ಶಿವಮೊಗ್ಗ ಸೇರಿದಂತೆ 7 ಜಿಲ್ಲೆಗಳಲ್ಲಿಂದು ಯಲ್ಲೋ ಅಲರ್ಟ್! ಹವಾಮಾನ ಇಲಾಖೆ ವರದಿಯಲ್ಲಿ ಗಾಳಿ, ಮಳೆ, ಸಿಡಿಲು, ಗುಡುಗಿನ ಬಗ್ಗೆ ಮಾಹಿತಿ!

KARNATAKA NEWS/ ONLINE / Malenadu today/ May 31, 2023 SHIVAMOGGA NEWS

ಶಿವಮೊಗ್ಗವೂ ಸೇರಿದಂತೆ ರಾಜ್ಯದ ಹಲವೆಡೆ ಮುಂದಿನ ಜೂನ್ 4 ವರೆಗೂ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತನ್ನ (havamana varadi news kannada,) ಹವಾಮಾನ ವರದಿಯಲ್ಲಿ ತಿಳಿಸಿದೆ. 

ಬೆಂಗಳೂರಿನಲ್ಲಿಅಧಿಕ ಮಳೆ

ಬೆಂಗಳೂರಿನಲ್ಲಿ ಜೂನ್ 4ರವರೆಗೂ ಅಧಿಕ ಮಳೆಯಾಗಲಿದೆ ಎಂದು ಹವಾಮಾನವರದಿಯಲ್ಲಿ ತಿಳಿಸಲಾಗಿದೆ. ಸಾಧಾರಣ ಹಾಗೂ ಗುಡುಗು ಸಿಡಿಲಿನೊಂದಿಗೆ ಅಧಿಕ ಮಳೆಯಾಗಲಿದೆ ಎಂದು ತಿಳಿಸಲಾಗದಿದೆ. 

7 ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್! 

ನಿನ್ನೆ ಪ್ರಕಟಗೊಂಡಿರುವ ವರದಿಯ ಪ್ರಕಾರ ಏಳು ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್​ ಪ್ರಕಟಗೊಂಡಿದೆ.  8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ದಕ್ಷಿಣ ಕನ್ನಡ,  ಬೆಂಗಳೂರು ನಗರ, ಚಿಕ್ಕಮಗಳೂರು, ಹಾಸನ, ಕೊಡಗು,  ಕೋಲಾರ , ಶಿವಮೊಗ್ಗ ಜಿಲ್ಲೆಗಳಿಗೆ ಇವತ್ತು ಅಂದರೆ, May 31, 2023 ರಂದು  ಯೆಲ್ಲೋ ಅಲರ್ಟ್​ ನೀಡಲಾಗಿದೆ. 

ಎಲ್ಲೆಡೆ ಮಳೆ

ಇನ್ನೂ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ (rain in shivamogga today) ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಗುಡುಗು ಸಿಡಿಲಿನೊಂದಿಗೆ ಜಿಲ್ಲೆಯ ಬಹುಭಾಗಗಳಲ್ಲಿ ಮಳೆಯಾಗುವ ಸೂಚನೆಗಳಿವೆ. ಅಲ್ಲದೆ ತೀವ್ರವಾದ ಗಾಳಿ ಬೀಸುವ ಸಾಧ್ಯತೆ ಇದ್ದು, ಈ ಹಿಂದೆ ನೀಡಿದಂತೆ ಗಾಳಿಯ ವೇಗವನ್ನು ನಮೂದಿಸಿಲ್ಲ. 

