ಶಿವಮೊಗ್ಗದಲ್ಲಿ ಭಾರೀ ಗಾಳಿ! ಉರುಳಿದ ಮರಗಳು! ಎರಡು ಕಾರು ಜಖಂ ! ಹಾರಿಹೋದ ಮೆಲ್ಚಾವಣಿ ಶೀಟುಗಳು!

KARNATAKA NEWS/ ONLINE / Malenadu today/ May 29, 2023 SHIVAMOGGA NEWS

 ಶಿವಮೊಗ್ಗ/ ನಗರದಲ್ಲಿ ಬೀಸಿದ ಬಾರೀ ಗಾಳಿಗೆ ಹಲವೆಡೆ ಮರ ಬಿದ್ದು ಹಾನಿ ಉಂಟಾಗಿದೆ.  ತೆಂಗಿನ ಮರವೊಂದು ಬಿದ್ದು ಎರಡು ಕಾರುಗಳು ಜಖಂಗೊಂಡ ಘಟನೆ ಸುರಭಿ ಹೋಟೆಲ್ ಬಳಿ ಸಂಭವಿಸಿದೆ. 

ಇಲ್ಲಿರುವ ಕೆನರಾ ಬ್ಯಾಂಕ್ ಬಳಿಯಲ್ಲಿದ್ದ ತೆಂಗಿನ ಮರವೊಂದು ಬಿದ್ದು ಎರಡು ಕಾರುಗಳು ಬಹುತೇಕ ಜಖಂಗೊಂಡಿದೆ. ಅದೃಷ್ಟಕ್ಕೆ ಯಾವುದೇ ಪ್ರಾಣಪಾಯ ಉಂಟಾಗಿಲ್ಲ. 

ಇನ್ನೂ ದೈವಜ್ಞ ಕಲ್ಯಾಣ ಮಂದಿರದ ಹತ್ತಿರ ತೆಂಗಿನಮರವೊಂದು ಉರುಳಿಬಿದ್ದಿದ್ದು ಮನೆಯೊಂದರ ಕಾಂಪೌಂಡ್ ಹಾಳಾಗಿದೆ.  

ಅತ್ತ ಸೋಮಿನಕೊಪ್ಪದಲ್ಲಿ ಮಳೆಗಾಳಿ ಮನೆಯೊಂದರ ಶೀಟುಗಳು ಹಾರಿಹೋಗಿವೆ. ಭಾರೀ ಗಾಳಿಗೆ ಈ ಅವಾಂತರ ಸಂಭವಿಸಿದ್ದು, ಯಾರಿಗೂ ಅಪಾಯ ಉಂಟಾಗಿಲ್ಲ. 

Malenadu Today

Leave a Comment