KARNATAKA NEWS/ ONLINE / Malenadu today/ Jun 26, 2023 SHIVAMOGGA NEWS
ಶಿವಮೊಗ್ಗ ಜಿಲ್ಲೆ ತಿರ್ಥಹಳ್ಳಿ ತಾಲ್ಲೂಕಿನಲ್ಲಿ ಆಗಾಗ ನಡೆಯೋ ಘಟನೆಗಳು ದೊಡ್ಡ ಮಟ್ಟಿಗೆ ಸುದ್ದಿಯಾಗುತ್ತವೆ. ಅದರಲ್ಲಿಯು ಕಳೆದ ಎರಡು ವಾರಗಳ ಅಂತರದಲ್ಲಿ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ನಡೆದ ಮೂರು ಪ್ರಮುಖ ಘಟನೆಗಳು ವ್ಯಾಪ್ತಿಯ ಎಲ್ಲೆ ಮೀರಿ ಚರ್ಚೆಗೆ ಕಾರಣವಾಗಿದೆ. ಸೈಲೆಂಟ್ ಆಗಿ ನಡೆದಿದ್ದ ಯುವತಿಯರ ಅಶ್ಲೀಲ ವಿಡಿಯೋ ಕೇಸ್ನ ಪ್ರಕರಣದಲ್ಲಿ ಸಂಘಟನೆಯ ಯುವಕನೇ ಅರೆಸ್ಟ್ ಆಗಿದ್ದ. ಅದರ ಬೆನ್ನಲ್ಲೆ ವೇಶ್ಯಾವಾಟಿಕೆಯ ಘಟನೆ ರಾಜ್ಯದೆಲ್ಲೆಡೆ ಸುದ್ದಿಯಾಗಿತ್ತು. ಇದೀಗ ಮತ್ತೊಂದು ಸುದ್ದಿ ಹೊರಬಿದ್ದಿದೆ. ಈ ಸುದ್ದಿ ಮಲೆನಾಡಲ್ಲಿ ಇಂತಹದ್ದು ನಡೆಯುತ್ತಾ ಎಂದು ಆಶ್ಚರ್ಯ ಪಡುವಂತೆ ಮಾಡುತ್ತದೆ
ಟಿಪ್ಪು ನಗರದಲ್ಲಿ ನಡೆದಿದ್ದೇನು? ದ್ರೌಪದಮ್ಮ ಸರ್ಕಲ್ ನಲ್ಲಿ ಆಗಿದ್ದೇನು? ಎಸ್ಪಿ ಮಿಥುನ್ ಕುಮಾರ್ ಸ್ಪಷ್ಟನೆ ಏನು ಗೊತ್ತಾ?
ಘಟನೆ ಬೆಳಕಿಗೆ ಬಂದಿದ್ದು ಹೇಗೆ?
ಅಂದಹಾಗೆ, ಈ ಘಟನೆ ಬೆಳಕಿಗೆ ಬಂದಿದ್ದು ತೀರ್ಥಹಳ್ಳಿ ಪೊಲೀಸರು ಓರ್ವ ಯುವತಿಯನ್ನ ಬಂಧಿಸಿ ಜೆಸಿಗೆ ಕಳಿಸಿದ ಬಳಿಕ. ಆಕೆಯೊಂದಿಗೆ ಇನ್ನೊಬ್ಬನು ಸಹ ಅರೆಸ್ಟ್ ಆಗಿದ್ದಾನೆ. ತೀರ್ಥಹಳ್ಳಿಯಲ್ಲಿ ಹನಿಟ್ರ್ಯಾಪ್ ಮಾಡಿದ್ದಾರಂತೆ ಹುಡುಗಿಯೊಬ್ಬಳನ್ನ ಅರೆಸ್ಟ್ ಮಾಡಿದ್ರಂತೆ…ಬಾರಿ ದುಡ್ಡು ತಗಂಡಾರಂತೆ.. ಹಾಗಂತೆ.. ಹೀಗಂತೆ.. ಹೀಗೆ ಗಾಳಿ ಸುದ್ದಿಯೊಂದು ತೀರ್ಥಹಳ್ಳಿ ಪೊಲೀಸರ ಕಾರ್ಯಾಚರಣೆ ಬೆನ್ನಲ್ಲೆ ಹರಿದಾಡತೊಡಗಿತ್ತು. ಸುದ್ದಿಯ ಸುಳಿವು ಹಿಡಿದು ಹೊರಟಾಗ ಸಿಕ್ಕಿದ್ದು ರೋಚಕ ಸ್ಟೋರಿ..
