SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 20, 2024 shimoga jail
ಶಿವಮೊಗ್ಗ ಕೇಂದ್ರ ಕಾರಾಗೃಹದ ಸಂದರ್ಶಕರ ಕೊಠಡಿ ಸಮೀಪ ಜೈಲ್ನಲ್ಲಿ ನಿಷೇಧಿತವಾಗಿರುವ ವಸ್ತುಗಳು ದೊರಕ್ಕಿದ್ದು, ಈ ಸಂಬಂಧ ಇಬ್ಬರನ್ನ ಸೆರೆಹಿಡಿಯಲಾಗಿದೆ.
ಶಿವಮೊಗ್ಗ ಕೇಂದ್ರ ಕಾರಾಗೃಹ
ಶಿವಮೊಗ್ಗ ಜೈಲ್ನಲ್ಲಿ ಕಳೆದ 17 ನೇ ತಾರೀಖಿನಂದು ನೂತನ ಅಧೀಕ್ಷಕರಾಗಿ ಡಾ. ಪಿ ರಂಗನಾಥ್ ರವರು ಅಧಿಕಾರ ಸ್ವೀಕರಿಸಿದ್ದರು. ಅದೇ ದಿನ ಈ ಘಟನೆ ನಡೆದಿದ್ದು, ಈ ಸಂಬಂಧ ಅವರು ದೂರು ನೀಡಿದ ಅನ್ವಯ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
17 ತಾರೀಖು ಸಂಜೆ 5.30 ರ ಸುಮಾರಿಗೆ ಶಿವಮೊಗ್ಗ ಕೇಂದ್ರ ಕಾರಾಗೃಹದ ಸಂದರ್ಶಕರ ಕೊಠಡಿ ಪಕ್ಕದ ಕಾರಿಡಾರ್ ಬಳಿ ಅನುಮಾನಾಸ್ಪದ ವಸ್ತುವು ಬಿದ್ದಿರುವುದು ಇಲ್ಲಿನ ಕೆಎಸ್ಐಎಎಸ್ಎಫ್ ಸಿಬ್ಬಂದಿಗೆ ಗೊತ್ತಾಗಿದೆ. ಅದನ್ನ ಕಾರಾಗೃಹದ ಎಕ್ಸ್ ರೆ ಬ್ಯಾಗೇಜ್ ನಲಿ ಪರಿಶೀಲಿಸಿದ್ದಾರೆ. ಈ ವೇಳೆ ಅದರಲ್ಲಿ ಮೊಬೈಲ್ ಹಾಗೂ ಇತರೆ ವಸ್ತುಗಳಿರುವುದು ಕಂಡುನಬಂದಿದೆ. ಹೀಗಾಗಿ ಕಾರಾಗೃಹದ ಕೈದಿಯನ್ನ ನೋಡಲು ಬಂದಿದ್ದ ಇಬ್ಬರನ್ನ ಅಲ್ಲಿಯೇ ಸೆರೆಹಿಡಿದಿದ್ದಾರೆ.
ಆ ಬಳಿಕ ಆರೋಪಿತರನ್ನ ತುಂಗಾನಗರ ಪೊಲೀಸ್ ಠಾಣೆಗೆ ವಿವಿಧ ಪ್ರಕ್ರಿಯೆಗಳ ಮೂಲಕ ಕಳುಹಿಸಿದ್ದು, ಅಧಿಕ್ಷಕರು ನೀಡಿದ ದೂರನಿನ್ವಯ ಪ್ರಕರಣವನ್ನು ತುಂಗಾ ನಗರ ಪೊಲೀಸರು ದಾಖಲಿಸಿದ್ದಾರೆ.