SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 4, 2024 | SHIVAMOGGA ESHWARA KHANDRE | ಶಿವಮೊಗ್ಗ ಸಕ್ರೆಬೈಲ್ ಆನೆ ಬಿಡಾರ ಆನೆಗಳನ್ನ ಪಳಗಿಸುವ ಕೇಂದ್ರವಾಗಿತ್ತು. ಇದೀಗ ಭದ್ರಾ ಅಭಯಾರಣ್ಯದ ವ್ಯಾಪ್ತಿಯಲ್ಲಿ ಆನೆ ಕ್ಯಾಂಪ್ವೊಂದನ್ನ ಸ್ಥಾಪಿಸುವ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಘೋಷಣೆ ಮಾಡಿದ್ದಾರೆ.
ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಸಭಾಂಗಣದಲ್ಲಿಂದು ನಡೆದ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಈಶ್ವರ್ ಖಂಡ್ರೆ ಪ್ರಮುಖವಾಗಿ ಎರಡು ಘೋಷಣೆಗಳನ್ನ ಮಾಡಿದ್ದಾರೆ.
ಆನೆಗಳಿಗೆ ಸಂಬಂಧಿಸಿದಂತೆ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಭಾಗದ ಕಾಡಾನೆ ಹಾವಳಿ ನಿಯಂತ್ರಿಸುವ ಸಲುವಾಗಿ ಭದ್ರಾ ಅಭಯಾರಣ್ಯದಲ್ಲಿ ಆನೆ ಕ್ಯಾಂಪ್ ನಿರ್ಮಾಣದ ಘೋಷಣೆಯನ್ನ ಸಚಿವರು ಮಾಡಿದ್ದಾರೆ.
ಇದಷ್ಟೆ ಅಲ್ಲದೆ ಬೇಲೂರು, ಸಕಲೇಶಪುರ, ಚಿಕ್ಕಮಗಳೂರು ನಲ್ಲಿನ ಆನೆ ಹಾವಳಿ ತಪ್ಪಿಸುವ ಸಲುವಾಗಿ ಎರಡು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆನೆಗಳ ಸಾಫ್ಟ್ ರಿಲೀಸ್ ಸೆಂಟರ್ ಅಥವಾ ಆನೆಗಳ ವಿಹಾರ ದಾಮ ನಿರ್ಮಿಸುವ ಪ್ರಸ್ತಾಪವನ್ನ ಮಾಡಿದರು.
ರೈಲ್ವೆ ಬಾರಿಕೇಡ್ಗಳನ್ನ ಬಳಸಿಕೊಂಡು, ಎರಡು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆನೆಗಳಿಗೆ ಅವಶ್ಯವಿರುವ ಆಹಾರಗಳನ್ನ ಬೆಳಸಿ ಅಲ್ಲಿಗೆ ಕಾಡಾನೆಗಳನ್ನ ಶಿಫ್ಟ್ ಮಾಡುವ ಪ್ರಸ್ತಾಪ ಇದಾಗಿದ್ದು, ಈ ಸಂಬಂಧ ಅರಣ್ಯ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿರುವುದಾಗಿ ಅರಣ್ಯ ಸಚಿವರು ತಿಳಿಸಿದ್ದಾರೆ.