ಆನಂದಗಿರಿ ಬೆಟ್ಟದ ಮೇಲೆ ಅಗ್ನಿ ಪ್ರವೇಶ ಮಾಡಿ ಆತ್ಮಹತ್ಯೆ ಮಾಡಿಕೊಂಡರಾ ಆ ಮಹಿಳೆ! ತೀರ್ಥಹಳ್ಳಿ ಘಟನೆಯ ಬಗ್ಗೆ ಮಲೆನಾಡು ಟುಡೆಯ JP EXCLUSIVE ರಿಪೋರ್ಟ್​

Malenadu Today

JP EXCLUSIVE : ಈ ಘಟನೆ ಅಂದುಕೊಂಡಂತೆ ನಿಜವಾಗಿದ್ರೇ..ಇದು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸುವ ರೋಚಕ ಸಂಗತಿಯಾಗುತ್ತೆ. 21 ನೇ ಶತಮಾನದಲ್ಲಿ ಮಹಿಳೆಯೊಬ್ಬರು ತಮ್ಮನ್ನು ತಾವೇ ಅಗ್ನಿ ಸ್ಪರ್ಷ ಮಾಡಿಕೊಳ್ಳುವುದು ಎಂದರೇ ಎಂತವರ ಮೈ ಜುಮ್ಮೇನ್ನುತ್ತದೆ. ಆದ್ರೆ ಆ ಘಟನೆ ನಿಜವಾಗದಿರಲಿ ಎಂಬುದಷ್ಟೆ ಮಲೆನಾಡು ಟುಡೆಯ ನಿರೀಕ್ಷೆ

BREAKING NEWS :148 ಇನ್​​ಸ್ಪೆಕ್ಟರ್​ಗಳ ಟ್ರಾನ್ಸಫರ್​ ! ಶಿವಮೊಗ್ಗದ 3 ಸರ್ಕಲ್​, 8 ಕ್ಕೂ ಹೆಚ್ಚು ಸ್ಟೇಷನ್​ಗಳ ಇನ್​ಸ್ಪೆಕ್ಟರ್​ಗಳ ವರ್ಗಾವಣೆ

ನಡೆದಿದ್ದು ಏನು? 

ತೀರ್ಥಹಳ್ಳಿಯ ಆನಂದಗಿರಿ ಬೆಟ್ಟದ ಪಕ್ಕದ ಯಡೆಗುಡ್ಡ ಬೆಟ್ಟದಲ್ಲಿ ಜನವರಿ 27 ರಂದು ಮಹಿಳೆಯ ಶವ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅದು ಯಡೆಗುಡ್ಡ ಗ್ರಾಮದ 52 ವರ್ಷ ವಯಸ್ಸಿನ ಜಯಶ್ರಿಯವರ ಮೃತದೇಹ ಎಂದು ಪತ್ತೆ ಮಾಡಲು ಪೊಲೀಸರಿಗೆ ಹಾಗು ಕುಟುಂಬಸ್ಥರಿಗೆ ಬಹಳ ಸಮಯ ಬೇಕಾಗಲಿಲ್ಲ. ಮನೆ ಹಿಂದಿನ ಬೆಟ್ಟದಲ್ಲಿಯೇ ಆ ಮಹಿಳೆ ಅಂಗಾತವಾಗಿ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೂರು ದಿನ ಊರೆಲ್ಲಾ ಅಲೆದರೂ ಸಿಗದ ಮನೆಯ ಗೃಹಿಣಿ, ನಿವಾಸದ ಸನಿಹವೇ  ಸಾವನ್ನಪ್ಪಿದ್ದಾರೆ ಎಂದರೇ ಆ ಕುಟುಂಬದ ಸ್ಥಿತಿ ಹೇಗಾಗಿರಬೇಡ. ಅಲ್ಲಿ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತ್ತು.

thirthahalli : ಕಾಣೆಯಾಗಿದ್ದ ಮಹಿಳೆ ಶವವಾಗಿ ಪತ್ತೆ! ಜ್ಯೋತಿಷಿ ಹೇಳಿದ ದಿಕ್ಕಿನಲ್ಲಿ ಸಿಕ್ಕ ಮೃತದೇಹ

ಚಿತೆ ಮೇಲೆಯೇ ಜಯಶ್ರಿ ಅಂಗಾತವಾಗಿ ಮಲಗಿ ಆತ್ಮಹತ್ಯೆ ಮಾಡಿಕೊಂಡರಾ? 

