KARNATAKA NEWS/ ONLINE / Malenadu today/ Jun 22, 2023 SHIVAMOGGA NEWS
ಶಿವಮೊಗ್ಗ/ ಇತ್ತೀಚೆಗೆ ವಿಜಯನಗರದಲ್ಲಿ ನಡೆದಿದ್ದ ಕಮಲಮ್ಮ ಎಂಬ ಮಹಿಳೆಯ ಕೊಲೆ ಪ್ರಕರಣದ ಆರೋಪಿ ಎಂದು ಪೊಲೀಸರು ಸಂಶಯಿಸಿರುವ ವ್ಯಕ್ತಿಯ ತಾಯಿಯ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಶಿವಮೊಗ್ಗ ತಾಲ್ಲೂಕಿನ ಅಬ್ಬಲಗೆರೆ ನಿವಾಸಿಯಾದ 50 ವರ್ಷದ ಮಹಿಳೆಯು ಆತ್ಮಹತ್ಯೆಗೆ ಯತ್ನಿಸಿದ್ಧಾರೆ.
ಈ ಬಗ್ಗೆ ಮಲೆನಾಡು ಟುಡೆಯಲ್ಲಿ ಪ್ರಕಟವಾದ ವರದಿ ಇಲ್ಲಿದೆ ಇಂಜಿನಿಯರ್ ಪತ್ನಿಯ ಕೊಲೆ! ಮಿಸ್ಸಿಂಗ್ ಆದ 32 ಲಕ್ಷ ರೂಪಾಯಿ ಎಲ್ಲಿ? ಆತ ಗೋವಾಕ್ಕೆ ಹೋಗದೇ ಮನೇಗೇಕೆ ಬಂದಿದ್ದ! ನಿಗೂಢ ಹತ್ಯೆಯ ಇನ್ಸೈಡ್ ಸ್ಟೋರಿ JP ಬರೆಯುತ್ತಾರೆ
ನಡೆದಿದ್ದೇನು?
ಜೂನ್ 17ರಂದು ಶಿವಮೊಗ್ಗದ ವಿಜಯನಗರದಲ್ಲಿ ಕಮಲಮ್ಮ ಎಂಬುವರನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಅವರ ಮನೆಯ ಕಾರು ಚಾಲಕ ಪ್ರಮುಖ ಸಸ್ಪೆಕ್ಟ್ ಆಗಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ಆತನ ತಲಾಶ್ ನಲ್ಲಿದ್ದರು. ಈ ಮಧ್ಯೆ ಅವರ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವತ್ತು ಬೆಳಗ್ಗೆ ಅವರನ್ನ ಮೆಗ್ಗಾನ್ ಆಸ್ಪತ್ರೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.