ಶಂಕಿತ ಚಟುವಟಿಕೆಗಳ ವಿಚಾರದಲ್ಲಿ ಶಿವಮೊಗ್ಗ ಇತ್ತೀಚೆಗೆ ತುಸು ತಣ್ಣಗಾಗಿತ್ತು. ಹೀಗಿರುವಾಗಲೇ ಶಿವಮೊಗ್ಗ ನಗರದಲ್ಲಿ ಮತ್ತೊಬ್ಬ ಯುವಕನನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿತ್ತು.
ಈ ಮಧ್ಯೆ ಸುದ್ದಿಯ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾಗಿದ್ದು, ಸಿಕ್ಕಿರುವ ಮಾಹಿತಿಯ ಪ್ರಕಾರ, ಎನ್ಇಎ ಅಧಿಕಾರಿಗಳ ತಂಡ ಶಿವಮೊಗ್ಗಕ್ಕೆ ಬಂದಿದ್ದು, ಯುವಕನನ್ನು ಎರಡು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ಧಾರೆ. ಎರಡು ಗಂಟೆಗಳ ವಿಚಾರಣೆ ನಡೆಸಿ ಅಲ್ಲಿಂದ ತೆರಳಿದ್ಧಾರೆ.
BREAKING NEWS/ ಮತ್ತೊಂದು ಜಲ ದುರಂತ/ ಅಬ್ಬೆ ಪಾಲ್ಸ್ನಲ್ಲಿ ಈಜಲು ಹೋಗಿ ತೀರ್ಥಹಳ್ಳಿ ಯುವಕ ಸಾವು
ಇದು ಶಿವಮೊಗ್ಗ ಪೊಲೀಸರ ಕಾರ್ಯಾಚರಣೆಯಲ್ಲ, ಬದಲಾಗಿ ಶಿವಮೊಗ್ಗಕ್ಕೆ ಬಂದಿರುವ ಎನ್ಇಎ ತನಿಖಾ ತಂಡ ನಡೆಸಿರುವ ಕಾರ್ಯಾಚರಣೆಯಾಗಿದೆ. ಶಿವಮೊಗ್ಗ ಪ್ರಮುಖ ಬಡಾವಣೆಯೊಂದರ ನಿವಾಸಿಯಾದ ಯುವಕನನ್ನ ಎನ್ಇಎ ತಂಡ ವಿಚಾರಣೆಗೆ ಒಳಪಡಿಸಿದೆ.
SADNEWS/ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಭೀಕರ ಅಪಘಾತ/ ಸಂತೆಗೆ ಹೋಗಿ ಬರ್ತಿದ್ದ ಇಬ್ಬರ ದುರ್ಮರಣ
ಈ ಯುವಕ ಇಂಜಿನಿಯರಿಂಗ್ ವಿದ್ಯಾರ್ಥಿ ಎಂಬುವ ಮಾಹಿತಿ ಲಭ್ಯವಾಗಿದ್ದು, ಪ್ರಕರಣ ಸಂಬಂಧ ಮಾಹಿತಿಯನ್ನು ಗೌಪ್ಯವಾಗಿ ಇರಿಸಲಾಗಿದೆ. ಇನ್ನೂ ಮಂಗಳೂರಿನ ಕುಕ್ಕರ್ ಬ್ಲಾಸ್ಟ್ ನ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ತಂಡ ಮಂಗಳೂರಿನಲ್ಲಿಯು ಕಾರ್ಯಾಚರಣೆ ನಡೆಸಿದೆ.
ಸೂಚನೆ: ಈ ಪ್ರಕರಣದ ಸುದ್ದಿ ಲಭ್ಯವಾದ ಸಂದರ್ಭದಲ್ಲಿ ಯುವಕನನ್ನು ವಶಕ್ಕೆ ಪಡೆಯಲಾಗಿತ್ತು ಎಂದು ವರದಿಯಾಗಿತ್ತು, ಇದೀಗ ಸುದ್ದಿಯ ಅಪ್ಡೇಟ್ ದೊರೆತಿದ್ದು, ಯುವಕನನ್ನು ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು, ಆ ನಂತರ ಅಲ್ಲಿಂದ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಒಟ್ಟಾರೆ ಎನ್ ಐಎ ತಂಡ ಶಿವಮೊಗ್ಗಕ್ಕೆ ಬಂದಿದ್ದು, ಈ ಬಗ್ಗೆ ಅಧಿಕೃತವಾದ ಮಾಹಿತಿ ಇನ್ನಷ್ಟೆ ಪೂರ್ಣವಾಗಿ ಸಿಗಬೇಕಿದೆ.
