SHIVAMOGGA | MALENADUTODAY NEWS | Aug 13, 2024 ಮಲೆನಾಡು ಟುಡೆ
ಇತ್ತೀಚೆಗಷ್ಟೆ ಶರಾವತಿ ಪಂಪ್ಡ್ ಸ್ಟೋರೆಜ್ ಯೋಜನೆಗೆ ಕೇಂದ್ರ ಡಿಪಿಆರ್ ತಯಾರಿಸಲು ಅನುಮತಿ ನೀಡಿತ್ತು. ಇದರ ಬೆನ್ನಲ್ಲೆ ಬೆಂಗಳೂರು (Bangalore)ಜಿಲ್ಲೆಗೆ ಶಿವಮೊಗ್ಗದಿಂದ ಶರಾವತಿ ನೀರನ್ನ ಪೂರೈಸುವ ಯೋಜನೆ ಸದ್ದು ಮಾಡುತ್ತಿದೆ.
ಈ ಕುರಿತಾಗಿ ಲಿಂಗನಮಕ್ಕಿ ಜಲಾಶಯದ (Linganamakki reservoir) ಹಿನ್ನೀರಿನಿಂದ ಬೆಂಗಳೂರು ಮಹಾನಗರಕ್ಕೆ (Bangalore Metropolitan )ಕುಡಿಯುವ ನೀರು ಪೂರೈಸುವ ಯೋಜನೆಯ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು ವಿಶ್ವೇಶ್ವರಯ್ಯ ಜಲನಿಗಮ (ವಿಜೆಎನ್‌ಎಲ್) ಮುಂದಾಗಿದೆ.
ವಿಜೆಎನ್‌ಎಲ್ ಕಾರ್ಯಸಾಧ್ಯತಾ ವರದಿ ಸಲ್ಲಿಕೆಗೆ ಬೆಂಗಳೂರಿನ ಈಐ ಟೆಕ್ನಾಲಜೀಸ್ ಸಂಸ್ಥೆಗೆ ಹೊಣೆ ವಹಿಸಿದೆ. ಮೂರರಿಂದ ನಾಲ್ಕು ತಿಂಗಳಲ್ಲಿ ಸಂಸ್ಥೆ ವರದಿ ನೀಡಬಹುದು ಎನ್ನಲಾಗಿದೆ. ಶರಾವತಿಯ 15 ಟಿಎಂಸಿ ಅಡಿ ನೀರನ್ನು ಬೆಂಗಳೂರಿಗೆ ಪೂರೈಸುವ ಯೋಜನೆ ಇದಾಗಿದ್ದು, ಇದಕ್ಕೆ ತೀವ್ರ ವಿರೋಧವಿದೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