KARNATAKA NEWS/ ONLINE / Malenadu today/ Jun 15, 2023 SHIVAMOGGA NEWS
ಆಯನೂರು ಮಂಜುನಾಥ್/ ವಿದ್ಯುತ್ ದರ ಏರಿಕೆಗೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತರು ಶಾಸಕ ಎಸ್.ಎನ್.ಚನ್ನಬಸಪ್ಪ ರವರ ನೇತೃತ್ವದಲ್ಲಿ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ್ದು ಸರಿ ಇದೆ. ಆದರೆ ಪ್ರತಿಭಟನೆಯ ದಾರಿ ಸರಿ ಇರಲಿಲ್ಲ ಎಂದು ಆಯನೂರು ಮಂಜುನಾಥ್ ಹೇಳಿದ್ಧಾರೆ.
ಶಾಸಕರಿಂದ ಪ್ರಚೋದನೆ
ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿ ಕರೆದು ಮಾತನಾಡಿದ ಅವರು, ಚನ್ನಬಸಪ್ಪನವರು ತಾವು ಶಾಸಕರು ಎಂಬುದನ್ನೇ ಮರೆತಂತಿದೆ ಎಂದು ವ್ಯಂಗ್ಯವಾಡಿದ್ರು. ಶಾಸಕರು ಕಾರ್ಯಕರ್ತರನ್ನು ಪ್ರಚೋದಿಸಿ ಕಲ್ಲು ತೂರಾಟಕ್ಕೆ ಕಾರಣರಾಗಿದ್ದಾರೆ. ಶಾಸನ ಮಾಡುವ ಅವರೇ ಶಾಂತಿಭಂಗಗೊಳಿಸುತ್ತಾರೆಂದರೆ ಅದು ತಪ್ಪಾಗುತ್ತದೆ.
ಸಿಗಂದೂರು ಸೇತುವೆ ನಿರ್ಮಾಣ ಕಾಮಗಾರಿ ಅಂದುಕೊಂಡತೆ ಮುಗಿಯುವುದು ಅನುಮಾನ! ಕಾರಣ ಶರಾವತಿ ಹಿನ್ನೀರಿನ ಕೊರತೆ ! ಏಕೆ ಗೊತ್ತಾ? JP ಬರೆಯುತ್ತಾರೆ
ಬಹುಶಃ ಪ್ರತಿಭಟನೆಯಂತಹ ಸಮಯದಲ್ಲಿ ಇಂತಹ ಕಲ್ಲು ತೂರಾಟದಂತಹ ಪ್ರಕರಣ ನಡೆದಿರುವುದು ಇದೇ ಮೊದಲು ಎಂದು ಜೆಡಿಎಸ್ ಮುಖಂಡ ಅಭಿಪ್ರಾಯ ಪಟ್ಟರು. ಅಲ್ಲದೆ ಈ ಘಟನೆಯಿಂದ ಮುಂದೆ ಶಿವಮೊಗ್ಗ ಶಾಂತಿಯುತವಾಗಿ ಇರುತ್ತದೆಯೇ ಎಂಬ ಬಗ್ಗೆಯೇ ಅನುಮಾನ ಬರುತ್ತಿದೆ ಎಂದ ಅವರು, ಇನ್ನಾದರೂ ಚನ್ನಬಸಪ್ಪ ಎಚ್ಚರಿಕೆ ವಹಿಸಲಿ , ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲಿ ಎಂದರು
ನಾಳೆಯಿಂದ ಮೂರು ದಿನ (ಜೂನ್ 16,17,18) ಮೆಗ್ಗಾನ್, ಗಾಜನೂರು, ಆಯನೂರು ಗೇಟ್ ಸುತ್ತಮುತ್ತ ಸೇರಿದಂತೆ ಶಿವಮೊಗ್ಗದ ವಿವಿಧ ಭಾಗಗಳಲ್ಲಿ ಪವರ್ ಕಟ್!
ವಿದ್ಯುತ್ ದರ ಏರಿಕೆಗೆ ವಿರೋಧ
ವಿದ್ಯುತ್ ದರ ಏರಿಕೆ ಮಾಡಿರುವುದರಿಂದ ಸಣ್ಣ ಕೈಗಾರಿಕೆಗಳಿಗೆ ತೊಂದರೆಯಾಗಲಿದೆ. ಅಲ್ಲದೆ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಕೆಲವು ಸಣ್ಣ ಕೈಗಾರಿಕಾ ಉದ್ಯಮಿಗಳು ಈ ರಾಜ್ಯವನ್ನೇ ಬಿಟ್ಟುಹೋಗುವುದಾಗಿ ಹೇಳಿದ್ದಾರೆ. ಇದರಿಂದ ಕನ್ನಡಿಗರು ಉದ್ಯೋಗ ಕಳೆದು ಕೊಳ್ಳುವ ಆತಂಕವಿದೆ. ಆದ್ದರಿಂದ ರಾಜ್ಯ ಸರ್ಕಾರ ಈಗ ಏರಿಸಿರುವ ವಿದ್ಯುತ್ ದರವನ್ನು ಮರುಪರಿಶೀಲನೆಗೆ ಒಳಪಡಿಸಬೇಕು, ಕೈಗಾರಿಕಾ ಸ್ನೇಹಿ ದರ ಜಾರಿಗೊಳಿಸಬೇಕು ಎಂದ ಮನವಿ ಮಾಡಿದ್ರು.
