ಶಿವಮೊಗ್ಗ ಜಿಲ್ಲಾ ಬಿಜೆಪಿಯಲ್ಲಿ ಮತ್ತೆ ಅಸಮಾಧಾನ ಸ್ಫೋಟಗೊಂಡಿದೆ. ಇತ್ತೀಚೆಗೆ ಸೊರಬ ಶಾಸಕರ ವಿರುದ್ಧ ಅಸಮಾಧಾನ ಹೊಗೆಯಾಡಿತ್ತು.
ಇದೀಗ ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ್ರವರ ವಿರುದ್ಧ ಅಸಮಾಧಾನ ಸ್ಫೋಟಗೊಂಡಿದೆ. ಅಲ್ಲದೆ ಈ ಸಂಬಂಧ ಮಹಿಳಾ ಜನಪ್ರತಿನಿದಿಯೊಬ್ಬರು ತಮ್ಮ ಅಳಲನ್ನು ಮುಖಂಡರಾದ ಆಯನೂರು ಮಂಜುನಾಥ್ ಹಾಗೂ ರುದ್ರೇಗೌಡರ ಎದುರೇ ತೋಡಿಕೊಂಡಿದ್ಧಾರೆ. ಅದರ ವಿಡಿಯೋ ವೈರಲ್ ಆಗಿದೆ.
ಅಗ್ನಿ ಆಕಸ್ಮಿಕ : ಅಂಗಡಿಗೆ ಬಿತ್ತು ಬೆಂಕಿ/ ಉಡುಗೊರೆ ತಯಾರಿಸುವ ಶಾಪ್ನಲ್ಲಿ 50 ಲಕ್ಷ ರೂಪಾಯಿಗೂ ಅಧಿಕ ನಷ್ಟ?
ಹಾರ್ನಹಳ್ಳಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ವಿಡಿಯೋ ಇದಾಗಿದೆ ಎನ್ನಲಾಗಿದೆ, ವಿಡಿಯೋದಲ್ಲಿ ಮಹಿಳೆ ಧರ್ಮಸ್ಥಳವೂ ಸೇರಿದಂತೆ ತನ್ನ ಮಕ್ಕಳ ಮೇಲೆ ಆಣೆ ಮಾಡಿದ್ದಾಗಿ ಪ್ರಸ್ತಾಪಿಸಿದ್ಧಾರೆ.
ಕೆಲಸದ ಸಮಾಚಾರ/ Job news/ ಕೆಲಸ ಹುಡುಕುತ್ತಿರೋರಿಗೆ ಇಲ್ಲಿದೆ ಗುಡ್ ನ್ಯೂಸ್/ ಶಿವಮೊಗ್ಗದಲ್ಲಿಯೇ ನಡೆಯಲಿದೆ JOB ಮೇಳ/ ವಿವರ ಇಲ್ಲಿದೆ, ವಿಷಯ ಎಲ್ಲರಿಗೂ ತಿಳಿಸಿ
ಅಲ್ಲದೆ ತಮ್ಮನ್ನ ಶಾಸಕರು ಕಡೆಗಣಿಸಿದ್ಧಾರೆ ಎಂದು ಆರೋಪಿಸಿದ್ಧಾರೆ. ವಿಡಿಯೋದಲ್ಲಿ ಮಹಿಳೆಯೇ ಹೇಳುವಂತೆ ಅವರು ಶಾರದಾ ರಂಗನಾಥ್ ಎಂಬವರಾಗಿದ್ದು, ಗ್ರಾಮ ಪಂಚಾಯಿತಿ ಒಂದರ ಅಧ್ಯಕ್ಷೆಯಾಗಿದ್ದಾರಂತೆ.
ಇದನ್ನು ಸಹ ಓದಿ : ಸಾರ್ವಜನಿಕರಲ್ಲಿ ವಿನಂತಿ/ ಇವತ್ತು ಶಿವಮೊಗ್ಗದ ಈ ಬಹುತೇಕ ಭಾಗಗಳಲ್ಲಿ ಕರೆಂಟ್ ಇರೋದಿಲ್ಲ/ ಎಲ್ಲೆಲ್ಲಿ ಓದಿ
ಇನ್ನೂ ಮಹಿಳಾ ನಾಯಕಿ ಮಾತನಾಡುವುದಕ್ಕೂ ಮೊದಲು ಇನ್ನೊಬ್ಬರು ಜನಪ್ರತಿನಿದಿ ಕೂಡ ಶಾಸಕ ಅಶೋಕ್ ನಾಯ್ಕ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.