ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಬಗ್ಗೆ ಬಿಎಸ್​ವೈ ಮಹತ್ವದ ಮಾತು

 MALENADUTODAY.COM | SHIVAMOGGA  | #KANNADANEWSWEB

ಸ್ವತಃ ಮೋದಿಯವರೇ ನನ್ನ ಹುಟ್ಟು ಹಬ್ಬದ ದಿನ ಶಿವಮೊಗ್ಗ ವಿಮಾನ ಉದ್ಗಾಟನೆಗೆ ಬುರುತ್ತಿರುವುದು ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣವಾಗಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಪ್ರದಾನಿಯವರು ಬರುತ್ತಿರುವುದು ನನಗೆ ಸಮಾದಾನ ತಂದಿದೆ. ನಾಳಿನ ಕಾರ್ಯಕ್ರಮಕ್ಕೆ ಲಕ್ಷಾಂತರ ಮಂದಿ ಕಾರ್ಯಕರ್ತರು ಆಗಮಿಸುವ ನಿರೀಕ್ಷೆಯಿದೆ ಕಡಿಮೆ ವೆಚ್ಚದಲ್ಲಿ ಕೇವಲ ಎರಡು ವರ್ಷದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡಿದೆ. ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಇರುವ ರಾಜ್ಯದ ಎರಡನೇ ಅತೀ ದೊಡ್ಡ ವಿಮಾನ ನಿಲ್ದಾಣವಾಗಿದೆ. ಅಚ್ಚರಿ ಪಡುವ ವಿಶ್ವದ ಮಹಾನ್ ನಾಯಕರೇ ಈ ವಿಮಾನ ನಿಲ್ದಾಣದ  ಉದ್ಗಾಟನೆಗೆ ಬರುತ್ತಿರುವುದು ಕಾರ್ಯಕರ್ತರಿಗೆ ಉತ್ಸಾಹ ತಂದಿದೆ.ಅವರ ಮಾತುಗಳನ್ನು ಕೇಳುವ ಅವಕಾಶ ಕಾರ್ಯಕರ್ತರಿಗಿದೆ. ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಯಡಿಯೂರಪ್ಪ ಹೇಳಿದ್ದಾರೆ. 

ಈಗಾಗಲೇ ನಾನು ನಿರ್ಧಾರ ಮಾಡಿದ್ದೇನೆ. ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಮುಂದಿನ ಲೋಕಸಭೆ ಚುನಾವಣೆ ನಮಗೆ ಸವಾಲು ಮತ್ತೆ ಮೋದಿಯವರನ್ನು ಪ್ರಧಾನಿ ಮಾಡಬೇಕು..ನಾವು ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕು.ಎಂದು ಯಡಿಯೂರಪ್ಪ ಹೇಳಿದ್ದಾರೆ.

Leave a Comment