MALENADUTODAY.COM |SHIVAMOGGA| #KANNADANEWSWEB
ಭಾರತ್ ಜೋಡೋ ಯಾತ್ರೆಗೆ ಬಂದು ಅಪಘಾತದಲ್ಲಿ ಸಾವನ್ನಪ್ಪಿದ ಕಾರ್ಯಕರ್ತನಿಗೆ ಪರಿಹಾರ ಒದಗಿಸಲು ಶಿವಮೊಗ್ಗದ ಕಾಂಗ್ರೆಸ್ ನಾಯಕರು ಒಗ್ಗಟ್ಟಾಗಿದ್ದರು, ಕೆಪಿಸಿಸಿ ಅಧ್ಯಕ್ಷರೇ ಸ್ವತಃ ಕಾರ್ಯಕರ್ತನ ಮನೆಗೆ ಹೋಗಿ ಪರಿಹಾರ ನೀಡಿ ಸಾಂತ್ವನ ಹೇಳಿದ್ದರು. ಅದೇ ರೀತಿ ಹಿಂದೂ ಕಾರ್ಯಕರ್ತ ಹರ್ಷನ ಸಾವಿನ ವಿಚಾರದಲ್ಲಿ ಬಿಜೆಪಿ ನಾಯಕರೆಲ್ಲರೂ ಆತನ ಮನೆಗೆ ಬಂದು ಶ್ರದ್ಧಾಂಜಲಿ ಅರ್ಪಿಸಿ, ಘಟನೆಯನ್ನು ಖಂಡಿಸಿದ್ದರು. ಆದರೆ, ಇದೇ ರೀತಿಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದ ಉದ್ದಾಟನಾ ಕಾರ್ಯಕ್ರಮಕ್ಕೆ ಬಂದ ಬಿಜೆಪಿ ಕಾರ್ಯಕರ್ತ ಮಲ್ಲಿಕಾರ್ಜುನ್ ಸಾವಿಗೆ ಪರಿಹಾರ, ಶ್ರದ್ದಾಂಜಲಿ, ಸಂತಾಪವೇಕೆ ಬಿಜೆಪಿ ನಾಯಕರು ತೋರಿಸುತ್ತಿಲ್ಲ. ಹೀಗಂತ ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪರವರು ಗಂಭೀರ ಆರೋಪ ಮಾಡಿದ್ಧಾರೆ.
ಯಾವೊಬ್ಬ ಬಿಜೆಪಿ ಮುಖಂಡರು ಮೃತ ಕಾರ್ಯಕರ್ತನ ಮನೆಗೆ ಹೋಗಿ ಸಾಂತ್ವನ ಹೇಳಿಲ್ಲ. ಪರಿಹಾರ ನೀಡಿಲ್ಲ. ಆದರೆ ಮೃತ ಬಿಜೆಪಿ ಪಕ್ಷದ ಕಾರ್ಯಕರ್ತನ ಮನೆಗೆ ಯಾವುದೇ ಪ್ರಚಾರ ಬಯಸದೆ ನಾನು ಮಾನವೀಯತೆ ದೃಷ್ಟಿಯಿಂದ ಹೋಗಿ ಸಾಂತ್ವನ ಹೇಳಿ ಬಂದಿದ್ದೇನೆ ಎಂದ ಅವರು, ಬಿಜೆಪಿಯ ಡಬ್ಬಲ್ ಇಂಜಿನ್ ರಾಜಕಾರಣ ಇಲ್ಲಿ ಎದ್ದು ಕಾಣುತ್ತಿದೆ ಎಂದು ಟೀಕಿಸಿದರು.
ಡಬಲ್ ಇಂಜಿನ್ ಸರ್ಕಾರ ಹರ್ಷ ಕೊಲೆಯಾದ ಸಂದರ್ಭದಲ್ಲಿ ಜಾತಿ ಧರ್ಮದ ಲೆಕ್ಕಚಾರದಲ್ಲಿ ಹಿಂದುತ್ವದ ಹೆಸರೇಳಿ ರಾಜಕಾರಣ ಮಾಡಿತ್ತು. ಹರ್ಷ ಸಾವಿನ ಬಗ್ಗೆ ನನಗೂ ನೋವಿದೆ. ಅವರ ಕುಟುಂಬದವರಿಗೆ ದೇವರು ಒಳ್ಳೆಯದು ಮಾಡಲಿ. ಆತನ ಕುಟುಂಬಕ್ಕೆ ನೀಡಿದಂತೆ, ಬಿಜೆಪಿ ಮುಖಂಡರು ಸೊರಬದ ಮಲ್ಲಿಕಾರ್ಜುನ್ ಸಾವಿಗೆ ಕನಿಷ್ಟ ಇಪ್ಪತ್ತೈದು ಲಕ್ಷ ಪರಿಹಾರ ನೀಡಲಿ. ಬಿಜೆಪಿಯವರಿಗೆ ನಿಜಕ್ಕೂ ರೈತರ ಬಗ್ಗೆ ಕಾಳಜಿಯಿದ್ದರೆ ಇಂದೇ ಮಲ್ಲಿಕಾರ್ಜುನ್ ಮನೆಗೆ ಹೋಗಿ ಸಾಂತ್ಪನ ಹೇಳಿ ಪರಿಹಾರ ನೀಡಬೇಕು ಎಂದರು, ಪಕ್ಷದ ಸ್ವಂತ ಕಾರ್ಯಕರ್ತನ ಸಾವಿನಲ್ಲಿ ಬಿಜೆಪಿ ಮುಖಂಡರು ಅನ್ಯಾಯ ಮಾಡಬಾರದು. ಇಲ್ಲದಿದ್ದರೆ ಬಿಜೆಪಿಯವರು ಸಾವಿನಲ್ಲಿ ಮತ್ತು ಪರ್ಸೆಂಟೇಜ್ ನಲ್ಲಿ ರಾಜಕಾರಣ ಮಾಡ್ತಾರೆ ಅನ್ನೋದು ಪ್ರೂವ್ ಆಗುತ್ತೆ ಎಂದ ಮಧು ಬಂಗಾರಪ್ಪ ದೂರಿದ್ದಾರೆ.
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #