SHIVAMOGGA | MALENADUTODAY NEWS | Aug 22, 2024 ಮಲೆನಾಡು ಟುಡೆ
ಶಿವಮೊಗ್ಗ ಜಿಲ್ಲೆ ಭದ್ರಾವತಿ ಪೇಪರ್ ಟೌನ್ ವ್ಯಾಪ್ತಿಯಲ್ಲಿ ಸ್ಟೀವನ್ ಆತ್ಮಹತ್ಯೆ ಪ್ರಕರಣ ಸಂಬಂಧ ಮಲೆನಾಡು ಟುಡೆಗೆ ಎಸ್ಪಿ ಮಿಥುನ್ ಕುಮಾರ್ ರವರು ಪ್ರತಿಕ್ರಿಯಿಸಿದ್ದಾರೆ.
ಪ್ರಕರಣದಲ್ಲಿ ಸ್ಟೀವನ್ ಎಂಬಾತ ಸೂಸೈಡ್ ಮಾಡಿಕೊಂಡಿರುವ ವಿಚಾರದ ಸಂಬಂಧ ಯುಡಿಆರ್ ದಾಖಲಾಗಿದೆ. ಈ ವಿಚಾರವಾಗಿ ಮಲೆನಾಡು ಟುಡೆಗೆ ಜೊತೆಗೆ ಮಾತನಾಡಿದ ಎಸ್ಪಿ ಮಿಥುನ್ ಕುಮಾರ್ ರವರು ಸ್ಟೀವನ್ ವಿರುದ್ಧ ಈ ಹಿಂದೆ ಪ್ರಕರಣವೊಂದು ದಾಖಲಾಗಿದ್ದು ಆ ಪ್ರಕರಣದ ಬಳಿಕ ಸ್ಟೀವನ್ ಕುಟುಂಬ ಸಾಲ ಮಾಡಿಕೊಂಡಿತ್ತು. ತದನಂತರ ಸಾಲ ತೀರಿಸಲಾಗಿದೆ ಊರು ತೊರೆದಿದ್ದರು. ಕಳೆದ ಮೂರು ದಿನಗಳ ಹಿಂದೆ ಸ್ಟೀವನ್ ಊರಿಗೆ ವಾಪಸ್ ಬಂದಿದ್ದು ಆ ಬಳಿಕ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಪ್ರಸ್ತುತ ಪ್ರಕರಣದಲ್ಲಿ ತನಿಖೆ ನಡೆಸಲಾಗುತ್ತಿದ್ದು, ಸ್ಟೀವನ್ ಮೃತದೇಹದಲ್ಲಿ ಮೇಲ್ನೋಟಕ್ಕೆ ಯಾವುದೇ ಗಾಯದ ಗುರುತುಗಳು ಸಹ ಪತ್ತೆಯಾಗಿಲ್ಲ. ಪ್ರಕರಣದಲ್ಲಿ ಪೊಲೀಸ್ ತನಿಖೆ ನಡೆಯುತ್ತಿದ್ದು, ಸಂತ್ರಸ್ತರ ಆರೋಪ ನಿಜವಾಗಿದ್ದೇ ಆದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಇನ್ನಷ್ಟು ಸುದ್ದಿಗಳು
-
ಪತ್ರಕರ್ತನಿಗೆ ಪೋಕ್ಸೋ ಕೇಸ್ ವಾರ್ನಿಂಗ್ ಕೊಟ್ಟ ಪೊಲೀಸ್ ಆಫಿಸರ್ | ತೀರ್ಥಹಳ್ಳಿಯಲ್ಲಿ ಇದು ಸಾಧ್ಯನಾ?
-
ನೋಟು ಎಕ್ಸ್ಚೇಂಜ್ಗೆ ಡಬ್ಬಲ್ ದುಡ್ಡು ಆಫರ್ | ಹೊಸನಗರದ ವ್ಯಕ್ತಿಗೆ ಬಾಕ್ಸ್ ಕೊಟ್ಟು ಮೋಸ ಮಾಡಿದ ಐವರು ಅರೆಸ್ಟ್
-
ನಾಯಿ, ಬೆಕ್ಕುಗಳಿಗಾಗಿಯೇ ಶಿವಮೊಗ್ಗದಲ್ಲಿ ಓಪನ್ ಆಗಲಿದೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ | ಏಲ್ಲಿ ಗೊತ್ತಾ