ಒತ್ತುವರಿಗಾಗಿ ಆರೋಪಿಗಳ ಸ್ಕೆಚ್
ಮಲ್ನಾಡ್ನಲ್ಲಿ ಒತ್ತುವರಿ ಮಾಡೋದು ದೊಡ್ಡ ವಿಷಯವೇನಲ್ಲ. ಹಾಗಂತ ಸುಲಭವೂ ಅಲ್ಲ, ಕಾಡನ್ನ ಕಡಿದು ಬೇಲಿ ಹಾಕಿ, ಅಲ್ಲಿ ಪೊಜಿಷನ್ ತಗೊಳ್ಳೋದು ಸಲೀಸಾಗಿ ನಡೆಯುವ ವಹಿವಾಟಲ್ಲ. ಆದರೆ ಇದೇ ಕಾರಣಕ್ಕೆ ಅರಣ್ಯ ಇಲಾಖೆಯ ಅಧಿಕಾರಿಯನ್ನೇ ಹನಿಟ್ರ್ಯಾಪ್ಗೆ ಬಿಳಿಸೋ ಪ್ಲಾನ್ ಮಾಡ್ತಾರೆ. ಅಷ್ಟೆಅಲ್ಲದೆ ತಮ್ಮ ಖೆಡ್ಡಾದಲ್ಲಿ ಆಫಿಸರ್ನನ್ನ ಬೀಳಿಸಿಕೊಳ್ತಾರೆ ಅಂದರೆ, ಆರೋಪಿಗಳ ಮೈಂಡ್ ಗೇಮ್ ಎಷ್ಟರಮಟ್ಟಿಗೆ ಕೆಲಸ ಮಾಡಿರಬಹುದು ಅಲ್ವಾ!
ಡಿಆರ್ಎಫ್ಒ ಅಧಿಕಾರಿಗೆ ಹನಿಟ್ರ್ಯಾಪ್ ಸ್ಕೆಚ್
ಫಾರೆಸ್ಟ್ ಭೂಮಿಯನ್ನ ಕಬಳಿಸೋಕೆ ಇಂತಹದ್ದೊಂದು ಪ್ಲಾನ್ ನಡೆದಿದ್ದು ಮಲೆನಾಡಲ್ಲಿ ಇದೇ ಮೊದಲಿರಬೇಕು.ನಡೆದಿದ್ದನ್ನ ನಡೆದ ಹಾಗೆ ನೋಡುತ್ತಾ ಹೋಗುವಾದರೆ, ಇಂತಹದ್ದೊಂದು ಸ್ಕೆಚ್ ಆಗಿದ್ದು, ಎರಡು ತಿಂಗಳ ಹಿಂದೆ. ತೀರ್ಥಹಳ್ಳಿ ಅ… ಎಂಬಾತನಿಗೆ ತನ್ನ ಮನೆ ಪಕ್ಕದ ಫಾರೆಸ್ಟ್ ಜಾಗವನ್ನು ಕ್ಲೀನ್ ಮಾಡಿಸಿಕೊಂಡು ಒತ್ತುವರಿ ಮಾಡಿಕೊಳ್ಳಬೇಕಿರುತ್ತೆ. ಆದರೆ ಅರಣ್ಯಭೂಮಿಯನ್ನ ಒತ್ತುವರಿ ಮಾಡಲು ಹೋದರೆ, ಅರಣ್ಯ ಇಲಾಖೆ ಬಿಡುತ್ತಾ? ಚಾನ್ಸೇ ಇಲ್ಲ! ಹಾಗಾಗಿ ಭೂಮಿಯನ್ನ ಕಬಳಿಸೋಕೆ ಆ ವ್ಯಾಪ್ತಿಯ ಅಧಿಕಾರಿಯನ್ನ ಒಳಗೆ ಹಾಕಿಕೊಳ್ಳಬೇಕು. ಅಧಿಕಾರಿ ಮಾತು ಕೇಳುವಂತೆ ಮಾಡಬೇಕು! ಇದಕ್ಕಾಗಿ ಆರೋಪಿ ಹಣೆದ ಬಲೆಯ ಹೆಸರು ಹನಿಟ್ರ್ಯಾಪ್…!!