ಜಯಶ್ರಿಯವರು ಜನವರಿ 23 ರಂದು ಮನೆಯಲ್ಲಿ ಲೆಟರ್ ಒಂದನ್ನು ಬರೆದಿದ್ದರು. ನಾನು ಬೆಂಗಳೂರಿಗೆ ತೆರಳುತ್ತಿದ್ದೇನೆ ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಲೆಟರ್ ಬರೆದು ಮನೆ ತೊರೆದಿದ್ದರು ಎನ್ನಲಾಗಿದೆ. ಆಬಳಿಕ ಮನೆಯವರು ಎಲ್ಲಿ ಹುಡುಕಿದರೂ. ಜಯಶ್ರಿ ಪತ್ತೆಯಾಗದ ಹಿನ್ನಲೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ರು. 27 ರಂದು ಜಯಶ್ರಿ ಮೃತದೇಹ ಮನೆ ಸನಿಹದ ಗುಡ್ಡದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದಕ್ಕೆ ಕಾರಣ ಮಹಿಳೆಯ ಮೃತದೇಹ  ಚಿತೆಯ ಮೇಲೆ ಅಂಗಾತ ಮಲಗಿದಂತೆ ಕಂಡುಬಂದಿತ್ತು.  . ಇದು  ಪೊಲೀಸರಿಗೆ ಹಲವು ಅನುಮಾನಗಳನ್ನು ಮೂಡಿಸಿದೆ.  

shivamogga airport news : ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಡಾ.ಬಿ.ಆರ್​. ಅಂಬೇಡ್ಕರ್​ರವರ ಹೆಸರಿಡಿ!

ಕ್ಯಾಲೆಂಡರ್ ನಲ್ಲಿ ಜನವರಿ 23 ರಂದು ಅಗ್ನಿಸ್ಪರ್ಶ ಎಂದು ಬರೆಯಲಾಗಿತ್ತಾ?

ಜಯಶ್ರೀಯವರದ್ದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಅನುಮಾನದಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಮಲೆನಾಡು ಟುಡೆ ಪ್ರಕರಣದ ಬಗ್ಗೆ ಮಾಹಿತಿ ಕಲೆಹಾಕಲು ಆರಂಭಿಸಿದ ಸಂದರ್ಭದಲ್ಲಿ ಜನವರಿ 23 ರ ಕ್ಯಾಲೆಂಡರ್ ನಲ್ಲಿ ಅಗ್ನಿಸ್ಪರ್ಶ ಎಂದು ಬರೆಯಲಾಗಿತ್ತು ಎಂಬ ವಿಚಾರವೊಂದು ಗೊತ್ತಾಗಿದೆ. ಈ ರೀತಿ ಅಗ್ನಿಸ್ಪರ್ಶಕ್ಕೆ ಗುರಿಯಾದರೆ ಮೋಕ್ಷ ಪ್ರಾಪ್ತಿಯಾಗುತ್ತಾ ಎಂಬ ಉದ್ದೇಶ ಅದರಲ್ಲಿತ್ತಾ ಅಥವಾ ಯಾರಾದ್ರೂ ಜ್ಯೋತಿಷಿಗಳು ಈ ಐಡಿಯಾ ಕೊಟ್ಟಿದ್ದರಾ ಎಂಬುದು ಪ್ರಶ್ನೆಯಾಗಿ ಉಳಿಯುತ್ತದೆ. 

hosanagara news : ಕೋರ್ಟ್​ ವ್ಯಾಜ್ಯದ ನಡುವೆ ಪಂಜುರ್ಲಿ ದೈವಕ್ಕಾಗಿ ನಿರ್ಮಿಸಿದ್ದ ಹೊಸ ದೇಗುಲ ಕಟ್ಟಡ ಧ್ವಂಸ

