ಶಿವಮೊಗ್ಗ (shivamogga) ಮತ್ತು ದಕ್ಷಿಣಕನ್ನಡ (daksina kannada) ಸೇರಿದಂತೆ ಒಟ್ಟು ಆರು ಕಡೆಗಳಲ್ಲಿ ಬುಧವಾರದ ದಿನ ಹಾಗೂ ಅದರ ಹಿಂದಿನ ರಾತ್ರಿ ಎನ್ಐಎ ನಡೆಸಿದ ದಾಳಿಯ ಇನ್ನೊಂದಿಷ್ಟು ಅಪ್ಡೇಟ್ಸ್ ಸಿಕ್ಕಿದೆ.
ಈ ಸಂಬಂದ ದೆಹಲಿ ಮೂಲಗಳಲ್ಲಿ ಸಿಕ್ಕಿರುವ ಮಾಹಿತಿ ಪ್ರಕಾರ, ಎನ್ಐಎ ತಂಡ ಇಬ್ಬರನ್ನು ಅರೆಸ್ಟ್ ತೋರಿಸಿದೆ. ಆ ಪೈಕಿ ಓರ್ವ ಶಿವಮೊಗ್ಗದವನು. ಇನ್ನೊಬ್ಬ ಕರಾವಳಿ ಕಡೆಯವನು ಎಲ್ಳಾ ಮಾದ್ಯಮಗಳಲ್ಲಿ ಪ್ರಕಟವಾಗಿರುವಂತೆ ರೆಶಾನ್ ತಾಜುದ್ದೀನ್ ಶೇಖ್ ಮತ್ತು ಹಜೈಗ್ ಫರ್ಹಾನ್ ಬೇಗ್ ಬಂಧಿತರು.
ಫೆಬ್ರವರಿಗೆ ಪ್ರಧಾನಿ ಮೋದಿ ಆಗಮನ/ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ದಿನಾಂಕ ಫಿಕ್ಸ್? ಏನಿದು ಅಪ್ಡೇಟ್ಸ್
ಎನ್ಐಎ ಮೂಲಗಳು ದೆಹಲಿಯ ರಾಷ್ಟ್ರೀಯ ಮಾಧ್ಯಮಗಳಿಗೆ ಬಿಟ್ಟುಕೊಟ್ಟಿರುವ ಸುದ್ದಿಯ ಪ್ರಕಾರ, ಈ ಇಬ್ಬರ ಬಂಧನ ಶಿವಮೊಗ್ಗದಲ್ಲಿ ಕಳೆದ ವರ್ಷ ಸೆಪ್ಟೆಂಬರ್ 19 ರಂದು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ (shivamogga rural police station) ದಾಖಲಾದ ಕೇಸ್ನ ಹಿನ್ನೆಲೆಯಲ್ಲಿ ಆಗಿದೆ. ಇದೇ ವಿಚಾರವಾಗಿ ರಾಷ್ಟ್ರೀಯ ತನಿಖಾ ದಳ (NIA ) ಕಳೆದ ವರ್ಷದ ನವೆಂಬರ್ 15 ರಂದು ಕೇಸ್ ದಾಖಲಿಸಿತ್ತು.
ಈ ಪ್ರಕರಣದಲ್ಲಿ ಶಿವಮೊಗ್ಗ ಪೊಲೀಸ್ರು ಅಂದಿನ ಎಸ್ಪಿ ಲಕ್ಷ್ಮೀಪ್ರಸಾದ್ ನೇತೃತ್ವದಲ್ಲಿ ಮುನೀರ್ ಮಾಜ್ ಮತ್ತು ಯಾಸೀನ್ನನ್ನ ಬಂಧಿಸಿತ್ತು. ಆ ವೇಳೇ ತೀರ್ಥಹಳ್ಳಿ ಶಾರೀಕ್ ತಪ್ಪಿಸಿಕೊಂಡಿದ್ದ. ಈ ಆರೋಪಿಗಳು ತುಂಗಾತೀರದಲ್ಲಿ ಟ್ರಯಲ್ ಬ್ಲಾಸ್ಟ್ ಮಾಡಿರುವ ಹಾಗೂ ರಾಷ್ಟ್ರಧ್ವಜ ಸುಟ್ಟಿರುವ ಬಗ್ಗೆ ತನಿಖೆಯಲ್ಲಿ ಬಯಲಾಗಿತ್ತು.
