ಇತ್ತೀಚೆಗಷ್ಟೆ ಶರಾವತಿ ಸಂತ್ರಸ್ತರನ್ನು ಕರೆದುಕೊಂಡು ಸಾಗರ ಶಾಸಕ ಹರತಾಳು ಹಾಲಪ್ಪನವರು ಧರ್ಮಸ್ಥಳಕ್ಕೆ ಹೋಗಿದ್ದರು. ಅಲ್ಲಿ ಮಂಜುನಾಥಸ್ವಾಮಿಯ ಸನ್ನಿಧಿಯಲ್ಲಿ ಮನವಿ ಪತ್ರಗಳನ್ನು ಇಟ್ಟು, ಸಂತ್ರಸ್ತರು ತಮ್ಮ ಸಮಸ್ಯೆಯನ್ನು ಇತ್ಯರ್ಥ ಪಡಿಸುವಂತೆ ಕೋರಿಕೆ ಸಲ್ಲಿಸಿದ್ದರು. ಈ ಸಂಬಂಧ ಟುಡೆಯಲ್ಲಿನ ವರದಿ ಇಲ್ಲಿದೆ : ಧರ್ಮಸ್ಥಳ ಮಂಜುನಾಥ ಸ್ವಾಮಿಯ ಮೊರೆ ಹೋದ ಶರಾವತಿ ಸಂತ್ರಸ್ತರು/ ದೇವರಿಗೆ ಮನವಿ ಸಲ್ಲಿಸಿ ಪೂಜೆ/ ಕೋರಿಕೆ
ಇದನ್ನು ಸಹ ಓದಿ : ಶಿವಮೊಗ್ಗಕ್ಕೆ ಭ್ರಷ್ಟರು ಎಸಿ ಆಗುವುದು ಬೇಡ/ ರಾಜ್ಯ ಸರ್ಕಾರಕ್ಕೆ ಒತ್ತಾಯ/ ಏನಿದು ಬೇಡಿಕೆ ವಿವರ ಇಲ್ಲಿದೆ ಓದಿ
ಈ ಸಂಬಂಧ ಇವತ್ತು ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಮಾಜಿ ಶಾಸಕ ಬೇಳೂರು ಗೋಪಾಲ ಕೃಷ್ಣರವರು ಶಾಸಕ ಹರತಾಳು ಹಾಲಪ್ಪರವರು ಮೊನ್ನೆ ಧರ್ಮಸ್ಥಳಕ್ಕೆ ಹೋಗಿದ್ದರು.. ಶರಾವತಿ ಸಂತ್ರಸ್ತರಿಗೆ ನ್ಯಾಯ ಕೇಳಲು ಹೋಗಿದ್ದರು. ಕಾಂತಾರ ಚಿತ್ರ ನೋಡಿದ ಮಹಿಮೆ ಇರಬೇಕು, ಸರ್ಕಾರದಿಂದ ಕೆಲಸ ಆಗದೆಂದು ದೇವರ ಮೊರೆ ಹೋಗಿದ್ದಾರೆ. ಹಾಗಿದ್ದರೆ ಈ ಸರ್ಕಾರ ಇರಬೇಕಾ ಎಂದು ಪ್ರಶ್ನಿಸಿದ್ರು.

ಅಲ್ಲದೆ, ದೇವರ ಬಳಿ ಹೋಗಿದ್ದಾರೆ ಅಂದ್ರೆ ಸರ್ಕಾರ ಇಲ್ಲ ಎಂದರ್ಥ ಎಂದು ವ್ಯಾಖ್ಯಾನಿಸಿದ್ರು.ಎರಡು ತಿಂಗಳು ಕಳೆದರೆ ಚುನಾವಣೆ ಬರುತ್ತೆ. ಸಂತ್ರಸ್ತರಿಗೆ ಇನ್ನೇನು ನ್ಯಾಯ ಕೊಡ್ತಾರೆ ಇವರು ಆಕ್ರೋಶ ಹೊರಹಾಕಿದ್ರು.
ಬಿಜೆಪಿಯಲ್ಲಿ ಭಿನ್ನಮತ
ಬಿಜೆಪಿಯಲ್ಲಿ ಭಿನ್ನಮತ ಈಗ ಶುರುವಾಗುತ್ತಿದೆ ಎಂದು ಆರೋಪಿಸಿದ ಬೇಳೂರು ಗೋಪಾಲಕೃಷ್ಣರವರು, ಬಿಎಸ್ ಯಡಿಯೂರಪ್ಪರವರ ಮಗನನ್ನು ರಾಜ್ಯ ರಾಜಕಾರಣಕ್ಕೆ ಬರಲು ಕೆ.ಎಸ್. ಈಶ್ವರಪ್ಪ ಮತ್ತು ಬಿ.ಎಲ್ ಸಂತೋಷ್, ಸಿ.ಟಿ. ರವಿ ಬಿಡುತ್ತಿಲ್ಲ ಎಂದು ದೂರಿದರು, ಇನ್ನೊಂದೆಡೆ ಈಶ್ವರಪ್ಪನವರು ತಾಳಿ ಕಟ್ಟಲು ಸಿದ್ದರಾಗಿದ್ದಾರೆ. ಅಲ್ಲದೆ ಕೈಯಲ್ಲಿ ತಾಳಿ ಹಿಡ್ಕೋಂಡೇ ಸಿಎಂ ಬಳಿ ಹೋಗ್ತಾರೆ. ಆದರೆ ಸಚಿವಗಿರಿ ಮಾತ್ರ ಸಿಕ್ತಿಲ್ಲ ಎಂದು ಟೀಕಿಸಿದರು..
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link