ಬಂಕ್ ನಲ್ಲಿ ಪೆಟ್ರೋಲ್ ಖರೀದಿಸಿದ್ದ ಜಯಶ್ರೀ

ಜಯಶ್ರಿ ನಿಗೂಢ ಸಾವಿಗೂ ಮುನ್ನ ಖುದ್ದು ಅವರೇ ತೀರ್ಥಹಳ್ಳಿಯ ಪೆಟ್ರೋಲ್ ಬಂಕ್ ಒಂದರಲ್ಲಿ ಐದು ಲೀಟರ್ ಪೆಟ್ರೋಲ್ ನ್ನು ಖರೀದಿಸಿದ್ದಾರೆ. ಇದರ ಸಾಕ್ಷ್ಯ ಕೂಡ ಪೊಲೀಸರಿಗೆ ಲಭ್ಯವಾಗಿದೆ. ಹೇಗೋ ಸಿಟಿಗೆ ಹೋಗ್ತಿದ್ದಿಯಾ ಪೆಟ್ರೊಲ್ ತೆಗೆದುಕೊಂಡು ಬಾ ಎಂದು ಯಾರಾದ್ರೂ ಜಯಶ್ರಿಗೆ ಹೇಳಿರಬಹುದಾದ ಸಾಧ್ಯತೆಗಳನ್ನು ಇಲ್ಲಿ ಅಲ್ಲಗಳೆಯುವಂತಿಲ್ಲ. ಅಥವಾ ಜಯಶ್ರೀಯವರೇ ಪೆಟ್ರೋಲ್ ಖರೀದಿಸುವ ಮನಸ್ಸು ಮಾಡಿದ್ದರೇನೋ ಗೊತ್ತಿಲ್ಲ. ಹೀಗೆ ಹಲವು ಆಯಾಮಗಳಲ್ಲಿ ಸಾಗುವ ತನಿಖೆಯ ನಡುವೆ ಒಂದಿಷ್ಟು ಪ್ರಶ್ನೆಗಳು ಇಲ್ಲಿ ಉದ್ಭವವಾಗುತ್ತಿದೆ

VISL ಗೇ ಶಾಹಿ ಗಾರ್ಮೆಂಟ್ಸ್​ ಪರ್ಯಾಯವೇ? ಅಪ್ಪ ಕಳ್ಳ-ಮಗ ಸುಳ್ಳ! ಭದ್ರಾವತಿಯಲ್ಲಿ ಸಂಸದರಿಗೆ ಘೇರಾವ್​! ಬಿಜೆಪಿಗೆ ಮುಖಭಂಗ! ಫೆ.3 ಕ್ಕೆ ಹೆಚ್​​ಡಿಕೆ ಎಂಟ್ರಿ

ಕಾಡುವ ಪ್ರಶ್ನೆಗಳು

 1. ಜಯಶ್ರಿಯವರು ಕಾಲು ನೋವಿನ ತೊಂದರೆ ಅನುಭವಿಸುತ್ತಿದ್ರು ಎಂಬುದು ಮೂಲಗಳಿಂದ ತಿಳಿದು ಬಂದಿದೆ. ಅವರಿಗೆ ಅಷ್ಟೊಂದು ಗಟ್ಟಿಯಾಗಿ ನಡೆಯಲು ಸಾಧ್ಯವಾಗುತ್ತಿರಲಿಲ್ಲ. 52 ವಯಸ್ಸಿನ ಮಹಿಳೆ ಐದು ಲೀಟರ್ ಪೆಟ್ರೋಲ್ ಕ್ಯಾನ್ ಹಿಡಿದು ಕಡಿದಾದ ಬೆಟ್ಟ ಏರಲು ಹೇಗೆ ಸಾಧ್ಯ ಎಂಬ ಅನುಮಾನ ಮೊದಲಿಗೆ ಮೂಡುತ್ತೆ. 