ಉಳಿದಂತೆ, ಉಡುಪಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ರಾಯಚೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ತುಮಕೂರು, ವಿಜಯನಗರದಲ್ಲಿ ಸಾಧಾರಣ ಮಳೆಯಾಗಲಿದೆ.ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹರಪನಹಳ್ಳಿ, ಕುಷ್ಟಗಿ, ಹಗರಿಬೊಮ್ಮನಹಳ್ಳಿ, ಯಲಬುರ್ಗಾ, ಹಿರೆಕೆರೂರು, ಹಡಗಲಿ, ತ್ಯಾಗರ್ತಿ, ಶಿಗ್ಗಾಂವಿ, ಕೋಣಂದೂರು, ಶಿವಮೊಗ್ಗ, ಆನವಟ್ಟಿ, ವಿರಾಜಪೇಟೆ, ಪೊನ್ನಂಪೇಟೆ, ಮುರ್ನಾಡು, ಕೊಟ್ಟಿಗೆಹಾರ, ಜಯಪುರ, ಧರ್ಮಸ್ಥಳ, ಬನವಾಸಿ, ಬೇವೂರು, ಮುನಿರಾಬಾದ್, ಕವಡಿಮಟ್ಟಿ, ಹುಂಚದಕಟ್ಟೆ, ಹೊನ್ನಾಳಿ, ಗೋಣಿಕೊಪ್ಪಲು, ರಾಯಲ್ಪಾಡು, ಕಿರವತ್ತಿ, ಯಡ್ರಾಮಿ, ಕಲಘಟಗಿ, ದಾವಣಗೆರೆ, ಅಜ್ಜಂಪುರ, ಹೊಸಪೇಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ನಾಯಕನಹಟ್ಟಿ, ಗೋಪಾಲ್​ನಗರ, ಬೇಲೂರಿನಲ್ಲಿ  ನಿನ್ನೆ ಮಳೆಯಾಗಿದೆ.

BREAKING NEWS/ ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ರೇಡ್ !

ಶಿವಮೊಗ್ಗ ದಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಆದಾಯಕ್ಕೂ ಮೀರಿ ಆಸ್ತಿ ಹೊಂದಿದ ಆರೋಪದ ಅಡಿಯಲ್ಲಿ ಶಿವಮೊಗ್ಗ ನಗರದ ಶರಾವತಿ ನಗರ ಹಾಗೂ ಶೆಟ್ಟಿಹಳ್ಳಿಯ ಮನೆಯೊಂದರ ಮೇಲೆ ದಾಳಿ ನಡೆಸಲಾಗಿದೆ. 

ಪ್ರಾಥಮಿಕ ಮೂಲಗಳ ಪ್ರಕಾರ ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್ ಪ್ರಶಾಂತ್ ಎಂಬವರ ಮನೆ ಹಾಗೂ ತೋಟದ ಮನೆ ಮೇಲೆ ರೇಡ್ ನಡೆದಿದ್ದು, ಅಧಿಕಾರಿಗಳು ದಾಖಲಾತಿ ಪರಿಶೀಲನೆ ನಡೆಸ್ತಿದ್ದಾರೆ. 

ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು ತುಮಕೂರು, ಹಾವೇರಿ ಸೇರಿದಂತೆ ವಿವಿಧ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸ್ತಿದ್ದಾರೆ. ಈ ಮಧ್ಯೆ ಶಿಕಾರಿಪುರದಲ್ಲಿಯು ರೇಡ್ ನಡೆದಿರುವ ಬಗ್ಗೆ ಮಾಹಿತಿಯಿದ್ದು, ಈ ಬಗ್ಗೆ ಇನ್ನಷ್ಟೆ ಸ್ಪಷ್ಟತೆ ಸಿಗಬೇಕಿದೆ. 

ಶಿವಮೊಗ್ಗದಲ್ಲಿ ಕೇಂದ್ರ ಗೃಹ ಸಚಿವಾಲಯದಡಿ ನಿರ್ವಹಿಸುತ್ತಿರುವ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾನಿಲಯದ 5ನೇ ಶಾಖೆ ಕಾರ್ಯಾರಂಭ ಮಾಡಿದೆ. ನಗರದ ರಾಗಿಗುಡ್ಡದಲ್ಲಿನ ಹಳೆಯ ಕೇಂದ್ರೀಯ ವಿದ್ಯಾಶಾಲೆ ಕಟ್ಟಡದಲ್ಲಿ ವಿವಿ ಪ್ರಾರಂಭವಾಗಿದೆ 

ಮಹಿಳೆಯಿಂದ ಹಣ ಕಿತ್ತು ಪರಾರಿ!/ ಅತ್ತೆ ಚಿನ್ನ ಕದ್ದ ಸೊಸೆ/ ಅನೈತಿಕ ಪೊಲೀಸ್​ಗಿರಿ ಆರೋಪಿಗಳು ಅರೆಸ್ಟ್​! / ಸಿನಿಮಾ ಸ್ಟೈಲ್​ನಲ್ಲಿ ಯುವಕನಿಗೆ ಇರಿತ! ಹಲ್ಲೆ! Today @ 7 NEWS

