KARNATAKA NEWS/ ONLINE / Malenadu today/ May 29, 2023 SHIVAMOGGA NEWS
ಶಿವಮೊಗ್ಗ ಜಿಲ್ಲೆಯ ಪಿಳ್ಳಂಗಿರಿ ಗ್ರಾಮದಲ್ಲಿ ಬೈಕ್ಗೆ ಟಿಪ್ಪರ್ ಡಿಕ್ಕಿಯಾಗಿ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. 15ವರ್ಷದ ಬಾಲಕಿ ಐಶ್ವರ್ಯಾ ಮೃತ ದುರ್ದೈವಿ.ಘಟನೆಯಲ್ಲಿ ಈಕೆಯ ತಂದೆ ಕೂಡ ಗಂಭೀರವಾಗಿ ಗಾಯಗೊಂಡಿದ್ಧಾರೆ.
ನಡೆದಿದ್ದೇನು?
ಐಶ್ವರ್ಯಾ ಮತ್ತುಈಕೆಯ ತಂದೆ ಬೈಕ್ನಲ್ಲಿ ಶಿವಮೊಗ್ಗದಿಂದ ಹೊಳೆಹೊನ್ನೂರು ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಪಿಳ್ಳಂಗಿರಿ ಗ್ರಾಮದ ಬಳಿ ಟಿಪ್ಪರ್ ಡಿಕ್ಕಿಯಾಗಿದೆ. ಘಟನೆ ಬಾಲಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ 31ಕ್ಕೆ ಶಾಲೆ ಶುರು! ಶಿವಮೊಗ್ಗಕ್ಕೆ ಬರುತ್ತಾರೆ ನೂತನ ಸಚಿವರು ! ಮಧು ಬಂಗಾರಪ್ಪರಿಗೆ ಅದ್ದೂರಿ ಸ್ವಾಗತ ಕೋರಲು ಸಿದ್ದತೆ ಶುರು!
ಶಿವಮೊಗ್ಗ/ ಸಚಿವರಾದ ಬಳಿಕ ಇದೇ ಮೊದಲ ಭಾರಿಗೆ ಶಿವಮೊಗ್ಗಕ್ಕೆ ಮಧು ಬಂಗಾರಪ್ಪ ಆಗಮಿಸಲಿದ್ದಾರೆ. ಈ ಹಿನ್ನೆಲೆ ಅವರ ಸ್ವಾಗತಕ್ಕೆ ಭರ್ಜರಿ ಸಿದ್ದತೆ ಮಾಡಿಕೊಳ್ಳುತ್ತಿದೆ ಸ್ಥಳೀಯ ಕಾಂಗ್ರೆಸ್.
ಮೇ.31 ರಂದು ನೂತನ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದು, ಅವರಿಗೆ ಸ್ವಾಗತ ಹಾಗೂ ಅಭಿನಂದನೆ ಕೋರಲು ಜಿಲ್ಲಾ ಕಾಂಗ್ರೆಸ್ ಮುಂದಾಗಿದ್ದು, ಈ ನಿಟ್ಟಿನಲ್ಲಿ ನಿಗದಿತ ಕಾರ್ಯಕ್ರಮಗಳ ಬಗ್ಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ಮಾಹಿತಿ ನೀಡಿದ್ಧಾರೆ.
ಮಾ.31 ರಂದು ಬೆಳಿಗ್ಗೆ 9 ರಂದು ಮಧು ಬಂಗಾರಪ್ಪ, ಶಿವಮೊಗ್ಗದ ಮಲವಗೊಪ್ಪ ಶಾಲೆ ಭೇಟಿ ನೀಡಲಿದ್ದಾರೆ.ಅಂದಿನಿಂದ ಶಾಲೆಗಳು ಓಪನ್ ಆಗುವುದರಿಂದ ಸಿಹಿ ಹಂಚಿ, ಶಾಲೆಗಳಿಗೆ ಮಕ್ಕಳನ್ನ ಸಚಿವರು ಸ್ವಾಗತಿಸಲಿದ್ದಾರೆ.
ಆನಂತರ ಎಂಆರ್ ಎಸ್ ನಿಂದ ಮೆರವಣಿಗೆಯಲ್ಲಿ ಸಚಿವರು ನಗರಕ್ಕೆ ಬರಲಿದ್ದಾರೆ. ವಿದ್ಯಾನಗರದಲ್ಲಿ ದುರ್ಗಮ್ಮನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕಾಂಗ್ರೆಸ್ ಮುಖಂಡರು, ಮಧು ಬಂಗಾರಪ್ಪರನ್ನ ಅಭಿನಂದನಾ ಕಾರ್ಯಕ್ರಮಕ್ಕೆ ಕರೆತರಲಿದ್ದಾರೆ. ಮೆರವಣಿಗೆ ಕಾಂಗ್ರೆಸ್ ಜಿಲ್ಲಾ ಕಚೇರಿಗೆ ಆಗಮಿಸಲಿರುವ ಸಚಿವರಿಗೆ ಜಿಲ್ಲೆಯ ಹಿರಿಯ ನಾಯಕರು ಶುಭಕೋರಲಿದ್ದಾರೆ.
ಇನ್ನೂ ಶಾಲೆಗಳ ಆರಂಭದ ಕುರಿತಾಗಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಮಧು ಬಂಗಾರಪ್ಪ ಮೇ 31 ರಂದು ಮಕ್ಕಳಿಗೆ ಸಿಹಿ ವಿತರಣೆ ಮಾಡುವ ಮೂಲಕ ಶಾಲೆಗಳಿಗೆ ಬರ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ಧಾರೆ. .
‘ಶಾಲೆಗಳ ಆರಂಭಕ್ಕೆ ಸಂಬಂಧಿಸಿದ ಪೂರಕ ಸಿದ್ದತೆಗಳು ಇಂದಿನಿಂದ ಆರಂಭವಾಗಲಿದೆ. ಶಾಲೆಯತ್ತ ಹೆಜ್ಜೆ ಹಾಕುತ್ತಿರುವ ಎಲ್ಲ ಮಕ್ಕಳಿಗೆ ಶುಭ ಕೋರುತ್ತೇನೆ.. ಆರೋಗ್ಯಕರ ವಾತಾವರಣದಲ್ಲಿ ಖುಷಿಯ ಕಲಿಕೆ ನಿಮ್ಮದಾಗಲಿ. ಮಾದರಿ ಶಿಕ್ಷಣ ವ್ಯವಸ್ಥೆಗೆ ಶಿಕ್ಷಕರ, ಪೋಷಕರ ಹಾಗೂ ಕನ್ನಡಿಗರ ಸಹಕಾರವಿರಲಿ’ ಎಂದು ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ.