ಶಿವಮೊಗ್ಗ ಜಿಲ್ಲೆಯ ಮತದಾರರ ಪಟ್ಟಿ ಫೈನಲ್ ಆಗಿದೆ. ಈ ಮೊದಲು ನೀಡಿದ್ದ ಕರಡು ಪ್ರತಿಯ ಪರಿಷ್ಕರಣೆಯ ಬಳಿಕ ಇದೀಗ ಮತದಾರರ ಪಟ್ಟಿ ಅಂತಿಮಗೊಂಡು ಬಿಡುಗಡೆಗೊಂಡಿದೆ. ಇದಕ್ಕೆ ಪೂರಕವಾಗಿ ಶಿವಮೊಗ್ಗ ಜಿಲ್ಲೆಯ ವಿವರಗಳನ್ನು ನೋಡುವುದಾದರೆ, ಒಟ್ಟಾರೆ, ಮತದಾರರ ಸಂಖ್ಯೆ ಹಾಗೂ ಅದಕ್ಕೆ ಸಂಬಂಧಿಸಿದ ವಿವರ ಇಲ್ಲಿದೆ ಓದಿ.
| ಕ್ಷೇತ್ರ | ಪುರುಷ | ಮಹಿಳೆಯರು | ತೃತಿಯ ಲಿಂಗಿ | ಒಟ್ಟು | |
| ಶಿವಮೊಗ್ಗ ನಗರ | 123770 | 129204 | 15 | 2,52,989 | |
| ಶಿವಮೊಗ್ಗ ಗ್ರಾಮಾಂತರ | 103534 | 104525 | 03 | 2,08,062 | |
| ಭದ್ರಾವತಿ | 101058 | 106546 | 03 | 2,07,609 | |
| ತೀರ್ಥಹಳ್ಳಿ | 91376 | 93475 | 03 | 1,84,854 | |
| ಶಿಕಾರಿಪುರ | 98281 | 97086 | 04 | 1,95,371 | |
| ಸೊರಬ | 97070 | 95148 | 02 | 1,92,220 | |
| ಸಾಗರ | 99401 | 101326 | 01 | 2,00,728 | |
| ಒಟ್ಟು | 714490 | 727310 | 33 | 14,41,833 |
ಇದನ್ನು ಸಹ ಓದಿ NIA NEWS / ಸತ್ಯ ಬಾಯ್ಬಿಟ್ಟ ಮಾಜ್/ ಶಿವಮೊಗ್ಗದಲ್ಲಿ ಕ್ರಿಪ್ಟೋ ಕರೆನ್ಸಿ ಶಂಕಿತ ಅರೆಸ್ಟ್/ NIA ಹೇಳಿದ ಬೆಂಕಿ ಹಚ್ಚುವ ದುಷ್ಕತ್ಯದ ಸ್ಕೆಚ್ ಏನು?
2023 ರ ಸಾರ್ವತ್ರಿಕ ವಿಧಾನಸಭಾ ಚುನಾವಣಾ ಸಂಬಂಧದಲ್ಲಿ ಅರ್ಹ ಮತದಾರರು ಮತದಾರರ ಪಟ್ಟಿಗೆ ಚುನಾವಣಾ ಆಯೋಗ ನಿಗದಿಪಡಿಸುವ ದಿನಾಂಕದವರೆಗೂ ಹೆಸರು ಸೇರಿಸಲು ಅವಕಾಶವಿರುತ್ತದೆ. ನಮೂನೆ -6 ಸೇರ್ಪಡೆ, ನಮೂನೆ-6ಎ ಅನಿವಾಸಿ ಭಾರತೀಯರು ಹೆಸರು ನೊಂದಾಯಿಸಿಕೊಳ್ಳಲು, 6-ಬಿ ಮತದಾರರ ಪಟ್ಟಿಯೊಂದಿಗೆ ಆಧಾರ್ ಜೋಡಣೆ ಮಾಡಿಕೊಳ್ಳಲು, ನಮೂನೆ-7 ತೆಗೆದು ಹಾಕಲು, ನಮೂನೆ-8ರಲ್ಲಿ ತಿದ್ದುಪಡಿ, ವರ್ಗಾವಣೆ, ಬದಲಿ ಎಪಿಕ್ಗೆ ಮನವಿ ಮತ್ತು ಅಂಗವೈಕಲ್ಯ ಹೊಂದಿರುವ ಮತದಾರರು ವಿವರ ದಾಖಲಿಸಲು ಅವಕಾಶವಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಹೊನ್ನಳ್ಳಿ ತಿಳಿಸಿದರು. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು https://ceo.karnataka.gov.in ನಲ್ಲಿ ಲಭ್ಯವಿದ್ದು, ಮತದಾರರು ತಮ್ಮ ಹೆಸರನ್ನು ಖಚಿತಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಲಾಗಿದೆ.