ಈ ಸಂಬಂಧ  ಶಿವಮೊಗ್ಗ ವಿವಿ ಕ್ಯಾಂಪಸ್ ಸಹಾಯಕ ಅಪರಾಧಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ದಿವ್ಯಶ್ರೀ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.  ಪೊಲೀಸ್ ಹಾಗೂ ಭದ್ರತೆಯ ವಿಷಯಗಳ ಆಧಾರದಲ್ಲಿ ರಕ್ಷಾ ವಿವಿಯನ್ನು ಕೇಂದ್ರ ಸರಕಾರ ಪ್ರಾರಂಭಿಸಿದೆ. ರಾಷ್ಟ್ರೀಯ ಭದ್ರತೆ ಮತ್ತು ಪೊಲೀಸರಿಗೆ ಶೈಕ್ಷಣಿಕ ಸಂಶೋಧನೆ, ತರಬೇತಿಯನ್ನು ಕ್ಯಾಂಪಸ್ ನಲ್ಲಿ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. 

ಮಳೆ ಹಾನಿ ಪ್ರದೇಶಕ್ಕೆ ಶಾಸಕ ಚನ್ನಬಸಪ್ಪ ಭೇಟಿ! ಸಿಡಿಲಿಗೆ ಬಲಿಯಾದ ಮಹಿಳೆ ಕುಟುಂಬಕ್ಕೆ 7 ಲಕ್ಷ ರೂಪಾಯಿ ಪರಿಹಾರ ಭರವಸೆ!

ಏನೆಲ್ಲಾ ಕೋರ್ಸ್​ ಆರಂಭ?

ಡಿಪ್ಲೊಮಾ ಇನ್ ಪೊಲೀಸ್ ಸೈನ್ಸ್ ಕೋರ್ಸ್‌ : ಕ್ಯಾಂಪಸ್‌ನಲ್ಲಿ ಒಂದು ವರ್ಷ ಅವಧಿಯ ಕೋರ್ಸ್​ ಇದಾಗಿದ್ದು,  ದ್ವಿತೀಯ ಪಿಯುಸಿ ಉತ್ತೀರ್ಣರಾದವರು ಅರ್ಹ ರಾಗಿರುತ್ತಾರೆ. 

ಬ್ಯಾಚುಲರ್ ಆಫ್ ಆರ್ಟ್ಸ್ ಇನ್ ಸೆಕ್ಯುರಿಟಿ ಮ್ಯಾನೇಜ್ ಮೆಂಟ್ ಕೋರ್ಸ್ :  ನಾಲ್ಕು ವರ್ಷ ಅವಧಿಯ ಬ್ಯಾಚುಲರ್ ಆಫ್ ಆರ್ಟ್ಸ್ ಇನ್ ಸೆಕ್ಯುರಿಟಿ ಮ್ಯಾನೇಜ್ ಮೆಂಟ್ ಕೋರ್ಸ್ ಆಂಗ್ಲ ಮಾಧ್ಯಮದಲ್ಲಿದ್ದು, ದ್ವಿತೀಯ ಪಿಯುಸಿಯಲ್ಲಿ ಶೇ. 50 ಪಡೆದವರು ಪ್ರವೇಶ ಪಡೆಯಬಹುದು. 

ಗ್ರಾಜ್ಯುಯೇಷನ್ ಡಿಪ್ಲೊಮಾ ಇನ್ ಪೊಲೀಸ್ ಸೈನ್ಸ್ ಕೋರ್ಸ್  : ವರ್ಷದ ಗ್ರಾಜ್ಯುಯೇಷನ್ ಡಿಪ್ಲೊಮಾ ಇನ್ ಪೊಲೀಸ್ ಸೈನ್ಸ್ ಕೋರ್ಸ್ ಇದ್ದು, ಪದವಿಯಲ್ಲಿ ಶೇ.50 ಅಂಕ ಗಳಿಸಿ ದವರು ಅರ್ಹರಾಗಿದ್ದಾರೆ. ಆರಂಭಿಕ ಹಂತದಲ್ಲಿ ಈ ಮೂರು ಕೋರ್ಸ್‌ಗಳನ್ನು ಮಾತ ಪ್ರಾರಂಭಿಸಲಾಗಿದೆ ಎಂದು ಡಾ ದಿವ್ಯಶ್ರೀ ತಿಳಿಸಿದ್ಧಾರೆ. 

ಹಿಡಿದು ಬ್ಯಾಗ್​ನಲ್ಲಿಟ್ಟಿದ್ದ ನಾಗರ ಹಾವು ಕಚ್ಚಿ ಸ್ನೇಕ್​ ನರೇಶ್ ಸಾವು!

