Public Nuisance / ತುಂಗಾ ನಗರ ಪೊಲೀಸರಿಂದ ಮುಂದುವರಿದ ಸ್ಪೆಷಲ್ ಕಾರ್ಯಾಚರಣೆ! 11 ಜನರು ಸ್ಟೇಷನ್​ಗೆ 8 ಮಂದಿ ವಿರುದ್ಧ ಕೇಸ್

Malenadu Today

KARNATAKA NEWS/ ONLINE / Malenadu today/ May 18, 2023 SHIVAMOGGA NEWS 

 ಶಿವಮೊಗ್ಗ/ ತುಂಗಾನಗರ ಪೊಲೀಸ ಸ್ಟೇಷನ್  ಪೊಲೀಸರು ತಮ್ಮ ವ್ಯಾಪ್ತಿಯಲ್ಲಿ Area Domination    ವಿಶೇಷ ಗಸ್ತನ್ನು ಮುಂದುವರಿಸಿದ್ದಾರೆ. 

ನಿನ್ನೆಯು ಸಹ ( ದಿನಾಂಕ: 17-05-2023)  ತುಂಗಾನಗರ ಪೊಲೀಸ್ ಠಾಣೆ ಪಿಎಸ್​ಐ ಕುಮಾರ್​  ಮತ್ತು ಸಿಬ್ಬಂದಿಗಳ ತಂಡವು ಠಾಣಾ ವ್ಯಾಪ್ತಿಯ ಸೂಳೆಬೈಲು, ಮದಾರಿಪಾಳ್ಯ, ಎಂಆರ್. ಎಸ್ ವೃತ್ತ, ಪ್ರಿಯಾಂಕಾ ಲೇಔಟ್ ಮತ್ತು ವಡ್ಡಿನ ಕೊಪ್ಪ ಗ್ರಾಮದ ಹೊರವಲಯ ಮತ್ತು ಖಾಲಿ ಸ್ಥಳಗಳಲ್ಲಿ Area Domination ವಿಶೇಷ ಗಸ್ತು ನಡೆಸಿದೆ. 

11 ಜನರು ಸ್ಟೇಷನ್​ಗೆ 8 ಮಂದಿ ವಿರುದ್ಧ ಪಿಟ್ಟಿ ಕೇಸ್​

ಇನ್ನೂ ಈ ವೇಳೆ ವಿವಿಧ ಎರಿಯಾಗಳಲ್ಲಿ Public Nuisance ಮಾಡುವ ಮತ್ತು ಅನುಮಾನಸ್ಪಾದ 11 ಜನರನ್ನು  ಪೊಲೀಸ್ ಠಾಣೆಗೆ ಕರೆತಂದು ಅವರುಗಳ ಪೂರ್ವಪರಗಳನ್ನು ಪರಿಶೀಲಿಸಿ, Public Nuisance ಮಾಡಿದ ವ್ಯಕ್ತಿಗಳ ವಿರುದ್ದ 08 ಲಘು ಪ್ರಕರಣಗಳನ್ನು ದಾಖಲಿಸಿದ್ಧಾರೆ. 

ತೀರ್ಥಹಳ್ಳಿ ಜೋಡಿ ಕೊಲೆ! ಎಸ್​ಪಿ ಮಿಥುನ್​ ಕುಮಾರ್ ಸ್ಥಳಕ್ಕೆ ಭೇಟಿ ! ಅಸಲಿಗೆ ನಡೆದಿದ್ದೇನು? ಆರೋಪಿ ಯಾರು!?

ತೀರ್ಥಹಳ್ಳಿ/ ಇಲ್ಲಿನ ಕುರುವಳ್ಳಿ ಪುತ್ತಿಗೆ ಮಠದ ಬಳಿಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಸಮುದಾಯ ಭವನದಲ್ಲಿ ನಿನ್ನೆ ರಾತ್ರಿ ಜೋಡಿ ಕೊಲೆಯಾಗಿದೆ. ಒಬ್ಬನ ಶವ ಸಮುದಾಯ ಭವನದ ಒಳಗಿನ ರೂಮೊಂದರಲ್ಲಿ ಅಂಗಾತವಾಗಿ ಬಿದ್ದಿದ್ದರೆ, ಇನ್ನೊಬ್ಬನ ಶವ ಆರ್​ಸಿಸಿ ಮೇಲೆ ಕೌಚು ಬಿದ್ದಿದೆ. ಸದ್ಯ ಘಟನೆ ಸಂಬಂಧ ಓರ್ವ ಆರೋಪಿಯನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸಿದ್ದಾರೆ. 

ಶಿವಮೊಗ್ಗ ಕೇಂದ್ರ ಕಾರಾಗೃಹ ಸಿಬ್ಬಂದಿಗೆ ಕೈದಿಯಿಂದ ಧಮ್ಕಿ!

