ಸಾರ್ವಜನಿಕರ ಗಮನಕ್ಕೆ : ನಾಳೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಈ ಭಾಗಗಳಲ್ಲಿ ವಿದ್ಯುತ್​ ವ್ಯತ್ಯಯವಾಗಲಿದೆ !

Malenadu Today

MALENADUTODAY.COM |  SHIVAMOGGA NEWS 

ನಾಳೆ ಶಿಕಾರಿಪುರದಲ್ಲಿ ವಿದ್ಯುತ್ ವ್ಯತ್ಯಯ

ಶಿಕಾರಿಪುರ ಪಟ್ಟಣದಲ್ಲಿ ರಸ್ತೆ ಅಗಲೀಕರಣ ಕೆಲಸ ದಿಂದಾಗಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯ ಕೆಲವೆಡೆ 12 ರಂದು ಬೆಳಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್‌ ಪೂರೈಕೆ ಇರುವುದಿಲ್ಲ ಎಂದು ಮೆಸ್ಕಾಂ ತಿಳಿಸಿದೆ. 

ನಂದಿಹಳ್ಳಿ, ಎನ್‌.ಜೆ. ವೈ. ಯರೇಕಟ್ಟೆ, ದೂಪದಹಳ್ಳಿ, ಇಂಡಸ್ಟ್ರಿಯಲ್, ಕೊಪ್ಪದಕೆರೆ ಫೀಡರ್‌ಗಳ ವ್ಯಾಪ್ತಿಯಲ್ಲಿನ ಶಿವಮೊಗ್ಗ ರಸ್ತೆ, ಚನ್ನಕೇಶವ ನಗರ, ನಂದಿಹಳ್ಳಿ, ಭದ್ರಾ ಪುರ, ತಿಮ್ಮಾಪುರ, ತರಲಘಟ್ಟ, ದೊಡ್ಡಜೋಗಿಹಳ್ಳಿ, ಭದ್ರಾಪುರ ರಸ್ತೆ, ಇಂಡಸ್ಟ್ರಿಯಲ್ ಏರಿಯಾ, ಕುಮದ್ಧತಿ ಕಾಲೇಜು, ಶಾಹಿ ಗಾರ್ಮೆಂಟ್ಸ್, ಕೋರ್ಟ್, ಡಿಗ್ರಿ ಕಾಲೇಜು, ಹೊಸ ದೂಪದಹಳ್ಳಿ, ಯರೇಕಟ್ಟೆ, ಕೊಪ್ಪದಕೆರೆ, ಸುತ್ತಮುತ್ತ ವಿದ್ಯುತ್ ಸ್ಥಗಿತಗೊಳ್ಳಲಿದೆ ಎಂದು ಎಇಇ ತಿಳಿಸಿದ್ದಾರೆ.

*ಜೂಜಾಟಕ್ಕೆ ಬಿತ್ತು ಹೆಣ! ಭದ್ರಾವತಿಯಲ್ಲಿ ಅಕ್ರಮ ಗೋಮಾಂಸ ಮಾರಾಟ ಕೇಸ್​ನಲ್ಲಿ ರಾಜಕಾರಣ! ಹಿಂಜಾವೆ ವಿರುದ್ಧ ಮುಸ್ಲಿಮ್​ ಸಂಘಟನೆಗಳ ಆಕ್ರೋಶ! ಇನ್ನಷ್ಟು ಸುದ್ದಿಗಳು ಇಲ್ಲಿದೆ ಓದಿ*

ರಾಷ್ಟಮಟ್ಟದ ಸೆಮಿನಾರ್  

ಸಹ್ಯಾದ್ರಿ ವಿಜ್ಞಾನ ಕಾಲೇಜು ಇಂಡಸ್ಟ್ರಿಯಲ್ ಕೆಮೆಸ್ಸಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವತಿಯಿಂದ ಫೆ.11 ರಂದು ಬೆಳಗ್ಗೆ 10 ಗಂಟೆಗೆ ಕಲಾ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಒಂದು ದಿನದ ನ್ಯಾಷನಲ್ ಲೆವೆಲ್ ಸೆಮಿನಾರ್ ಆಯೋಜಿಸಲಾಗಿದೆ. ಕುವೆಂಪು ವಿವಿ ಕುಲಪತಿ ಬಿ.ಪಿ ವೀರಭದ್ರಪ್ಪ ಸೆಮಿನಾರ್ ಉದ್ಘಾಟಿಸುವರು. ಅಗ್ನಿ ಸೆಕೆಂಡರಿ ಸೆಕ್ರೆಟರಿ ಸೆಕ್ಟರ್‌ನ ಉಪಸಮಿತಿ ಅಧ್ಯಕ್ಷ ವಿಶ್ವೇಶ್ವರಯ್ಯ ಎಸ್ ಆಶಯ ಭಾಷಣ ಮಾಡುವರು. ಕುವೆಂಪು ವಿವಿ ರಾಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.. ಭೋಜ್ಯಾ ನಾಯ್ಕ ಮುಖ್ಯ ಅತಿಥಿಯಾಗಿ ಆಗಮಿಸುವರು. ಪ್ರೊ.ರಾಜೇಶ್ವರಿ ಅಧ್ಯಕ್ಷತೆ ವಹಿಸುವರು. ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಕುವೆಂಪು ವಿವಿ ರಿಜಿಸ್ಟ್ರಾರ್ ಪ್ರೊ.ನವೀನ್‌ ಕುಮಾರ್ ಗೌರವ ಉಪಸ್ಥಿತರಿರುವರು. ಡಿಐಸಿ ಉಪನಿರ್ದೇಶಕ ವೀರೇಶ್ ನಾಯ್ಕ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಪ್ರೊ. ರಮೇಶ್ ಬಾಬು ಅತಿಥಿಯಾಗಿ ಭಾಗವಹಿಸುವರು. ಪ್ರೊ. ರಾಜೇಶ ಬಿ ಅವರು ಅಧ್ಯಕ್ಷತೆ ವಹಿಸಲಿದ್ಧಾರೆ. 

*ರಾಜ್ಯದ ಕೊಡಗು-ಕೇರಳ ಬಾರ್ಡರ್​ನಲ್ಲಿ ಮತ್ತೆ ಪ್ರತ್ಯಕ್ಷವಾದ ನಕ್ಸಲ್​​ ತಂಡ*

JP BIG EXCLUSIVE : ಸಕ್ರೆಬೈಲ್ ಅನೆ ಬಿಡಾರದಿಂದ ಮತ್ತೆ ಮೂರು ಆನೆಗಳ ಸ್ಥಳಾಂತರಕ್ಕೆ ಬೇಡಿಕೆ!

ನಂದಿನಿ ಜಂಬೋ ಪಾಕೆಟ್ ಹಾಲಿನ ದರ 3 ರೂಪಾಯಿ ಹೆಚ್ಚಳ!

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Share This Article