ಮುಂದಿನ ದಿನಗಳಲ್ಲಿ?

ಬೇಸಿಕ್ ಕೋರ್ಸ್ ಇನ್ ಕಾರ್ಪೋರೇಟ್ ಸೆಕ್ಯುರಿಟಿ ಮ್ಯಾನೇಜ್ ಮೆಂಟ್, ಸರ್ಟಿಫಿಕೇಟ್ ಪ್ರೋಗ್ರಾಂ ಇನ್ ಕೋಸ್ಟಲ್‌ ಸೆಕ್ಯುರಿಟಿ ಆ್ಯಂಡ್ ಲಾ ಎನ್‌ಫೋರ್ಸ್‌ ಮೆಂಟ್, ಸರ್ಟಿಫಿಕೇಟ್‌ ಪ್ರೋಗ್ರಾಂ ಆನ್ ರೋಡ್ ಸೇಫ್ಟಿ ಮ್ಯಾನೇಜ್‌ಮೆಂಟ್ ಮತ್ತು ಸರ್ಟಿಫಿಕೇಟ್ ಪ್ರೋಗ್ರಾಂ ಆನ್ ಫಿಸಿಕಲ್ ಫಿಟ್‌ನೆಸ್ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳನ್ನು ನಂತರದ ದಿನಗಳಲ್ಲಿ ಶಿವಮೊಗ್ಗದಲ್ಲಿನ ವಿವಿ ಕ್ಯಾಂಪಸ್​ನಲ್ಲಿ ಸೇರಿಕೊಳ್ಳಲಿದೆ ಮತ್ತಿದು ಕನ್ನಡ ಮತ್ತು ಇಂಗ್ಲಿಷ್ ಎರಡೂ ಮಾಧ್ಯಮಗಳಲ್ಲಿ ಇರಲಿದೆ  ಎಂದು ದಿವ್ಯಶ್ರೀ ತಿಳಿಸಿದ್ದಾರೆ. 

ಸುಖಾಸುಮ್ಮನೆ ಚೈನ್​ ಎಳೆದು ಟ್ರೈನ್​ ನಿಲ್ಲಿಸ್ತಿರುವ ಪ್ರಯಾಣಿಕರು! ಇಷ್ಟಕ್ಕೂ ರೈಲ್ವೆ ಅಲಾರಾಮ್​ ಚೈನ್ ಎಳೆಯುವುದರಿಂದ ಏನಾಗುತ್ತೆ ಗೊತ್ತಾ!? ಶಿಕ್ಷೆ ಎಷ್ಟು ವರ್ಷ ಗೊತ್ತಾ?

ನೇಮಕಾತಿಯಲ್ಲಿ ಆದ್ಯತೆ!

ರಾಷ್ಟ್ರೀಯ ರಕ್ಷಾ ವಿವಿಯಲ್ಲಿ ಅಧ್ಯಯನ ಮಾಡಿದವರಿಗೆ ಪೊಲೀಸ್ ಮತ್ತು ಇತರೆ ನೇಮಕದಲ್ಲಿ ಆದ್ಯತೆ ಸಿಗುತ್ತಿದ್ದು,   ಈ ವಿವಿಯಲ್ಲಿ ಓದಿದ ವಿದ್ಯಾರ್ಥಿಗಳಿಗೆ ಗುಜರಾತ್‌, ಜಾರ್ಖಂಡ್‌, ದೆಹಲಿ ಪೊಲೀಸ್‌ ನೇಮಕಾತಿ ಪರೀಕ್ಷೆಯಲ್ಲಿ 5 – 15 ಗ್ರೇಸ್‌ ಅಂಕಗಳು ನೀಡಲಾಗುತ್ತಿದೆ ಎಂದು ದಿವ್ಯಶ್ರೀ ಮಾಹಿತಿ ನೀಡಿದ್ಧಾರೆ. ಅಲ್ಲದೆ ಈ ಕೋರ್ಸ್ ಮಾಡುವವರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಇರುತ್ತವೆ ಎಂದು ದಿವ್ಯಶ್ರೀ ತಿಳಿಸಿದ್ಧಾರೆ. ಪ್ರತಿ ವಿಭಾಗದಲ್ಲಿಯೂ 20 ಸೀಟ್‌ಗಳು ಇದ್ದು, ಮೆರಿಟ್ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದ್ಧಾರೆ. 

 

Leave a Comment