ಸ್ಕೆಚ್ ಒಂದೇ …ಆರೋಪಿಗಳು ವಿಭಿನ್ನ
ಇದಕ್ಕಾಗಿ ಆರೋಪಿ ಇನ್ನು ಕೆಲವರ ಸಾಥ್ ಪಡೆಯುತ್ತಾನೆ. ತೀರ್ಥಹಳ್ಳಿಯಲ್ಲಿ ಸಂಘಟನೆಯೊಂದರಲ್ಲಿ ಇದ್ದಾರೆ ಎನ್ನಲಾದ ಹುಡುಗ, ಮತ್ತೊಬ್ಬ ಪು….. ಹಾಗೂ ಶಿವಮೊಗ್ಗ ಮೂಲದ ಕಾ…. ಎಂಬಾತ ಅ…ನ ಜೊತೆಗೆ ಸೇರಿಕೊಂಡು ಫಾರೆಸ್ಟ್ ಜಾಗ ಕಬಳಿಸೋಕೆ ಜಾತ್ಯಾತೀತವಾಗಿ ಸ್ಕೆಚ್ ಹಾಕುತ್ತಾರೆ. ಹಾಕಿದ ಸ್ಕೆಚ್ನ ಪ್ರಕಾರ, ಈ ಮೊದಲೇ ಹನಿಟ್ರ್ಯಾಪ್ ಕೇಸ್ನಲ್ಲಿ ಸ್ವಲ್ಪದರಲ್ಲಿಯೇ ಬಚಾವ್ ಆಗಿದ್ದ ಹುಡುಗಿಯೊಬ್ಬಳಿಗೆ ಆರೋಪಿಗಳು ಡಿಆರ್ಎಫ್ಒ ನ ನಂಬರ್ನ್ನ ನೀಡುತ್ತಾರೆ..
ಹಳೆ ಲೇಡಿ ಹೊಸ ಗ್ಯಾಂಗ್ , ರೆಡಿಯಾಯ್ತು ಪ್ಲಾನ್
ಯುವತಿಗೆ ಅಧಿಕಾರಿಯನ್ನು ಸಂಪರ್ಕಿಸುವುದು, ಪರಿಚಯಿಸಿಕೊಳ್ಳುವುದು ಹಾಗೂ ಸ್ನೇಹ ಬೆಳಸಿಕೊಂಡು, ಹತ್ತಿರವಾಗೋದಕ್ಕೆ ಜಾಸ್ತಿ ಸಮಯ ಬೇಕಾಗಲಿಲ್ಲ. ಈಕೆಯ ಕರೆಯನ್ನು ನಂಬಿದ ಅಧಿಕಾರಿ ಒಮ್ಮೆ ಮನೆಗೆ ಬನ್ನಿ ಎಂದು ಆಹ್ವಾನ ಕೊಟ್ಟಿದ್ದರು. ಅದೇ, ಅವರು ಮಾಡಿದ ದೊಡ್ಡ ತಪ್ಪಾಗಿತ್ತು. ಏಕೆಂದರೆ, ಅವರು ಟ್ರ್ಯಾಪ್ ಆಗಿದ್ದರು.
ಅಧಿಕಾರಿಯ ಮನೆಗೆ ನುಗ್ಗಿ ಹಲ್ಲೆ !
ಹೌದು, ಫಾರೆಸ್ಟ್ ಅಧಿಕಾರಿಯ ಆಹ್ವಾನದ ಮೇರೆಗೆ ಮನೆಗೆ ಬಂದ ಯುವತಿಯ ಬೆನ್ನಲ್ಲೆ ಆರೋಪಿಗಳೆಲ್ಲಾ ಅಲ್ಲಿ ಹಾಜರಾಗಿ ಅಧಿಕಾರಿಯನ್ನ ಹಿಡಿದು ಅನೈತಿಕ ಪೊಲೀಸ್ ಗಿರಿ ಮಾಡಿದ್ದಾರೆ. ಆತನ ಮೇಲೆ ಹಲ್ಲೆ ನಡೆಸಿ, ಕೊನೆಗೆ ಡೀಲ್ಗೆ ಬಂದಿದ್ದಾರೆ. ಅಧಿಕಾರಿಯು ಹೆದರಿಕೊಂಡು, ತಮ್ಮ ಮನೆಯಲ್ಲಿದ್ದ 87 ಸಾವಿರ ರೂಪಾಯಿಯನ್ನು ಆರೋಪಿಗಳಿಗೆ ನೀಡಿದ್ದಾರೆ. ಕೊನೆಗೆ ಐದು ಲಕ್ಷ ರೂಪಾಯಿಗೆ ಮ್ಯಾಟರ್ ಡೀಲ್ ಆಗಿದೆ. ಇದರ ನಡುವೆ ಪತ್ರಕರ್ತ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬನು ಸಹ ಡೀಲ್ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂಬ ಮಾಹಿತಿಯು ಇದೆ.
