ಶಿವಮೊಗ್ಗ ಕೋಮುಗಲಭೆಯ ಹಿಂದಿರೋ ತಂಡದ ಹೆಡೆಮುರಿ ಕಟ್ಟಿದ್ರಾ ಎಸ್​ಪಿಮಿಥುನ್​ ಕುಮಾರ್! ಏನಿದು ಕೇಸ್​? JP ಸ್ಟೋರಿ

Malenadu Today

ಶಿವಮೊಗ್ಗದಲ್ಲಿ ತಲೆ ಎತ್ತಿದ್ದ ಸವಳಂಗ ರಸ್ತೆಯ ಹುಕ್ಕಾಬಾರ್ ಮೇಲೆ SP ಮಿಥುನ್ ಕುಮಾರ್ ರೈಡ್ ಮಾಡುತ್ತಿದ್ದಂತೆ, ಹಲವು ಮಹತ್ವದ ಸಂಗತಿಗಳು ಹೊರಬಿದ್ದಿದೆ. ಓಸಿ ಬಿಡ್ಡಿಂಗ್ ಟೀಂಗೆ  SP ಮಿಥುನ್ ಕುಮಾರ್  (shivamogga sp)ಖಾಕಿಯ ಬಿಸಿ ಮುಟ್ಟಿಸಿದ್ದಾರೆ. 

ಶಿವಮೊಗ್ಗ ಜಿಲ್ಲಾ ಮತದಾರರ ಪಟ್ಟಿ ಬಿಡುಗಡೆ, ಯಾವ್ಯಾವ ಕ್ಷೇತ್ರದಲ್ಲಿ ಎಷ್ಟು ಮತದಾರರಿದ್ದಾರೆ. ಪೂರ್ತಿ ಪಟ್ಟಿ ಇಲ್ಲಿದೆ ಓದಿ

ಶಿವಮೊಗ್ಗದ ಸವಳಂಗ ರಸ್ತೆಯಲ್ಲಿ ಶಾಲೆ ಹತ್ತಿರವೇ ಹುಕ್ಕಾಬಾರ್​  ನಡೆಯುತ್ತಿತ್ತು. ಆ ಸಂಬಂಧ ಹಲವು ಸಲವು ಕಂಪ್ಲೇಂಟ್ ಕೊಟ್ಟರು, ಅದನ್ನು ಅಲ್ಲಿಂದ ಒಕ್ಕಲೆಬ್ಬಿಸಲು ಸಾಧ್ಯವಾಗಿರಲಿಲ್ಲ. ಈ ಮಧ್ಯೆ ಟ್ವಿಟ್ಟರ್ ಬಳಕೆದಾರರೊಬ್ಬರು ಹೀಗೀಗೆ ಈಥರಕ್ಕೆ ಈಥರ ಎಂದು ವಿಚಾರವನ್ನು ಕೆಲವೊಂದು ದಾಖಲೆ ಸಮೇತ ಶಿವಮೊಗ್ಗ ಎಸ್​ಪಿಯವರನ್ನ ಕೋಟ್ ಮಾಡಿ ಟ್ವೀಟ್ ಮಾಡಿದ್ದರು. 

ಇದರ ಬೆನ್ನಲ್ಲೆ ಎಸ್​ಪಿ ಮಿಥುನ್ ಕುಮಾರ್, ಪ್ರಕರಣದ ಬೆನ್ನಬಿದ್ದಿದ್ದರು. ಬಳಿಕ ನಡೆದ ಹುಕ್ಕಾಬಾರ್​ನ ಮೇಲೆ ನಡೆದ ರೇಡ್​ನಲ್ಲಿ ಪೊಲೀಸ್ ತನಿಖೆಯಲ್ಲಿ ಮತ್ತಷ್ಟು ವಿಚಾರಗಳು ಬೆಳಕಿಗೆ ಬಂದಿದೆ. ಈ ಮಧ್ಯೆ ಕೇಸ್​ಗೆ ಸಂಬಂಧಿಸಿದ ಜಾಲವೊಂದು  ಶಿವಮೊಗ್ಗದ ಶಾಂತಿ ಭಂಗಕ್ಕೆ ತೆರೆಹಿಂದೆ ವ್ಯವಸ್ಥಿತವಾಗಿ ಕೆಲಸ ಮಾಡಿದೆ ಎಂಬ ಮಾಹಿತಿ ಪೊಲೀಸ್ ಇಲಾಖೆಗೆ ಲಭ್ಯವಾಗಿದೆ.  ಇಂತಹ ಫೈನಾನ್ಸ್ ಪೀಡಿಂಗ್ ರಾಕೇಟ್ ಗೆ ಬ್ರೇಕ್ ಗೆ ಹಾಕಿದ್ದಾರೆ ಎಸ್ಪಿ ಮಿಥುನ್ ಕುಮಾರ್. 

