೊಗ್ಗ ನಗರದ ವಿಜಯ ನಗರದ 2ನೇ ತಿರುವಿನಲ್ಲಿ ಮನೆಯಲ್ಲಿದ್ದ ಒಂಟಿ ಮಹಿಳೆ ಕಮಲಮ್ಮ(57) ರ ಕೊಲೆ ಪ್ರಕರಣವನ್ನು ಶಿವಮೊಗ್ಗ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಇವತ್ತು ಆರು ಆರೋಪಿಗಳನ್ನ ಬಂಧಿಸಿದ್ದಾರೆ. ಕಾರ್ ಡ್ರೈವರ್ ಹನುಮಂತ ನಾಯ್ಕ್ ಸೇರಿದಂತೆ, ಆರು ಮಂದಿಯನ್ನ ಅರೆಸ್ಟ್ ಮಾಡಲಾಗಿದ್ದು, ಅವರನ್ನ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗಿದೆ.
ಆರೋಪಿಗಳ ಪೈಕಿ ಮೂವರು ಅನುಪಿನಕಟ್ಟೆಯವರು, ಇಬ್ಬರು ಗುಂಡಪ್ಪಶೆಡ್ ನವರು ಹಾಗೂ ಓರ್ವ ಹುಣಸೋಡು ಮೂಲದವನು ಎಂಬುದಾಗಿ ತಿಳಿದುಬಂದಿದೆ.