ಎನಾಗಿದ್ದು!?

 ರಾಜಪ್ಪ, ಬೀರಪ್ಪ ಮತ್ತು ಮಂಜಪ್ಪ ಎಂಬ ಮೂವರು ದಾವಣಗೆರೆ ಮೂಲದ ಕಾರ್ಮಿಕರು, ವಿಶ್ವಕರ್ಮ ಸಮುದಾಯ ಭವನದ ಕಟ್ಟಡ ಕೆಲಸವನ್ನು ಮಾಡುತ್ತಿದ್ದರು. ಅಲ್ಲದೆ ಅಲ್ಲಿಯೇ ಉಳಿದಿದ್ದರು. ನಿನ್ನೆ ಮೂವರ ನಡುವೆ ಎಣ್ಣೇ ನಶೆಯಲ್ಲಿ ಗಲಾಟೆಯಾಗಿದೆ. ಈ ವೇಳೆ ರಾಜಪ್ಪ ಎಂಬಾತನಿಗೆ ಉಳಿದ ಇಬ್ಬರು ಹಲ್ಲೆ ಮಾಡಿದ್ಧಾರೆ. 

ಶಿವಮೊಗ್ಗ ಎಸ್​​ಪಿ ಮಿಥುನ್​ ಕುಮಾರ್​ ಕಠಿಣ ಕ್ರಮ ಕೈಗೊಳ್ಳುವಂತೆ ಶಾರದಾ ಅಪ್ಪಾಜಿ ಮನವಿ! ಕಾರಣ?

ಹಲ್ಲೆ ಪ್ರತಿಕಾರವಾಗಿ ಕೊಲೆ

ತನ್ನ ಮೇಲೆ ಹಲ್ಲೆ ಮಾಡಿದ್ದ ಇಬ್ಬರ ಮೇಲಿನ ಸಿಟ್ಟಿಗೆ ಮತ್ತಷ್ಟು ಕುಡಿದು ಬಂದ ರಾಜಪ್ಪ, ರಾತ್ರಿ ಕೈಗೆ ಸಿಕ್ಕ ಪಿಕಾಸಿಯನ್ನ ಹಿಡಿದು ಒಬ್ಬನನ್ನ ಸಮುದಾಯ ಭವನದ ಕೋಣೆಯೊಳಗೆ ಇನ್ನೊಬ್ಬನನ್ನ ಆರ್​ಸಿಸಿ ಮೇಲೆ ಹೊಡೆದು ಸಾಯಿಸಿದ್ದಾನೆ. ಸಿಟ್ಟಿನ ಭರದಲ್ಲಿಯೋ! ಎಣ್ಣೆ ನಶೆಯಲ್ಲಿಯೋ ರಾಜಪ್ಪ ಜೋಡಿ ಕೊಲೆ ಮಾಡಿದ್ದ. 

Accident / ಎಗ್​ ರೈಸ್ಗೆ ಆರ್ಡರ್​ ಹೇಳಿ , ಬೈಕ್​ ಬಳಿ ನಿಂತಾಗ ಸಂಭವಿಸಿತು ದುರಂತ

ಬೆಳಗಾಗುತ್ತಲೇ ವಿಷಯ ಬಹಿರಂಗ

ಇನ್ನೂ ಸಮುದಾಯ ಭವನಕ್ಕೆ ಬೆಳಗ್ಗೆ ಕೆಲಸ ನೋಡಲು ಬಂದವರಿಗೆ ಶವಗಳು ಕಾಣಿಸಿವೆ. ಆತಂಕಗೊಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರಿಗೆ ಆರೋಪಿ ರಾಜಪ್ಪನು ಸಹ ಸಿಕ್ಕಿಬಿದ್ದಿದ್ಧಾನೆ. ಎಲ್ಲವು ಮಾಮೂಲಿಯಾಗಿ ನಡೆಯುವಂತೆ ಯಥಾಪ್ರಕಾರ ಪ್ರೊಸಿಜರ್​ಗಳು ಮುಗಿದಿವೆ. ಪೊಲೀಸರು ರಾಜಪ್ಪನನ್ನ ಅರೆಸ್ಟ್ ಮಾಡಿ ಎಫ್ಐಆರ್ ಮಾಡಿದ್ದಾರೆ. 

ಇಬ್ಬರಿಗೂ ಅಧಿಕಾರ! ಫೈನಲ್​ ಆಯ್ತು ಆಯ್ಕೆ! ಇವತ್ತು ಅಧಿಕೃತ! 20ಕ್ಕೆ ಪ್ರಮಾಣ! ಸಿದ್ದರಾಮಯ್ಯ ಸಿಎಂ! ಡಿಕೆ ಶಿವಕುಮಾರ್ ಡಿಸಿಎಂ

Share This Article