ಶಿವಮೊಗ್ಗದ ಈ ಭಾಗದಲ್ಲಿಂದು ಮೆಸ್ಕಾಂ ಕಾಮಗಾರಿ/ ಪವರ್ ಕಟ್/ ಎಲ್ಲೆಲ್ಲಿ? ವಿವರ ಇಲ್ಲಿದೆ
ಇದೇ ಪ್ರಕರಣ ಸಂಬಂಧ ಎನ್ಐಎ ನಿನ್ನೆ ಆರು ಕಡೆಗಳಲ್ಲಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಎನ್ಐಎ ಕೆಲವು ದಾಖಲೆಗಳು ಸೇರಿದಂತೆ, ಇಬ್ಬರು ಪರ್ಸನ್ಗಳನ್ನು ಲಿಫ್ಟ್ ಮಾಡಿದೆ. ಈ ಸಂಬಂಧ ನ್ಯೂಸ್ ಏಜೆನ್ಸಿಯೊಂದು ತನ್ನ ವರದಿಯಲ್ಲಿ ತಿಳಿಸಿರುವ ಪ್ರಕಾರ, ಬಂಧಿತರನ್ನು ರೆಶಾನ್ ತಾಜುದ್ದೀನ್ ಶೇಖ್ ಮತ್ತು ಹುಜೈರ್ ಫರ್ಹಾನ್ ಬೇಗ್ ಎಂದು ಗುರುತಿಸಲಾಗಿದೆ. ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ನ ಭಯೋತ್ಪಾದನಾ ಚಟುವಟಿಕೆಗಳನ್ನು ಮುಂದುವರಿಸಲು ಮತ್ತು ದೇಶದ ಏಕತೆ, ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಅಪಾಯವನ್ನುಂಟುಮಾಡಲು ಆರೋಪಿಗಳಿಂದ ಪಿತೂರಿ ನಡೆದಿರುವ ಆರೋಪದಡಿಯಲ್ಲಿ ಬಂಧಿಸಲಾಗಿದೆ.
BREAKING NEWS / ಎನ್ಐಎ ನಿಂದ ಶಿವಮೊಗ್ಗದಲ್ಲಿ ಮತ್ತೊಬ್ಬ ಶಂಕಿತನ ವಿಚಾರಣೆ ಪ್ರಕರಣ ಯಾವುದು? ಇಲ್ಲಿದೆ ಸ್ಟೋರಿ
ಗುಟ್ಟು ಬಿಟ್ಟುಕೊಟ್ಟನಾ ಮಾಜ್
ಇನ್ನೂ ಈ ಇಬ್ಬರ ಬಂಧನ ಕೂಡ ಮಾಜ್ನ ಬೆನ್ನಿಗೆ ಅಂಟಿಕೊಳ್ಳುತ್ತಿದ್ದು, ನ್ಯೂಸ್ ಏಜೆನ್ಸಿಯ ವರದಿ ಪ್ರಕಾರ, ಆರೋಪಿ ಮಾಜ್ ತನ್ನ ವಿಚಾರಣೆ ವೇಳೇ ಇಬ್ಬರು ಸಹಪಾಠಿಗಳ ಹೆಸರನ್ನು ಬಾಯ್ಬಿಟ್ಟಿದ್ಧಾನೆ. ತನ್ನ ಸಹಪಾಠಿಗಳಿಬ್ಬರನ್ನು ಈ ಕೃತ್ಯಗಳಿಗೆ ಮಾಜ್ ಪ್ರೇರಪಿಸಿದ್ದಾಗಿ ಎನ್ಐಎ ವಿಚಾರಣೆಯಲ್ಲಿ ಗೊತ್ತಾಗಿದೆ. ಮುಖ್ಯವಾಗಿ ರಶಾನ್ ಮತ್ತು ಫರ್ಹಾನ್, ಐಸಿಸ್ ಚಟುವಟಿಕೆಗಳಿಗಾಗಿ, ಐಸಿಸ್ ಹ್ಯಾಂಡ್ಲರ್ನಿಂದಲೇ ಹಣವನ್ನು ಕ್ರಿಪ್ರೋ ಕರೆನ್ಸಿ ಮೂಲಕ ಪಡೆದುಕೊಳ್ಳುತ್ತಿದ್ದರು ಎಂದು ಎನ್ಐಎ ಮೂಲಗಳು ನ್ಯೂಸ್ ಏಜೆನ್ಸಿಗೆ ತಿಳಿಸಿದೆಯಂತೆ. ಇನ್ನೂ ಭಯೋತ್ಪಾದನೆಯ ಕೃತ್ಯದ ಉದ್ದೇಶದೊಂದಿಗೆ. ಈ ಆರೋಪಿಗಳು, ವಿವಿಧ ವಾಹನಗಳು, ಮದ್ಯದ ಅಂಗಡಿಗಳು , ಗೋಡೌನ್ಗಳು ಹಾಗೂ ವಿದ್ಯುತ್ ಟ್ರಾನ್ಸಫಾರ್ಮ್ಗಳಿಗೆ ಬೆಂಕಿ ಹಚ್ಚುವ ಕುಕೃತ್ಯವೆಸಗುತ್ತಿದ್ದರು ಎಂಬ ಮಾಹಿತಿ ವಿಚಾರಣೆಯಲ್ಲಿ ಲಭ್ಯವಾಗಿದೆಯಂತೆ.
SADNEWS/ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಭೀಕರ ಅಪಘಾತ/ ಸಂತೆಗೆ ಹೋಗಿ ಬರ್ತಿದ್ದ ಇಬ್ಬರ ದುರ್ಮರಣ