ಐದು ಲಕ್ಷಕ್ಕೆ ಡೀಲ್! 87ಸಾವಿರ ಅಡ್ವಾನ್ಸ್
ಆರಂಭದಲ್ಲಿ ಅಧಿಕಾರಿಗೆ ಐದು ಲಕ್ಷ ರೂಪಾಯಿಗೆ ಡೀಲ್ ಇಟ್ಟು , ಕೊಟ್ಟ ಟೋಕನ್ ಹಣವನ್ನು ಹಂಚಿಕೊಂಡಿದ್ದರು ಆರೋಪಿಗಳು. ಆದರೆ ಆನಂತರ ಅಧಿಕಾರಿಗೆ ಟಾರ್ಚರ್ ಕೊಡಲು ಆರಂಭಿಸಿದ್ದಾರೆ. ಇದರಿಂದ ಅಧಿಕಾರಿ ರೋಸಿಹೋಗಿದ್ದಾರೆ. ಅದೃಷ್ಟಕ್ಕೆ ಅಷ್ಟರಲ್ಲಿ ವಿಷಯ ತೀರ್ಥಹಳ್ಳಿ ಪೊಲೀಸರಿಗೆ ಗೊತ್ತಾಗಿದೆ.
ಸೈಲೆಂಟ್ ಆಗಿ ಎಂಟ್ರಿಕೊಟ್ಟ ಪೊಲೀಸ್
ಡಿಪಾರ್ಟ್ಮೆಂಟ್ನ ಅಧಿಕಾರಿಗಳು ಸೈಲೆಂಟ್ ಆಗಿ ಎನ್ಕ್ವೈರಿ ಆರಂಭಿಸಿದ್ದಾರೆ. ಏಕೆಂದರೆ, ಈ ಹಿಂದೆಯು ಇದೇ ರೀತಿಯಲ್ಲಿ ನಡೆದಿದ್ದ ಹನಿಟ್ರ್ಯಾಪ್ ಕೇಸ್ ಬಗ್ಗೆ ತೀರ್ಥಹಳ್ಳಿ ಪೊಲೀಸರಿಗೆ ಮೊದಲೇ ಮಾಹಿತಿಯಿತ್ತು. ಅದನ್ನ ಸಮರ್ಪಕವಾಗಿ ಹ್ಯಾಂಡಲ್ ಮಾಡಿದ್ದ ಪೊಲೀಸರು, ಡಿಆರ್ಎಫ್ಒ ಕೇಸನ್ನ ಕೂಡ ಕೈಗೆತ್ತಿಕೊಂಡಿದ್ದರು. ಆದರೆ ಅಷ್ಟರಲ್ಲಿ ಮ್ಯಾಟ್ರು ಲೀಕ್ ಆಗಿ, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಹಿಂದೆಯು ಹನಿ ಬಲೆ ಬೀಸಿದ್ದ ಯುವತಿ
ಈ ಹಿಂದೆ ನಡೆದಿದ್ದ ಹನಿಟ್ರ್ಯಾಪ್ ಕೇಸ್ನಲ್ಲಿ ಯುವತಿ ಜಸ್ಟ್ ಮಿಸ್ ಆಗಿದ್ದಳು. ಆ ವಿಚಾರದಲ್ಲಿ ಪೊಲೀಸರು ಮಹಿಳೆ ಎಂಬ ಕರುಣೆ ತೋರಿದ್ದರು ಎಂಬಂತೆ ಕಂಡಿತ್ತು. ಆದರೆ ಈ ಸಲ ಅಂತಹ ಅಂತಃಕರಣೆಗೆ ಅವಕಾಶವಿರಲಿಲ್ಲ. ಹೀಗಾಗಿ ಯುವತಿಯನ್ನ ಅರೆಸ್ಟ್ ಮಾಡಿ, ಜೆಸಿಗೆ ಕಳುಹಿಸಿದ್ದಾರೆ. ಆಕೆಯ ಜೊತೆಗೆ ಇನ್ನಿಬ್ಬರನ್ನ ಅರೆಸ್ಟ್ ಮಾಡಿರುವ ಪೊಲೀಸರು ನಾಲ್ವರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಕಾಡಾನೆಗಳನ್ನ ಖೆಡ್ಡಾಕ್ಕೆ ಬೀಳಿಸಲು ಹೆಣ್ಣಾನೆಯನ್ನ ಬಳಸಿಕೊಂಡು ಫಾರೆಸ್ಟ್ ಅಧಿಕಾರಿಗಳು ಹನಿಟ್ರ್ಯಾಪ್ ಮಾಡುತ್ತಾರೆ. ಆದರೆ ಅದೇ ಹನಿಟ್ರ್ಯಾಪ್ ಪ್ಲಾನ್ ನಲ್ಲಿ ಫಾರೆಸ್ಟ್ ಅಧಿಕಾರಿಯನ್ನೆ ಖೆಡ್ಡಾಕ್ಕೆ ಬೀಳಿಸಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳಿಗು ಶಾಕ್ ಕೊಟ್ಟಿದೆ.