2 ಕಡಿದಾದ ಗುಡ್ಡ ಹತ್ತಲು ಜಯಶ್ರಿಗೆ ಸ್ಥಳದಲ್ಲಿ ಯಾರಾದ್ರೂ ಸಹಾಯ ಮಾಡಿರಬೇಕು..ಇಲ್ಲವೇ ಯಾರಾದ್ರೂ ಕೊಲೆ ಮಾಡೋ ಉದ್ದೇಶದಿಂದಲೇ ಪುಸಲಾಯಿಸಿ ಗುಡ್ಡಕ್ಕೆ ಕರೆತಂದಿರುವ ಅನುಮಾನ ಕಾಡುತ್ತೆ

3.ಚಿತೆ ಮೇಲೆ ಅಂಗಾತವಾಗಿ ಜಯಶ್ರಿ ಮಲಗಿದ ರೀತಿಯಲ್ಲಿ ಶವವಾಗಿರುವುದನ್ನು ಗಮನಿಸಿದಾಗ ಅವರೇ ಖುದ್ದು ಅಗ್ನಿಸ್ಪರ್ಶ ಮಾಡಿಕೊಂಡರೇ ಎಂಬ ಅನುಮಾನ ಮೂಡುತ್ತದೆಯಾದ್ರೂ..ಅವರನ್ನು ಕೊಲೆ ಮಾಡಲು ಉದ್ದೇಶ ಹೊಂದಿದವರು ಮೊದಲೇ ಪ್ರಜ್ಞೆ ತಪ್ಪಿಸಿ, ನಂತರ ಚಿತೆ ಮೇಲೆ ಇಟ್ಟು ಬೆಂಕಿ ಹಚ್ಚಿರುವ ಸಾದ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ

4.ಇನ್ನು ಜಯಶ್ರಿಯವರೇ ಪೆಟ್ರೋಲ್ ಸುರಿದು ಕೊಂಡು ಅಗ್ನಿ ಸ್ಪರ್ಶ ಮಾಡಿಕೊಂಡಿದ್ರೆ..ಪೆಟ್ರೋಲ್ ಕ್ಯಾನ್ ಆಗಲಿ..ಅದರ ಟ್ಯಾಪ್ ಆಗಲಿ ಸ್ಥಳದಲ್ಲಿ ಪತ್ತೆಯಾಗಿರಬೇಕಿತ್ತು…ಅಲ್ಲಿ ಅದ್ಯಾವ ಕ್ಯಾನ್ ಆಗಲಿ.., ಅದರ ಬೂಚ್ ಆಗಲಿ ಪತ್ತೆಯಾಗಿಲ್ಲ. ಇದು ಕೊಲೆ ಎಂದು ಬೊಟ್ಟು ಮಾಡಿ ತೋರಿಸುವ ಮೊದಲ ಸಾಕ್ಷ್ಯ ನಾಶ ಎಂದರೂ ತಪ್ಪಾಗುವುದಿಲ್ಲ

5.ಇನ್ನು ಆ ಪ್ರದೇಶದ ಒಂಟಿ ಮನೆಯ ಹಿಂದಿನ ಬೆಟ್ಟದಲ್ಲಿ ಈ ಘಟನೆ ನಡೆದು ಕುಟುಂಬಸ್ಥರಿಗೆ ಅರಿವಿಗೆ ಬಾರದಂತೆ ಈ ಕೃತ್ಯ ನಡೆದಿದೆ ಎಂದರೇ ಇಲ್ಲಿ ಕೂಡ ಅನುಮಾನ ಕಾಡದೆ ಇರಲಾರದು.

ಇನ್ನು ಜ್ಯೋತಿಷಿ ನೀಡಿದ ಸಲಹೆಯಂತೆ ಮನೆ ಹುಡುಕಿದಾಗ ಜಯಶ್ರಿ ಮೃತದೇಹ ಪತ್ತೆಯಾಯ್ತು ಎಂಬುದೇ ಇಲ್ಲಿ ರೋಚಕ ಸಂಗತಿ. ಅದೇನೇ ಆಗಲಿ ಜಯಶ್ರಿಯವರ ನಿಗೂಢ ಸಾವಿಗೆ ಎಸ್ಪಿ ಮಿಥುನ್ ಕುಮಾರ್ ನ್ಯಾಯಕೊಡಿಸುವರೆಂಬ ಭರವಸೆ ಕುಟುಂಬಸ್ಥರಿಗೆ ಹಾಗು ತೀರ್ಥಹಳ್ಳಿ ಜನತೆಗಿದೆ.

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Share This Article