ಟಿವಿ ಮಾಧ್ಯಮಗಳ ‘ದಾಳಿ’ ವರದಿ ಮತ್ತು ಬಿಜೆಪಿ ಸುಳ್ಳು ಸುದ್ದಿ : ಕಿಮ್ಮನೆ ರತ್ನಾಕರ್​ ತೆರೆದಿಟ್ಟ ವಿಚಾರವೇನು?

Malenadu Today

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಕಾಂಗ್ರೆಸ್ ಕಚೇರಿಯಲ್ಲಿ ಇಡಿ ಅಧಿಕಾರಿಗಳ ಪರಿಶೀಲನೆ ಬಗ್ಗೆ ಕಿಮ್ಮನೆ ರತ್ನಾಕರ್ ಈಗಾಗಲೇ ಮಲೆನಾಡು ಟುಡೆ ತಂಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ಅವರು ಈ ಸಂಬಂಧ ವಿಡಿಯೋ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಬಿಜೆಪಿ ಹಾಗೂ ಕೆಲ ಮಾಧ್ಯಮಗಳ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ಶಿವಮೊಗ್ಗದಿಂದಲಾ ಕಿಚ್ಚ ಸುದೀಪ್ ಚುನಾವಣಾ​ ಸ್ಪರ್ದೆಚಿತ್ರದುರ್ಗದಿಂದನಾಏನಿದು ವರದಿ?

ಆ ಕುಟುಂಬ ಹಾಗೂ ನಮಗೂ ಮಾಲೀಕ ಹಾಗೂ ಬಾಡಿಗೆ ದಾರ ಸಂಬಂಧ ಅಷ್ಟೆ, ಅಧಿಕಾರಿಗಳ ವಿಚಾರಣೆ, ಪಕ್ಷಕ್ಕೂ ಹಾಗೂ ನಮಗೂ ಯಾವುದೇ ಸಂಬಂಧವಿಲ್ಲ, ಆ ಕುಟುಂಬಕ್ಕೂ ಆರಗ ಜ್ಞಾನೇಂದ್ರರವರಿಗು ಏನು ಸಂಬಂಧ ಇದೆಯೋ ನನಗೆ ಗೊತ್ತಿಲ್ಲ, ಉಳಿದ ಮಾಹಿತಿ ಗೃಹಸಚಿವರಾದ ಆರಗ ಜ್ಞಾನೇಂದ್ರರವರಿಗೆ ಗೊತ್ತಿರಬೇಕು. ನನಗೆ ಮಾಹಿತಿಯಿಲ್ಲ ಎಂದರು, ತೀರ್ಥಹಳ್ಳಿಯಲ್ಲಿ ಈ ಹಿಂದಿನ ದಾಖಲೆಗಳು ಹೇಳುವಂತೆ, ಕೋಮುಗಲಭೆ ಸೃಷ್ಟಿ ಮಾಡುವವರು ಅವರೇ ಆಗಿದ್ದಾರೆ. ಅವರು ಕೂಡ ಹಿಂದೆ ಆರೋಪಿಯಾಗಿದ್ದರು. ಇದನ್ನ ಮತ್ತೊಂದೇನೋ ಮಾಡಲು ಹೊರಟಿದ್ಧಾರೇನೋ ನಮಗೆ ಗೊತ್ತಿಲ್ಲ ಎಂದಿದ್ದಾರೆ. 

BREAKING NEWS – ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ (ಕಾಂಗ್ರೆಸ್​ ಆಫೀಸ್​)​ ಕಚೇರಿಯಲ್ಲಿ ED ಅಧಿಕಾರಿಗಳ ಪರಿಶೀಲನೆ! ಕಾರಣವೇನು

ಕೆಲವೊಂದು ಚಾನಲ್​ನಲ್ಲಿ ಕಿಮ್ಮನೆಯವರ ಮನೆ ಮೇಲೆ ದಾಳಿ ಮಾಡಿದ್ದಾರೆ ಎಂದು ವರದಿಯಾಗಿದೆ. ನಮ್ಮನೆ ಮೇಲೆ ದಾಳಿ ಮಾಡಲು ಏನೂ ಇಲ್ಲ. ಮನೆಗೆ ಹೋದರೆ ಕನಿಷ್ಟ ಹತ್ತುಸಾವಿರ ದುಡ್ಡು ಸಿಗೋದಿಲ್ಲ. ಅವರೇ ನಮಗೆ ದುಡ್ಡುಕೊಟ್ಟು ಹೋಗಬೇಕೆ ವಿನಃ ಅವರಿಗೆ ಅಲ್ಲಿ ಫ್ರಿಡ್ಜ್​ ಸೋಫಾ ಬಿಟ್ಟರೇ ಬೇರೆನೂ ಸಿಗಬೇಕು ಎಂದ ಕಿಮ್ಮನೆರತ್ನಾಕರ್​, ಬಿಜೆಪಿಯವರು ಈ ಸುಳ್ಳು ಸುದ್ದಿಯನ್ನು ಹರಿಬಿಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಕೆಲ ಮಾಧ್ಯಮಗಳು ಹಾಗಂತೆ ಹೀಗಂತೆ ಸುದ್ದಿ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಲಾಭವಾಗಬಹುದು ಎಂಬ ಉದ್ದೇಶದಿಂದ ಬಿಜೆಪಿಯವರು ಇಂತಹ ಕಪೋಲ ಕಲ್ಪಿತವಾಗಿದ್ದನ್ನ ಸೃಷ್ಟಿಸಿ ಲಾಭ ಮಾಡಲು ಹೊರಟಿದ್ಧಾರೆ ಎಂದು ದೂರಿದ್ಧಾರೆ.  

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Share This Article