ಶಿವಮೊಗ್ಗ ಜಿಲ್ಲೆಯ ಮತದಾರರ ಪಟ್ಟಿ ರಿಲೀಸ್​/ ಪೂರ್ತಿ ಡಿಟೇಲ್ಸ್​ ಇಲ್ಲಿದೆ/ ನಿಮ್ಮ ಹೆಸರು ಇದ್ಯಾ ಎಂದು ನೋಡುವುದು ಹೇಗೆ? ಇಲ್ಲಿದೆ ವಿವರ

ಏನಿದು ಪ್ರಕರಣ? 

ಮಿಥುನ್ ಕುಮಾರ್ ಖುದ್ದಾಗಿ ಕಾರ್ಯಾಚರಣೆ ನಡೆಸಿ ಕಮ್ಯುನಲ್ ಗೂಂಡಾಗಳಿಗೆ ಪೈನಾನ್ಸ್ ಮಾಡುತ್ತಿದ್ದ ಓಸಿ ಬಿಡ್ಡರ್ ಗಳನ್ನು ಬಂಧಿಸಿದ್ದಾರೆ.  ಈ ಪೈಕಿ ಕೆಲವರು ಅಕ್ರಮ ಚಟುವಟಿಕೆಗಳಲ್ಲಿ ಹಿಂದೆಯು ಕಾಣಿಸಿಕೊಂಡಿದ್ದರು. ಅಲ್ಲದೆ ಓಸಿ ಇಸ್ಪೀಟಿನಿಂದ ಬರುವ ಆದಾಯವನ್ನು ಕಮ್ಯುನಲ್ ಗೂಂಡಾಗಳಿಗೆ ಪೈನಾನ್ಸ್ ಪೀಡಿಂಗ್ ಮಾಡುತ್ತಿತ್ತು ಎಂಬ ಗಂಭೀರ ಆರೋಪವಿದೆ. ಕೊಮುಗಲಭೆಯಲ್ಲಿ ಭಾಗಿಯಾದವರ ರಕ್ಷಣೆ, ಕೊಲೆ ಮಾಡಿದ ಆರೋಪಿಗಳನ್ನು ಜೈಲಿನಿಂದ ಬಿಡಿಸಿಕೊಂಡು ಬರಲು ಎಲ್ಲಾ ರೀತಿಯ ಆರ್ಥಿಕ ನೆರವು ನೀಡುತ್ತಿತ್ತು ಎಂಬ ವಿಚಾರವೂ ಪೊಲೀಸ್​​ ಮೂಲಗಳಲ್ಲಿದೆ. 

ಇದನ್ನು ಸಹ ಓದಿ NIA NEWS / ಸತ್ಯ ಬಾಯ್ಬಿಟ್ಟ ಮಾಜ್​/ ಶಿವಮೊಗ್ಗದಲ್ಲಿ ಕ್ರಿಪ್ಟೋ ಕರೆನ್ಸಿ ಶಂಕಿತ ಅರೆಸ್ಟ್​/ NIA ಹೇಳಿದ ಬೆಂಕಿ ಹಚ್ಚುವ ದುಷ್ಕತ್ಯದ ಸ್ಕೆಚ್​ ಏನು?

ಅಕ್ರಮ ದಂಧೆಗಳನ್ನು ನಡೆಸಿ, ಅದರಿಂದ ಬರುವ ಹಣವನ್ನು ಸಮಾಜದಲ್ಲಿ ಶಾಂತಿ ಕದಡುವವರಿಗೆ ಪೈನಾನ್ಸ್ ಮಾಡುತ್ತಿದ್ದರು ಎಂದರೆ ಇದು ಯೋಚಿಸುವಂತ ಸಂಗತಿಯಾಗಿದೆ. ಜೀವನ್ ಮತ್ತು  ಹರ್ಷ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಿಗೆ ಜೈಲಿನಿಂದ ಬಿಡಿಸಿಕೊಂಡು ಬರಲು ಈ ಜಾಲವೇ ವ್ಯವಸ್ಥಿತವಾಗಿ ಪೈನಾನ್ಸ್ ಮಾಡಿದೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ. ಇಂತಹ ಜಾಲವನ್ನು ಎಸ್ಪಿ ಮಿಥುನ್ ಕುಮಾರ್ ಭೇದಿಸಿರುವುದು ಶ್ಲಾಘನೀಯವಾಗಿದೆ.

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Share This Article